ಒಡಿಶಾ ಅಸೆಂಬ್ಲಿ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ತೃತೀಯಲಿಂಗಿ ಒಬ್ಬರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
27 ವರ್ಷದ ಕಾಜಲ್ ನಾಯಕ್ ಬಿಎಸ್ ಪಿಯಿಂದ ಕಣಕ್ಕಿಳಿದಿರುವ ಟ್ರಾನ್ಸ್ ಜಂಡರ್. ಅವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ.
ಜಾಜ್ಪುರ ಜಿಲ್ಲೆ ಕೊರೆಯಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುಕ್ಕೆ ತುಂಬಾ ಸಂತೋಷವಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಿಎಸ್ಪಿ ಪಕ್ಷ ಟಿಕೆಟ್ ಕೊಟ್ಟಿದೆ. ನಾನು ಹಲವು ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದೆ. ಆದ್ರರೆ ಯಾರು ಕೂಡ ಅವಕಾಶ ಕೊಡಲಿಲ್ಲ. ಬಿಎಸ್ಪಿ ಟಿಕೆಟ್ ನೀಡಲು ನಿರ್ಧರಿಸಿ, ಅವಕಾಶ ಕಲ್ಪಿಸಿದೆ ಎನ್ನುತ್ತಾರೆ ಕಾಜಲ್.
ಒಡಿಶಾ ಒಟ್ಟು 147 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು, ಏಪ್ರಿಲ್ 11ರಂದು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ…ಹಾಗೆಯೇ ದೇಶದಾದ್ಯಂತೆ ನಡೆಯುವಂತೆ
ಲೋಕಸಭೆ ಚುನವಾಣೆಯು ಕೂಡ ನಡೆಯುತ್ತದೆ.
Odisha: Kajal Nayak, a 27-year-old transgender, would contest from the Korei Assembly seat in Jajpur district as the candidate of the Bahujan Samaj Party (BSP) in the upcoming state elections. pic.twitter.com/JxOl3AHbFh
— ANI (@ANI) March 16, 2019