No menu items!
9.3 C
Munich
Wednesday, April 29, 2026

‘ವಿಲನ್’ – ‘ಹೀರೋ’ ಅಂತ ಗಲಾಟೆ ಮಾಡಿದ್ರೆ ತಾಯಣೆಗೂ ಚಿತ್ರಮಂದಿರಕ್ಕೆ ಕಾಲಿಡಲ್ಲ…!

Must read

ಇದೇ ಅಕ್ಟೋಬರ್ 18 ರಂದು ಬಹು ನಿರೀಕ್ಷಿತ ‘ದಿ ವಿಲನ್ ‘ ಸಿನಿಮಾ ವಿಶ್ವಾದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅಕ್ಟೋಬರ್ 11ರಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ.

 

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ , ಪ್ರೇಮ್ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಿದೆ‌‌.
ಟೀಸರ್ ಹೊರಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಲನ್,‌ಹೀರೋ ಎಂಬ ಅಗತ್ಯ ಚರ್ಚೆಗಳು ಆಗುತ್ತಿವೆ.‌ ಇದನ್ನು ಗಮನಿಸಿರುವ ಶಿವಣ್ಣ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ಅಂದ್ರೆ ಅದು ಸಿನಿಮಾವಷ್ಟೇ. ಅದನ್ನ ಸಿನಿಮಾ ರೂಪದಲ್ಲಿಯೇ ನೋಡಿ. ಅದು ಬಿಟ್ಟು ವಿಲನ್‌ ಅಥವಾ ಹೀರೋ ಹೋಲಿಕೆಯಲ್ಲಿ ಅವ್ನಾ, ಇವ್ನಾ ಅಂತೆಲ್ಲ ಗಲಾಟೆ ಮಾಡಿದ್ರೆ, ನನ್‌ ತಾಯಿ ಆಣೆಗೂ ನಾನು ಚಿತ್ರಮಂದಿರಕ್ಕೆ ಕಾಲಿಡೋದಿಲ್ಲ ಅಂತ ಶಿವಣ್ಣ ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.
ಯಾವುದೇ ಸಿನಿಮಾದಲ್ಲಿನ ಇಬ್ಬರ ನಟರ ಅಭಿನಯವನ್ನು ವೈಯಕ್ತಿಕ ಬದುಕಿಗೆ ಎಳೆತಂದು ಅನಗತ್ಯ ವಿವಾದ ಎಬ್ಬಿಸುವುದು ಸರಿಯಲ್ಲ. ಹಾಗೆ ಮಾಡಿದರೆ, ನಾನೆಂದಿಗೂ ಚಿತ್ರಮಂದಿರಕ್ಕೆ ಕಾಲಿಡುವುದಿಲ್ಲ. ಸಿನಿಮಾವನ್ನು ಸಿನಿಮಾದ ರೂಪದಲ್ಲಿಯೇ ನೋಡಿ. ಹಾಗೊಂದು ವೇಳೆ ಗಲಾಟೆ ಮಾಡುವುದಾದರೆ ತಾಯಿ ಮೇಲಾಣೆ, ನಾನು ಚಿತ್ರಮಂದಿರಕ್ಕೆ ಬಂದು ನಿಮ್ಮೊಂದಿಗೆ ಚಿತ್ರ ನೋಡುವುದಿಲ್ಲ’ ಎಂದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article