ನಟ ರಘುಭಟ್ ಅವರು ಸುಗುಣ ಬಿ.ಸಿ ಅವರೊಂದಿಗೆ ಆಗಸ್ಟ್ 30 ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದು, ನಿನ್ನೆ (ಸೆ.5) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಿತು.
ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭಹಾರೈಸಿದರು.
ಅಂತಯೇ ಅನೇಕ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ನಟಿ ವಿನಯ ಪ್ರಸಾದ್, ಚಂದ್ರಿಕಾ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್, ವಿಕ್ರಂ ಸೂರಿ, ನಮಿತಾ , ದೀಪಿಕಾ ದಾಸ್ , ಗುಲ್ಟು ಖ್ಯಾತಿಯ ನವೀನ್ , ಶನಿ ಧಾರವಾಹಿ ಶಿವ ಖ್ಯಾತಿಯ ಅರ್ಜುನ್, ಕಿರಿಕ್ ಕೀರ್ತಿ, ದಿಶಾಪೂವಯ್ಯ ,ಪ್ರಜ್ವಲ್ ಪೂವಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಖ್ಯಾತ ಪತ್ರಕರ್ತರಾದ ಸುವರ್ಣ ನ್ಯೂಸ್ ನ ಜಯ ಪ್ರಕಾಶ್ ಶೆಟ್ಟಿ, ಟಿವಿ9 ನ ರಂಗನಾಥ್ ಭಾರದ್ವಜ್, ರಾಧಿಕಾ ರಾಣಿ, ಸುಕನ್ಯಾ ಸಂಪತ್, ರಾಜೇಶ್ ಶೆಟ್ಟಿ, ಅಮರ್ ಪ್ರಸಾದ್, ರಾಜ್ ನ್ಯೂಸ್ ನ ಹಮೀದ್ ಪಾಳ್ಯ, ಕಸ್ತೂರಿ ನ್ಯೂಸ್ ನ ಗೌರೀಶ್ ಅಕ್ಕಿ, ನ್ಯೂಸ್ 18 ನ ಅವಿನಾಶ್ ಯುವಾನ್, ಸೌಮ್ಯ ಮಳಲಿ, ಫಸ್ಟ್ ನ್ಯೂಸ್ ನ ಸೋಮಣ್ಣ ಮಾಚಿಮಾಡ, ಜಾಹ್ನವಿ ಮಹಡಿ ಸೇರಿದಂತೆ ಮಾಧ್ಯಮ ಕ್ಷೇತ್ರದ ಹಲವರು ಮತ್ತು ಎಂಎಲ್ ಸಿ ನಾರಯಣ ಸ್ವಾಮಿ ಸೇರಿದಂತೆ ಹತ್ತಾರು ರಾಜಕೀಯ ನಾಯಕರು ಆಗಮಿಸಿ ನವ ದಂಪತಿಗೆ ಶುಭಹಾರೈಸಿದರು.
ಸುಗುಣ ಬಿ.ಸಿ.ಅವರು ಎಂಕಾಂ ಪೂರೈಸಿದ್ದಾರೆ. ಮೂಲತಃ ನೆಲಮಂಗಲ ಮೂಲದವರಾದ ಸುಗುಣರವರು ಕಾರ್ಯಕ್ರಮವೊಂದರಲ್ಲಿ ರಘುಭಟ್ ಅವರಿಗೆ ಪರಿಚಿತರಾಗಿದ್ದು, ಪರಿಚಯ ಸ್ನೇಹ, ಸ್ನೇಹ ಪ್ರೀತಿಗೆ ತಿರಿಗಿ, ಕುಟುಂಬದ ಒಪ್ಪಿಗೆ ಪಡೆದು ನವಜೀವನ ಆರಂಭಿಸಿದ್ದಾರೆ.
ರಘುಭಟ್, ಕೃಷ್ಣ ಲೀಲೆ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಬಾಲ ನಟನಾಗಿ ಕಾಣಿಸಿಕೊಂಡಿದ್ದ ರಘುಭಟ್ ಈಗ ಹಂತಹಂತವಾಗಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.ರಾಮ ಕೃಷ್ಣ ಗೋವಿಂದ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಇವರು, ಆ ನಂತರ ತಾರೆ , ಪಾರು ವೈಫ್ ಆಫ್ ದೇವದಾಸ್, ರಘುವೀರ ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ತೆರೆಕಂಡ ಅನ್ವೇಷಿ, ಡ್ರೀಂಗರ್ಲ್, ಲವ್ ಯು 2, ಎಂಎಂಸಿಎಚ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ದಾದಾ ಈಸ್ ಬ್ಯಾಕ್ ಸಿನಿಮಾದಲ್ಲಿ ನೆಗಿಟೀವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ಬಕಾಸುರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.