No menu items!
11.1 C
Munich
Wednesday, April 29, 2026

ಒಂದೇ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆಯಾದಳು..! 500 ರೂಪಾಯಿಯಲ್ಲಿ ಮುಗಿದುಹೋಯಿತು ಮಾದರಿ ಮದುವೆ..!

Must read

ಆಕೆ ವರದಕ್ಷಿಣೆ ಎಂದರೆ ಕೆರಳುತ್ತಾಳೆ. ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಮಹಾನ್ ಅಪರಾಧ ಎನ್ನುತ್ತಾಳೆ. ಆದ್ದರಿಂದ ತನ್ನ ಮದುವೆ ಯಾವುದೇ ಖರ್ಚಿಲ್ಲದೇ ನಡೆಯಬೇಕು ಎಂಬುದು ಆಕೆಯ ಆಸೆಯಾಗಿತ್ತು. ಆದರೆ ಆಕೆಯನ್ನು ನೋಡಿದ ಗ್ರಾಮಸ್ಥರು, ವರದಕ್ಷಿಣೆ ನೀಡದಿದ್ದರೆ ಈ ಹುಡುಗಿಗೆ ಮದುವೆಯೇ ಆಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಹುಡುಗಿ ಕೇವಲ 1 ರೂಪಾಯಿ ವರದಕ್ಷಿಣೆ ನೀಡಿ ಮದುವೆಯಾಗಿದ್ದಾಳೆ..!
ಯೆಸ್.. ಬಿಕಾಂ ಪದವಿ ಪಡೆದಿರುವ ಮೋನಿಕಾ ಎಂಬ ಹುಡುಗಿ ತನ್ನ ತಂದೆ-ತಾಯಿಯರು ವರದಕ್ಷಿಣೆ ನೀಡಿದರೆ ಮದುವೆಯೇ ಆಗುವುದಿಲ್ಲ ಎಂದು ಹಟ ಹಿಡಿದಿದ್ದಳು. ಅದೇ ವೇಳೆಗೆ ಪಂಜಾಬ್ ನ ಜೀರಕ್ ಪುರದ ಒಂದು ಕುಟುಂಬವೂ ಕೂಡಾ ವರದಕ್ಷಿಣೆ ಪಡೆಯದೇ ತನ್ನ ಮಗನ ಮದುವೆ ಮಾಡುವುದಾಗಿ ಮೋನಿಕಾಳ ಹೆತ್ತವರ ಬಳಿ ಕೇಳಿತು. ಅದಕ್ಕೆ ಮೋನಿಕಾಳ ಕುಟುಂಬವೂ ಸಮ್ಮತಿ ಸೂಚಿಸಿತು.
ಇತ್ತೀಚೆಗೆ ಗುರುದ್ವಾರವೊಂದರಲ್ಲಿ 20 ಸದಸ್ಯರ ಸಮ್ಮುಖದಲ್ಲಿ ಮೋನಿಕಾಳ ಮದುವೆ ಜರುಗಿತು. ಮದುವೆಯ ನಂತರ ದೊಡ್ಡ ಮೆರವಣಿಗೆಯಾಗಲೀ, ಬ್ಯಾಂಡ್ ಬಾಜಾಗಳನ್ನಾಗಲೀ ಬಳಸಲಿಲ್ಲ. ದೊಡ್ಡ ಮಟ್ಟದಲ್ಲಿ ಊಟವನ್ನೂ ಹಾಕಿಸಲಿಲ್ಲ. ಬದಲಿಗೆ ಸ್ವೀಟ್ ಹಂಚಿ, ಮದುವೆ ಮಾಡಲಾಯಿತು..! ಇಷ್ಟಕ್ಕೂ ಈ ಮದುವೆಗೆ ಮಾಡಲಾದ ಖರ್ಚು ಕೇವಲ 500 ರೂಪಾಯಿ..!
ಮೋನಿಕಾಳ ಈ ದಿಟ್ಟ ನಿರ್ಧಾರವನ್ನು ನೋಡಿ ಅದೆಷ್ಟೋ ಹೆಣ್ಣುಮಕ್ಕಳು ಪಾಠ ಕಲಿಯಬೇಕಿದೆ..! ಸಮಾಜಕ್ಕಂಟಿದ ವರದಕ್ಷಿಣೆ ಎಂಬ ಕೊಳಕನ್ನು ಹೊಡೆದೋಡಿಸಬೇಕಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

ಈತ ಬರೋಬ್ಬರಿ 800ಕ್ಕೂ ಹೆಚ್ಚು ಮಕ್ಕಳ ತಂದೆ..! ಈತನ ದಾಖಲೆ ಕಂಡು ಕೌರವರೇ ಬೆಚ್ಚಿಬಿದ್ದರು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article