No menu items!
6.3 C
Munich
Friday, May 1, 2026

ಹುಚ್ಚ ವೆಂಕಟ್ ಹುಚ್ಚಾಟ

Must read

ಹುಚ್ಚಾಟದಿಂದಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ತನ್ನ ಹುಚ್ಚಾಟವನ್ನು ನಿಲ್ಲಿಸುವ ಸೂಚನೆ ಇಲ್ಲ.
ರಸ್ತೆಯಲ್ಲಿ ಕುಡಿದು ತೂರಾಡಿರುವ ವೆಂಕಟ್, ಹತ್ತಿರದ ಬೇಕರಿಯೊಂದರಲ್ಲಿ ಸೋಡಾ ಮತ್ತು‌ ಕೋಲಾ ಕೇಳಿ ಗಲಾಟೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.
ಬೇಕರಿ ಬಳಿ ಇದ್ದವರು ಸೆಲ್ಫಿ ತೆಗೆದುಕೊಳ್ಳಲು ಹೋದಾಗ ವೆಂಕಟ್ ಗಲಾಟೆ ಮಾಡಿದ್ದೂ ಅಲ್ಲದೆ ಹಲ್ಲೆ ನಡೆಸಿದ್ದಾನೆ.
ಸ್ತಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಬ್ಯಾಡರಹಳ್ಳಿ ಪೊಲೀಸರು ಹುಚ್ಚ ವೆಂಕಟ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

#huchhavenkat #ಹುಚ್ಚವೆಂಕಟ್ಬೇಕರಿಯ ಮುಂದೆ ಹುಚ್ಚ ವೆಂಕಟ್‌ನ ಅವತಾರ ನೋಡಿHuchha venkatWatch full video here : https://youtu.be/2DHqm–zYBQhttps://youtu.be/2DHqm–zYBQ

Posted by Kannada world on Thursday, September 6, 2018

ವೆಂಕಟ್ ಬರೀ ವಿವಾದ , ಹುಚ್ಚಾಟದಿಂದಲೇ ಗುರುತಿಸಿಕೊಂಡಾತ.
ನಟಿ ರಮ್ಯಾ ಅವರನ್ನು ಮದ್ವೆ ಆಗಿದ್ದೇನೆ ಎಂದಿದ್ದ ವೆಂಕಟ್ ಬಳಿಕ ಬೇರೆ ಬೇರೆ ಹುಡುಗಿಯರ ವಿಚಾರದಲ್ಲೂ ಇದೇ ರೀತಿ ಹೇಳಿಕೆ ನೀಡಿದ್ದ.‌ ಬಿಗ್ ಬಾಸ್ ಮನೆಯಲ್ಲೂ ನೆಟ್ಟಗಿರದೆ ಸಹ ಸ್ಪರ್ಧಿ ಮೇಲೆ ಹಲ್ಲೆ ನಡೆಸಿ ಮನೆಯಿಂದ ಕಿಕ್ ಔಟ್ ಆಗಿದ್ದ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನೂ ಸಹ ಸ್ಮರಿಸಬಹುದು. ಚುನಾವಣೆಯಲ್ಲಿ ‘ಚಪ್ಪಲಿ’ ಅವರ ಗುರುತಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article