No menu items!
11.1 C
Munich
Wednesday, April 29, 2026

ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ ದುಬಾರಿ ಕಾರುಗಳು..! ಮಳೆ ಎಫೆಕ್ಟ್ ನಿಂದ ಕಡಿಮೆಯಾಗಿದೆ ಕಾರುಗಳ ಬೆಲೆ ..!

Must read

ಹೆಚ್ಚೆಚ್ಚು ಮಳೆ ಬಂದು ಬೆಳೆ ಹಾನಿಯಾಗುವುದರಿಂದ ಫಸಲು ಹಾಳಾಗುತ್ತದೆ. ಆದ್ದರಿಂದ ಅದರ ಬೆಲೆ ಕುಗ್ಗುತ್ತದೆ. ಆದರೆ ಅದೇ ಮಳೆ ಬಂದಿದ್ದರಿಂದ ಮರ್ಸಿಡೀಸ್ ಬೆಂಝ್, ಬಿಎಂಡಬ್ಲ್ಯೂ, ಜಾಗ್ವಾರ್, ಪೋರ್ಷ್, ಬೆಂಟ್ಲೆ ಸೇರಿದಂತೆ ಪ್ರತಿಷ್ಟಿತ ಕಂಪನಿಗಳ ಕಾರುಗಳು ಕಡಿಮೆ ಬೆಲೆಗೆ ಮಾರಾಟವಾಗುವುದನ್ನು ಯಾರೂ ಕೂಡಾ ಕಂಡಿರುವುದಿಲ್ಲ. ಆದರೆ ಚೆನ್ನೈನ ಜನರು ಮಾತ್ರ ಅದನ್ನು ಕಂಡಿದ್ದಾರೆ. ವಿಲಾಸಿ ಕಾರುಗಳನ್ನು ಖರೀದಿಸುತ್ತಿದ್ದಾರೆ..!
ಯೆಸ್.. ಚೆನ್ನೈಗೆ ಇತ್ತೀಚೆಗೆ ಚಂಡಮಾರುತ ಅಪ್ಪಳಿಸಿದ್ದು, ಅದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಇತಿಹಾಸ. ಆದರೆ ಪ್ರವಾಹದಿಂದಾಗಿ ಮರ್ಸಿಡೀಸ್ ಬೆಂಝ್, ಬಿಎಂಡಬ್ಲ್ಯೂ, ಜಾಗ್ವಾರ್, ಪೋರ್ಷ್, ಬೆಂಟ್ಲೆ ಸೇರಿದಂತೆ ಪ್ರತಿಷ್ಟಿತ ಕಂಪನಿಗಳ ಕಾರುಗಳಿಗೆ ಹಾನಿಯಾಗಿತ್ತು. ಮಳೆಯ ನೀರಿನಲ್ಲಿ ನಿಂತಿದ್ದ ಕಾರುಗಳು ಹಾಳಾಗಿದ್ದವು. ಆದ್ದರಿಂದ ಆ ಕಾರುಗಳು ಇದೀಗ ಕೆಲವು ಲಕ್ಷ ರೂಪಾಯಿ ಬೆಲೆಗೆ ಮಾರಾಟವಾಗುತ್ತಿವೆ..!

car3_1453446251
ಮಳೆಯಿಂದಾಗಿ ಈ ಕಾರುಗಳಿಗೆ ಹೇಳಿಕೊಳ್ಳುವಂತಹ ಹಾನಿಯೇನೂ ಆಗಿರುವುದಿಲ್ಲ. ಬದಲಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಸಾಕು ಆ ಕಾರುಗಳು ಮೊದಲಿನಂತಾಗುತ್ತವೆ..! ಈ ವಿಷಯ ತಿಳಿದ ಜನರು ವಿವಿಧೆಡೆಯಿಂದ ಬಂದು ಕಾರು ಖರೀದಿಸಲು ಮುಂದಾಗುತ್ತಿದ್ದಾರೆ.
ಇನ್ನು ಕಾರುಗಳ ಬೆಲೆಯನ್ನು ಗಮನಿಸುವುದಾದರೆ ಬಿಎಂಡಬ್ಲ್ಯೂ 3 ಸೀರಿಸ್ ಕಾರು 6 ಲಕ್ಷಕ್ಕೆ ಲಭ್ಯವಾಗುತ್ತಿದೆ..! ಆಡಿ ಎ4 2015ರ ಮಾಡೆಲ್ ನ ಕಾರ್ ನ ಬೆಲೆ ಕೇವಲ 3.4 ಲಕ್ಷ ರೂಪಾಯಿ..! ಇನ್ನು ಕೋಟಿ ಬೆಲೆ ಬಾಳುವ ಪೋರ್ಶ್ ಕಯೇನೆ ಕಾರಿನ ಬೆಲೆ ಕೇವಲ 5 ಲಕ್ಷ..!

 

volvo_1453446332
10,000ಕ್ಕೂ ಹೆಚ್ಚು ಕಾರುಗಳು 40%ಗೂ ಹೆಚ್ಚು ಡಿಸ್ಕೌಂಟ್ ನಲ್ಲಿ ಮಾರಾಟವಾಗುತ್ತಿರುವುದು ವಿಶೇಷ. ಅಲ್ಲದೇ ಕೆಲ ಡೀಲರ್ ಗಳು ಹಾಗೂ ಇನ್ಶೂರೆನ್ಸ್ ಕಂಪನಿಗಳು ಹೇಳುವ ಪ್ರಕಾರ ಸುಮಾರು 30,000ಕ್ಕೂ ಹೆಚ್ಚು ಕಾರುಗಳು ಹಾನಿಗೀಡಾಗಿವೆಯಂತೆ..!
ವಿಲಾಸಿ ಕಾರುಗಳನ್ನು ಖರೀದಿಸುವ ಆಸೆಯುಳ್ಳವರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಚೆನ್ನೈನತ್ತ ತೆರಳುತ್ತಿದ್ದಾರೆ. ಆದ್ದರಿಂದ ಈ ದುಬಾರಿ ಕಾರುಗಳು ಕೆಲವೇ ದಿನಗಳ ಅಂತರದಲ್ಲಿ ಮಾರಾಟವಾದರೆ ಅಚ್ಚರಿಯಿಲ್ಲ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article