ವಕ್ಫ್ ಸಚಿವ ಜಮೀರ್ ಅಹಮ್ಮದ್ ಬಂಟನೊಬ್ಬನಿಗೆ ಜನ ಗೂಸಾ ನೀಡಿದ್ದಾರೆ…!
ಬಡ್ಡಿ ದಂಧೆ ನಡೆಸುವ ಹಿದಾಯತ್ ಖಾನ್ ಗೂಸಾ ತಿಂದವ. ಈತ ಬಡ್ಡಿಕೊಡದಿದ್ದರೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ ಎಂದು ಹೇಳಲಾಗಿದೆ.
ಹಣದ ಅವಶ್ಯಕತೆ ಇದ್ದವರಿಗೆ ಶೇ.30ರಷ್ಟು ಬಡ್ಡಿ ಆಧಾರದಲ್ಲಿ ಸಾಕ ನೀಡ್ತಿದ್ದ. ಅದನ್ನು ಹಿಂದಿರುಗಿಸಲು ಆಗದೇ ಇದ್ದಾಗ ಮನೆಯ ಹೆಣ್ಣುಮಕ್ಕಳನ್ನು ತನ್ನ ಮನೆಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜಪೇಟೆಯ ಟಿಪ್ಪು ನಗರದ ವಾಸಿ ಆಗಿರೋ ಈ ಆರೋಪಿ ಅನೇಕ ಹೆಣ್ಣುಮಕ್ಕಳ ಜೀವನ ಹಾಳು ಮಾಡಿರುವ ಆರೋಪ ಕೇಳಿಬಂದಿದೆ.
ಈತನ ಬಗ್ಗೆ ಸಾನಿಯಾ ಖಾನ್ ಎಂಬ ಮಹಿಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.