No menu items!
9.3 C
Munich
Wednesday, April 29, 2026

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

Must read

ಜನಪ್ರಿಯ ಗಾಯಕರೊಬ್ಬರು ವಿಮಾನವನ್ನೇರಿ ಪ್ರಯಾಣ ಬೆಳಸಿರ್ತಾರೆ..! ಅಲ್ಲಿನ ಸಹ ಪ್ರಯಾಣಿಕರೆಲ್ಲಾ ಈ ಹಾಡುಗಾರನ ಅಭಿಮಾನಿಗಳು..! ದೂರದಲ್ಲೆಲ್ಲೋ ಹಾಡನ್ನು ಕೇಳಿ ಖುಷಿಪಡೋ ಜನ, ಆ ಸಂಗೀತಗಾರ ಜೊತೆಗೇ ಪ್ರಯಾಣಿಸುತ್ತಿದ್ದರೆ ಸುಮ್ಮನೇ ಕೂರ್ತಾರೆಯೇ? ಚಾನ್ಸೇ ಇಲ್ಲ..! ಹಾಡಿ ಹಾಡಿ ಎಂದು ಕಾಟ ಕೊಡ್ತಾರೆ..! ಅವರ ಅಭಿಮಾನಕ್ಕೆ ತಲೆಬಾಗಿ ಆ ಗಾಯಕ ಹಾಡಲು ತಯಾರಾಗ್ತಾರೆ..! ಆ ವಿಮಾನದ ಗಗನ ಸಖಿಯರು ಫ್ಲೈಟ್ ನಲ್ಲಿದ್ದ ಅನೌನ್ಸ್ಮೆಂಟ್ ಸಿಸ್ಟಮ್ ಅನ್ನು ಆ ಜನಪ್ರಿಯ ಹಾಡುಗಾರನಿಗೆ ಹಾಡಲೆಂದು ಬಿಟ್ಟು ಕೊಟ್ಟು, ಅವರೂ ಅಭಿಮಾನವನ್ನು ಮೆರೆಯುತ್ತಾರೆ..! ಪರಿಣಾಮ ಕೆಲಸದಿಂದ ಅಮಾನತುಗೊಳ್ಳುತ್ತಾರೆ..! ಇದು ಯಾವುದೇ ಸಿನಿಮಾದಲ್ಲಿ ಬರುವ ದೃಶ್ಯವಲ್ಲ..!
ಇದು ನಿಜವಾದ ಘಟನೆ, ಆ ಜನಪ್ರಿಯ ಹಾಡುಗಾರ ಸೋನು ನಿಗಮ್. ಅಮಾನತು ಗೊಂಡ ಗಗನ ಸಖಿಯರು ಜೆಟ್ ಏರ್ವೆಸ್ನವರು..!
ಯಸ್, ವಿಮಾನದ ಅನೌನ್ಸ್ಮೆಂಟ್ ಸಿಸ್ಟಮ್ (ವಿಮಾನದ ಘೋಷಣಾ ವ್ಯವಸ್ಥೆ) ಮೂಲಕ ಸೋನುನಿಗಮ್ ಗೆ ಹಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಜೆಟ್ ಏರ್ವೆಸ್ನ ಐದು ಜನ ಗಗನಸಖಿಯರು ಅಮಾನತು ಗೊಂಡಿದ್ದಾರೆ.
ಜನವರಿ 4ನೇ ತಾರೀಖು ಜೋಧ್ಪುರ-ಮುಂಬೈ ಚಾರ್ಟರ್ಡ್ ವಿಮಾನದಲ್ಲಿ ಸೋನುನಿಗಮ್ ಪ್ರಯಾಣಿಸುತ್ತಿದ್ದರು. ಅಲ್ಲಿ ಪರಿಚಯವಾದ ಪ್ರಯಾಣಿಕರ ಒತ್ತಾಯದ ಮೇರೆಗೆ ಸೋನುನಿಗಮ್ ಎರಡು ಹಾಡುಗಳನ್ನಾಡಿದರು. ಮೀರಾಜಾರ ಸಿನಿಮಾದ ದೋ ಪಾಲ್ ರೂಕ ಮತ್ತು ರೆಫ್ಯೂಜಿ ಚಿತ್ರದ ಪಂಚಿ ನಾದಿಯಾ ಹಾಡನ್ನು ಸೋನು ನಿಗಮ್ ಹಾಡಿದ್ದರು. ಇವರಿಗೆ ಪ್ರಯಾಣಿಕರೂ ದನಿಗೂಡಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ವಿಮಾನಯಾನದ ಮಹಾನಿರ್ದೇಶಕರು ವಿಮಾನ ವ್ಯವಸ್ಥೆಯ ದುರ್ಬಳಕೆ ಎಂದು ಪರಿಗಣಿಸಿ, ಇದಕ್ಕೆ ಅವಕಾಶ ಮಾಡಿಕೊಟ್ಟ ತಪ್ಪಿಗಾಗಿ 5 ಮಂದಿ ಗಗನಸಖಿಯರನ್ನು ಅಮಾನತು ಮಾಡಿದ್ದಾರೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೈದರಾಬಾದ್ ನ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಫೋಟೋ

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article