ಇವರು ಏಳನೇ ಕ್ಲಾಸ್ ಓದಿರೋ ಡಾಕ್ಟರ್..!

0
159

ಅವರು ಮನುಕುಲವೇ ಕೈ ಮುಗಿದು ನಮಿಸಬೇಕಾದ ದೇವತಾ ಮನುಷ್ಯ! ಬಡವರ ಪಾಲಿಗಂತೂ ನಿಜಕ್ಕೂ ದೇವರೇ ಸರಿ! ತನ್ನನ್ನು ನಂಬಿಬಂದವರನ್ನೆಂದೂ ಅವರು ಕೈ ಬಿಡಲಾರರು! ಇವರು ಮಾಡ್ತಾ ಇರೋ ಸೇವೆಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ! ಹಾಗಾದರೆ ಅವರ್ಯಾರು? ಅವರು ಮಾಡ್ತಾ ಇರೋ ಆ ಪುಣ್ಯ ಕೆಲಸವಾದರೂ ಏನು? ಅನ್ನೋದನ್ನ ನಿಮಗೋಸ್ಕರ ತಿಳಿಸ್ತಾ ಇದೀವಿ, ನೀವು ತಿಳಿಯಿರಿ, ಬೇರೆಯವರಿಗೂ ತಿಳಿಸಿ! ಯಾಕಂದ್ರೆ ಪ್ರತಿಯೊಬ್ಬರಿಗೂ ಬೇಕಾದ ವ್ಯಕ್ತಿ ಈ ಮಹಾನುಭಾವ!
ಅವರು ನಾರಯಣ ಮೂರ್ತಿ! ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ “ನರಸೀಪುರ”ದವರು! ತಂದೆ ಸುಬ್ಬರಾಯ, ತಾಯಿ ಭವಾನಮ್ಮ. ಶ್ರೀಮಂತ ರೈತ ಕುಟುಂಬದಲ್ಲಿ ಹುಟ್ಟಿದ ಇವರು ಓದಿದ್ದು ಏಳನೇ ತರಗತಿ.., ಆದರೂ ಜನಮೆಚ್ಟಿದ ವೈಧ್ಯ!
ಇವತ್ತು ಅದೆಷ್ಟೋ ಕಾಯಿಲಿಗಳಿಗೆ ಔಷಧಿಯೇ ಇಲ್ಲ ಅಲ್ವಾ? ಕೆಲವೊಂದು ಕಾಯಿಲೆ ಬಂತೆಂದರೇ ಸಾವು ಗ್ಯಾರಂಟಿ! ಹಣಗಳಿಕೆಯ ಉದ್ಯಮವಾಗಿ ಮಾರ್ಪಡುತ್ತಿರುವ ಹೈಟೆಕ್ ಆಸ್ಪತ್ರೆಗಳಲ್ಲಿ ಬಡವರಂತೂ ಟ್ರೀಟ್ಮೆಂಟ್ ಪಡೆಯಲು ಸಾಧ್ಯವೇ ಇಲ್ಲ! ಮೂಟೆಗಟ್ಟಲೆ ಹಣ ಸುರಿದರೂ ಅದೆಷ್ಟೋ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಲಾಗದೆ ವೈಧ್ಯಜಗತ್ತೇ ತಲೆಭಾಗಿದೆ! ಈ ಆಧುನಿಕ ವೈಧ್ಯಲೋಕವೇ ಗುಣಪಡಿಸಲಾಗದ ಕಾಯಿಲೆಯನ್ನು ಈ ನಾಟಿ ವೈಧ್ಯ ನಾರಯಣ ಮೂರ್ತಿ ಗುಣಪಡಿಸುತ್ತಾರೆ! ಬಾಲ್ಯದಲ್ಲಿ ವರದಹಳ್ಳಿ ಶ್ರೀಧರ ಸ್ವಾಮಿ ಮತ್ತು ತನ್ನ ಅಜ್ಜ ಗಾಲಿ ನಾರಾಯಣಪ್ಪರವರಿಂದ ನಾಟಿ ಔಷಧ ಕೊಡುವುದನ್ನು ಕಲಿತ ಇವರು ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಕಿಡ್ನಿ ಸ್ಟೋನ್, ಬಂಜೆತನ, ಅನ್ನನಾಳ ಕ್ಯಾನ್ಸರ್, ಗ್ಯಾಂಗ್ರಿನ್ ಅಂತಹ ಕಾಯಿಲೆಗಳನ್ನೂ ಇವರು ಗುಣಪಡಿಸುತ್ತಾರೆ! ಪ್ರತಿದಿನ ಸಾವಿರಾರು ಜನರು ಇವರ ಮನೆಮುಂದೆ ಜಮಾಯಿಸಿರುತ್ತಾರೆ! ಎಂಥಹಾ ದೊಡ್ಡ ದೊಡ್ಡ ವೈಧ್ಯರು ಸಹ “ಗುಣಪಡಿಸಲು ಸಾಧ್ಯವೇ ಇಲ್ಲ, ಮನೆಗೆ ಕರೆದುಕೊಂಡು ಹೋಗಿ ಎಂದು ವಾಪಸ್ಸು ಕಳುಹಿಸಿದ ರೋಗಿಗಳನ್ನು ಕೊನೆಯ ಪ್ರಯತ್ನ ಅಂತ ನಾಟಿ ವೈಧ್ಯ ನಾರಾಯಣ ಮೂರ್ತಿಯವರ ಬಳಿ ಕರೆತರುತ್ತಾರೆ”! ಇಲ್ಲಿಗೆ ಬಂದ ರೋಗಿಗಳು ಸಾವನ್ನೇ ಗೆದ್ದು ಬರುತ್ತಾರೆ! ಇಲ್ಲಿಗೆ ಬರುವವರಲ್ಲಿ ಶೇಕಡ 60ರಷ್ಟು ಜನ ಶಿಕ್ಷಿತರೇ ಆಗಿದ್ದಾರೆ! ಮಲೆನಾಡಿನ ಈ ಮೂಲೆಗೆ ಇವರನ್ನು ಹುಡುಕಿಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ! ಕರ್ನಾಟಕದ ಕತೆ ಬಿಡಿ. ಕೇರಳ, ತಮಿಳುನಾಡು, ಆಂದ್ರಪ್ರದೇಶ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದಲೂ ಜನ ಆರೋಗ್ಯ ಭಿಕ್ಷೆ ಬೇಡ್ತಾ ಬರ್ತಾರೆ! ಅಷ್ಟೇ ಏಕೆ ಸಾರ್, “ನಾವು ವೈಜ್ಞಾನಿಕವಾಗಿ ಹಂಗೆ ಬೆಳೆದಿದ್ದೇವೆ, ಹಿಂಗೆ ಬೆಳೆದಿದ್ದೇವೆ, ಅಷ್ಟು ಸಾಧಿಸಿದ್ದೇವೆ, ಇಷ್ಟು ಸಾಧಿಸಿದ್ದೇವೆ, ನಮ್ಮನ್ನ ಬಿಟ್ರೆ ಬೇರ್ಯಾರೂ ಇಲ್ಲ ಅಂತ ಕೊಚ್ಚಿಕೊಳ್ಳುತ್ತಾ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಾ ಇರೋ ವಿಶ್ವದ ಶ್ರೀಮಂತ ರಾಷ್ಟ್ರಗಳಾದ ಅಮೇರಿಕಾ, ಪ್ರಾನ್ಸ್, ಇಟಲಿ ದೇಶಗಳಿಂದಲೂ ಈ ಮಲೆನಾಡಿನ ನಾಟಿ ವೈಧ್ಯ ನಾರಾಯಣ ಮೂರ್ತಿಯವರ ಬಳಿ ಬರ್ತಾರೆ! ವಿದೇಶಗಳಲ್ಲಿನ ನುರಿತ ವೈಧ್ಯರ ಕೈಯಲ್ಲಿಯೇ ಗುಣಪಡಿಸಲಾಗದ ಕಾಯಿಲೆಗಳನ್ನು ನಾರಾಯಣ ಮೂರ್ತಿ ಗುಣಪಡಿಸ್ತಾರೆ! ವೈಧ್ಯಲೋಕದಲ್ಲಿಯೇ ಅಸಾಧ್ಯವಾಗುತ್ತಿರುವುದನ್ನು ಸಾಧ್ಯವಾಗಿಸುತ್ತಾ, ರೋಗಿಗಳ ಪಾಲಿನ ಸಂಜೀವಿನಿ ಪುರುಷರಾಗಿರೋ ಇವರು ಗ್ರೇಟ್ ಅಲ್ವೇನ್ರಿ?
