ದುನಿಯಾ ವಿಜಯ್, ಸ್ಯಾಂಡಲ್ ವುಡ್ ನ ಬ್ಯಾಡ್ ಬಾಯ್! ಯಸ್ ಬ್ಯಾಡ್ ಬಾಯ್…! ಕನ್ನಡ ಸಿನಿಮಾ ರಂಗದಲ್ಲಿ ಈ ಪಟ್ಟ ಇಷ್ಟು ದಿನ ಯಾರಿಗೂ ಸಿಕ್ಕಿರಲಿಲ್ಲ. ಇಷ್ಟು ವರ್ಷ ಕಾಲಿ ಇದ್ದ ಈ ಜಾಗವನ್ನು ಅಚ್ಚುಕಟ್ಟಾಗಿ ತುಂಬಿದ್ದಾರೆ ದುನಿಯಾ ವಿಜಯ್.
ರೀಲ್ ಲೈಫ್ ನಲ್ಲಿ ಹೀರೋಯಿಸಂ ತೋರಿಸಿದ್ದ ವಿಜಿ ತಾನು ರೀಲ್ ನಲ್ಲಿ ಪಕ್ಕಾ ರೌಡಿ…ಪುಡಾರಿ, ಪುಂಡ ಅಂತ ಸಾಬೀತು ಪಡಿಸಿ ಜೈಲೂಟ ತಿಂತಿರೋದು ಗೊತ್ತೇ ಇದೆ.
ಒಬ್ಬ ಸಿನಿಮಾ ಹೀರೋ ಅನ್ನು ಅವನ ಫ್ಯಾನ್ಸ್ ಫಾಲೋ ಮಾಡ್ತಾರೆ… ಆದ್ರಿಂದ ಅವರು ಮಾದರಿಯಂತಿರಬೇಕು.ಯೋಗ್ಯತೆಗೆ ನಿಯತ್ತಾಗಿ ಇಲ್ದೇ ಇದ್ರೂ ನೋಡೋರ ಕಣ್ಣಿಗಾದ್ರೂ ಸಾಚಾ ಆಗಿರ್ಬೇಕು. ಆದ್ರೆ ಈ ವಿಜಯ್ ಪಕ್ಕಾ ಪೋಲಿ, ರೌಡಿ ಅಂತ ಜಗಜ್ಜಾಹಿರ ಗೊಳಿಸಿಬಿಟ್ಟಿದ್ದಾರೆ.
ಮಾಡಿದ್ದುಣ್ಣೋ ಮಹರಾಯ ಎಂಬಂತೆ ದುನಿಯಾ ವಿಜಯ್ ಗೆ ಜೈಲೇ ಗತಿಯಾಗಿದೆ. ಮಾರುತಿ ಗೌಡ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸುತ್ತಿರೋ ರೌಡಿ ವಿಜಯ್ ಗೆ ಬೇಲ್ ಸಿಕ್ಕಿಲ್ಲ. ಮಾರುತಿ ಗೌಡ ಆಸ್ಪತ್ರೆಯಲ್ಲಿನ್ನೂ ಚಿಕಿತ್ಸೆಪಡೆಯುತ್ತಿದ್ದು, ಅವರ ಗಾಯದ ಗಂಭೀರತೆ ದುನಿಯಾ ವಿಜಯ್ ನಿದ್ರೆ ಗೆಡಿಸಿದೆ! ವಿಜಿ ಹೊರಗೆ ಬಂದ್ರೆ ಸಾಕ್ಷಿ ನಾಶ ಮಾಡೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಇವರಿಗೆ ಬೇಲ್ ಸಿಗುತ್ತಿಲ್ಲ.