No menu items!
10.8 C
Munich
Wednesday, April 29, 2026

2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಸಂಚಾರಿ ವಿಜಯ್ ಅತ್ಯುತ್ತಮ ನಟ..!

Must read

2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು’ ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹರಿವು ಸಿನಿಮಾ ಪ್ರಥಮ ಅತ್ಯುತ್ತಮ ಸಿನಿಮಾವಾಗಿ ಆಯ್ಕೆಯಾಗಿದೆ. ದ್ವಿತೀಯ ಅತ್ಯುತ್ತಮ ಸಿನಿಮಾವಾಗಿ ಅಭಿಮನ್ಯು ಸಿನಿಮಾ ಮತ್ತು ಮೂರನೇ ಅತ್ಯುತ್ತಮ ಸಿನಿಮಾವಾಗಿ ಹಗ್ಗದ ಕೊನೆ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇನ್ನುಳಿದಂತೆ ಪ್ರಥಮ ನಿದರ್ೇಶನದ ಅತ್ಯುತ್ತಮ ಚಿತ್ರವಾಗಿ ಉಳಿದವರು ಕಂಡಂತೆ, ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಗಜಕೇಸರಿ, ಅತ್ಯುತ್ತಮ ಪ್ರಾದೇಶಿಕ ಸಿನಿಮಾವಾಗಿ ವಿಷದ ಮಳೆ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ವಿದಾಯ ಚಿತ್ರದ ನಟೆನೆಗಾಗಿ ಲಕ್ಷ್ಮೀ ಗೋಸ್ವಾಮಿ ಉತ್ತಮ ನಟಿ ಪ್ರಶಸ್ತಿಗೆ ಭಾಜರಾಗಿದ್ದಾರೆ. ಪುಟ್ಟಣ್ಣ ಕಣಗಲ್ ಪ್ರಶಸ್ತಿ ಬರಗೂರು ರಾಮಚಂದ್ರಪ್ಪನವರಿಗೆ, ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಬಸಂತ್ ಕುಮಾರ್ ಪಾಟೀಲ್ ಆಯ್ಕೆಯಾಗಿದ್ದಾರೆ. ಸಂಕಲಗಾರ ಸುರೇಶ್ ಅರಸ್ ವಿಷ್ಣುವರ್ಧನ್ ಪ್ರಶಸ್ತಿಗೂ, ಕೌದಿ ಚಿತ್ರದ ನಟನೆಗೆ ಡಾ. ಬಿ ಜಯಶ್ರೀ ಪೋಷಕ ನಟಿ ಪ್ರಶಸ್ತಿಗೂ ಪರಿಗಣಿಸಲ್ಪಟ್ಟಿದ್ದಾರೆ. ಅತ್ಯುತ್ತಮ ಕಥೆ ಲಿವಿಂಗ್ ಸ್ಮೈಲ್ ವಿದ್ಯಾ, ಅತ್ಯುತ್ತಮ ಚಿತ್ರಕಥೆ ಪಿ. ಶೇಷಾದ್ರಿ (ವಿದಾಯ ಚಿತ್ರಕ್ಕೆ) ಹಾಗೂ ಅತ್ಯುತ್ತಮ ಗೀತರಚನೆಗೆ ಹುಲಿಕುಂಟೆ ಮೂರ್ತಿ (ಕೌದಿ ಚಿತ್ರ) ಆಯ್ಕೆ ಮಾಡಲ್ಪಟ್ಟಿದ್ದಾರೆ.
ಶಿವರುದ್ರಯ್ಯ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಹೀಗೆ ಒಟ್ಟು 29 ವಿಭಾಗಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. ಈ ವಿಚಾರವನ್ನು ವಾರ್ತಾ ಇಲಾಖೆ ಸಚಿವ ಆರ್ ರೋಷನ್ ಬೇಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಶಸ್ತಿ ಪಟ್ಟಿ
ಪ್ರಥಮ ಅತ್ಯುತ್ತಮ ಚಿತ್ರ – ಹರಿವು
ಎರಡನೇ ಅತ್ಯುತ್ತಮ ಚಿತ್ರ – ಅಭಿಮನ್ಯು
ಮೂರನೇ ಅತ್ಯುತ್ತಮ ಚಿತ್ರ – ಹಗ್ಗದ ಕೊನೆ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ – ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ(ತುಳು)
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಗಜಕೇಸರಿ
ಅತ್ಯುತ್ತಮ ಮಕ್ಕಳ ಚಿತ್ರ – ಬಾನಾಡಿ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಉಳಿದವರು ಕಂಡಂತೆ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ವಿಷದ ಮಳೆ
ಅತ್ಯುತ್ತಮ ಪೋಷಕ ನಟ – ಅರುಣ್ ದೇವಸ್ಯ
ಅತ್ಯುತ್ತಮ ಪೋಷಕ ನಟಿ – ಬಿ.ಜಯಶ್ರೀ
ಅತ್ಯುತ್ತಮ ಕಥೆ – ಲಿವಿಂಗ್ ಸ್ಮೈಲ್ ವಿದ್ಯಾ, ನಾನು ಅವನಲ್ಲ ಅವಳು
ಅತ್ಯುತ್ತಮ ಚಿತ್ರಕತೆ- ಪಿ.ಶೇಷಾದ್ರಿ, ವಿದಾಯ
ಅತ್ಯುತ್ತಮ ಸಂಭಾಷಣೆ – ಬಿ.ಎಲ್.ವೇಣು, ತಿಪ್ಪಜ್ಜಿ ಸರ್ಕಲ್
ಅತ್ಯುತ್ತಮ ಛಾಯಾಗ್ರಹಣ – ಸತ್ಯ ಹೆಗಡೆ, ರಾಟೆ
ಅತ್ಯುತ್ತಮ ಸಂಗೀತ ನಿರ್ದೇಶ – ಬಿ.ಅಜನೀಶ್ ಲೋಕನಾಥ್
ಅತ್ಯುತ್ತಮ ಸಂಕಲನ – ಶ್ರೀಕಾಂತ್, ಉಗ್ರಂ
ಅತ್ಯುತ್ತಮ ಬಾಲನ ನಟ – ಮಾಸ್ಟರ್ ಸ್ನೇಹಿತ, ಸಚಿನ್ ತೆಂಡೂಲ್ಕರ್ ಅಲ್ಲ
ಅತ್ಯುತ್ತಮ ಬಾಲ ನಟಿ – ಲಹರಿ, ಆಟ- ಪಾಠ
ಅತ್ಯುತ್ತಮ ಕಲಾ ನಿರ್ದೇಶನ – ಚಂದ್ರಕಾಂತ್, 143- ನೂರಾನಲವತ್ಮೂರು
ಅತ್ಯುತ್ತಮ ಗೀತ ರಚನೆ – ಹುಲಿಕುಂಟೆ ಮೂರ್ತಿ, ಕೌದಿ
ಅತ್ಯುತ್ತಮ ಹಿನ್ನೆಲೆ ಗಾಯಕ – ಚಿಂತನ್, ಗಜಕೇಸರಿ
ಅತ್ಯುತ್ತಮ ಗಾಯಕಿ – ವಿದ್ಯಾ ಮೋಹನ್, ಸಚಿನ್ ತೆಂಡೂಲ್ಕರ್ ಅಲ್ಲ
ತೀರ್ಪುಗಾರರ ವಿಶೇಷ ಪ್ರಶಸ್ತಿ – ಜ್ಯೋತಿರಾಜ್, ವಿಭಾಗ – ಸಾಹಸ, ಚಿತ್ರ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article