No menu items!
15.3 C
Munich
Thursday, May 7, 2026

ಇಂದಿನಿಂದ ಐಪಿಎಲ್ ಕಲರವ…

Must read

12ನೇ ಆವೃತ್ತಿ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದೆ.‌ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಪಂದ್ಯ ನಡೆಯಲಿದೆ.‌
ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಇದೆ.‌
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಇದುವರೆಗೆ 23 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ‌ಆರ್ ಸಿಬಿ ಕೇವಲ 7 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.‌ ಚೆನ್ನೈ 15 ಪಂದ್ಯದಲ್ಲಿ ಗೆದ್ದಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ.
ಇದುವರೆಗೆ ಚೆನ್ನೈ 3 ಬಾರಿ ಚಾಂಪಿಯನ್ ಆಗಿದೆ. ಬೆಂಗಳೂರು ಮೂರು ಬಾರಿ ರನ್ನರ್ ಅಪ್ ಆಗಿದೆ.‌
ಅಂಕಿ ಅಂಶ ದಾಖಲೆಗಳ ಪ್ರಕಾರ ಚೆನ್ನೈ ಮುಂದಿದ್ದರೂ ಬೆಂಗಳೂರು ಪ್ರಬಲ ತಂಡ. ರನ್ ಮಿಷನ್ ನಾಯಕ ವಿರಾಟ್ ಕೊಹ್ಲಿ, ಎ.ಬಿ ಡಿವಿಲಿಯರ್ಸ್ , ಶ್ರೀಮಾನ್ ಹೆಟ್ಮಾಯೆರ್, ಟಿಮ್ ಸೌಥಿ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಸಿಎಸ್ ಕೆ ಗೆ ನಾಯಕ ಮಹೇಂದ್ರ ಸಿಂಗ್ ಧೋನಿ, ಶೇನ್ ವ್ಯಾಟ್ಸನ್, ಡ್ವೇನ್ ಬ್ರಾವೋ , ಸುರೇಶ್ ರೈನಾ ಸೇರಿದಂತೆ ಅನುಭವಿಗಳೇ ಆಧಾರ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article