ತಾಯಿಯೋ, ಹೆಂಡತಿಯೋ, ಪ್ರೇಯಸಿಯೋ ಅಥವಾ ಇನ್ಯಾರೋ ಆಪತ್ತಲ್ಲಿ ಸಿಲುಕಿರುತ್ತಾರೆ! ಆಗ ಆ ಹೀರೋನಾ ಎಂಟ್ರೀ ಆಗುತ್ತೆ! ಅದೆಂಥಹಾ ಸಮಸ್ಯೆಯಾಗಿದ್ರೂ ತನ್ನ ಕೆಚ್ಚೆದೆಯಿಂದ ಮೆಟ್ಟಿನಿಲ್ತಾನೆ! ಆಪತ್ತಿನಲ್ಲಿರುವವರನ್ನು ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ರಕ್ಷಿಸುತ್ತಾನೆ! ಇಂತಹ ಸ್ಟೋರಿಗಳನ್ನು ಬೇಜಾನ್ ಸಿನಿಮಾಗಳಲ್ಲಿ ಕಂಡಿರುತ್ತೇವೆ! ಯಾವ ಸಿನಿಮಾವೇ ಆಗಲಿ ಹೀರೋ ಮಾಡೋ ಮಹಾನ್ ಕಾರ್ಯ ಅದಲ್ಲವೇ? ಯಾರಿಂದಲೂ ಆಗದೆ ಇರೋ ಕೆಲಸವನ್ನು ಮಾಡಿ ಶಹಬ್ಬಾಶ್ ಅನಿಸಿಕೊಳ್ತಾನೆ! ಇಂತಹ ಸಿನಿಮಾ ಹೀರೋಗಳು ತಮ್ಮ ರಿಯಲ್ ಲೈಫ್ ನಲ್ಲಿ ಹೀರೋಗಳಾಗಿದ್ದಾರೆ? ಯಾರಾದರೂ ಆಪತ್ತಲ್ಲಿ ಇರೋ ತಾಯಿ, ತಂದೆ, ಹೆಂಡತಿಯನ್ನು ಕಾಪಾಡಿ ರಿಯಲ್ ಹೀರೋ ಆದ ಸಿನಿಮಾ ಹೀರೋನನ್ನು ನೀವು ನೋಡಿದ್ದೀರಿಯೇ? ಚಾನ್ಸೇ ಇಲ್ಲ, ಸಿನಿಮಾ ಹೀರೋಗಳಿಗೆ ರಿಯಲ್ ಲೈಫ್ ನಲ್ಲಿ ಹೀರೋಯಿಸಂ ತೋರಿಸಲು ಚಾನ್ಸು ಸಿಗುವುದೇ ಕಡಿಮೆ, ಸಿಕ್ಕರೂ ಅಂಥಹ ಸಾಹಸಕ್ಕೆ ಅವರು ಕೈ ಹಾಕಲ್ಲ! ಆದ್ರೆ ತಾನು ಸಿನಿಮಾ ಹೀರೋ ಮಾತ್ರ ಅಲ್ಲ, ರಿಯಲ್ ಲೈಫ್ ನಲ್ಲೂ ಹೀರೋನೆ ಅಂತ ತೋರಿಸಿಕೊಟ್ಟಿದ್ದಾರೆ ಕನ್ನಡದ ತಿಲಕ್!
ಮೊನ್ನೆ ಮಂಗಳವಾರ ಬೆಳಿಗ್ಗೆ ಸುಮಾರು 9.30 ಆಗಿರಬಹುದು! ತಿಲಕ್ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ಮಲಗಿರುತ್ತಾರೆ! ಸಿಕ್ಕಾಪಟ್ಟೆ ಸುಸ್ತಾಗಿತ್ತೇನೋ ಅದಕ್ಕೆ ಅಷ್ಟೊತ್ತಾದ್ರೂ ಮಲಗಿದ್ರು! ಆಗ ಇದ್ದಕ್ಕಿಂದಂತೆ ಅವರ ಅಮ್ಮ ಚೀರಿ ಕೊಳ್ತಾರೆ! ತಿಲಕ್ ಗೆ ಎಚ್ಚರವಾಗುತ್ತೆ! ಅಮ್ಮಾನ ಚೀರಾಟ ಕೇಳಿ ಗಾಬರಿಯಿಂದಲೇ ಓಡಿ ಹೋಗ್ತಾರೆ! ಅಲ್ಲಿ ನೋಡಿದ್ರೆ ಬೆಂಕಿ! ಊ್ಞಂ, ಅಡುಗೆಮನೆಯಲ್ಲಿ ಬೆಂಕಿ ಹೊತ್ತಿದೆ ಅವರ ತಾಯಿ ಅಲ್ಲಿಯೇ ಇದ್ದಾರೆ! ತಿಲಕ್ ತಡಮಾಡದೇ ತನ್ನ ತಾಯಿಯನ್ನು ಹೊರಗೆ ಕರ್ಕೊಂಡು ಬಂದಿದ್ದಾರೆ! ಅಷ್ಟೇ ಅಲ್ಲ, ತಾವೇ ಬೆಂಕಿಯನ್ನು ನೊಂದಿಸಿದ್ದಾರೆ! ಈ ಮೂಲಕ ರಿಯಲ್ ಲೈಫ್ ನಲ್ಲೂ ಹೀರೋ ಆದ್ರು ತಿಲಕ್!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com