ಜಾನಪದ ವೈಧ್ಯಶಾಸ್ತ್ರವನ್ನು ಕರಗತ ಮಾಡಿಕೊಂಡಿರುವ ನಾರಾಯಣ ಮೂರ್ತಿಯವರು ಸೋಮವಾರ ಮತ್ತು ಗುರುವಾರ ರೋಗಿಗಳಿಗೆ ಔಷಧವನ್ನು ನೀಡ್ತಾರೆ! ವಾರದ ಇನ್ನುಳಿದ ದಿನಗಳಲ್ಲಿ ಕಾಡು ಮೇಡು ಅಲೆಯುತ್ತಾ, ಮೂಲಿಕೆಗಳನ್ನು ಸಂಗ್ರಹಿಸ್ತಾರೆ! ಯಾವ್ಯಾವ ಕಾಯಿಲೆಗೆ ಯಾವ್ಯಾವ ಮೂಲಿಕೆ ಬೇಕೋ ಅದನ್ನೆಲ್ಲಾ ರೆಡಿ ಮಾಡಿ ಇಟ್ಟುಕೊಳ್ತಾರೆ! ಇದಕ್ಕೆ ಇವರು ಯಾರ ಸಹಾಯವನ್ನೂ ಪಡೆಯುವುದಿಲ್ಲ! ಕೈಯಲ್ಲೊಂದು ಕತ್ತಿ, ಬಗಲಲ್ಲೊಂದು ಚೀಲ ಹಿಡಿದು ಕೊಂಡು ಕಾಡಿಗೆ ಹೋಗುವ ಇವರು ಔಷಧಕ್ಕೆ ಬೇಕಾದ ಮರದ ತೊಗಟೆಯನ್ನು ತರುತ್ತಾರೆ! ಯಾವುದೇ ರೀತಿಯಲ್ಲೂ ಮರಗಳಿಗೆ ಹಾನಿ ಮಾಡುವುದಿಲ್ಲ! ಆದ್ರೆ ಅರಣ್ಯ ಇಲಾಖೆ ಕರ್ಮಕಾಂಡ ನೋಡಿ! ಇವರ ಮೆಲೆ “ಅರಣ್ಯ ನಾಶ” ಕೇಸ್ ಹಾಕಿದ್ದಾರಂತೆ! ಅದೆಷ್ಟೋ ಜೀವಗಳನ್ನು ಉಳಿಸಿದ ಇವರ ಮೇಲೆ ಈ ಕೇಸ್ ಹಾಕಿರುವುದು ಯಾವ ನ್ಯಾಯಾ ಸ್ವಾಮಿ! ಅದಕ್ಕೆ ಜನರೇ ಉತ್ತರ ಕೊಡ್ತಾರೆ! ಈ ನಮ್ಮ ಅರಣ್ಯ ಇಲಾಖೆಗಳಿಗೆ ಮರಗಳ ಮಾರಾಣಹೋಮ ಆಗುತ್ತಿದ್ದರೂ ಅದು ಕಣ್ಣಿಗೆ ಕಾಣುವುದಿಲ್ಲ! ಜೀವ ಉಳಿಸಲು ಮರ ಕಡಿಯದೆ, ತೊಗಟೆ ತೆಗೆಯುವ ನಾರಾಯಣಮೂರ್ತಿ ಅಂತವರ ಮೇಲೆ ಕೇಸು ಆಗ್ತಾರೆ! ಇದೆಂಥಾ ನ್ಯಾಯ! ಇದೆಂಥಾ ಕಾನೂನು! ಇದೇ ಕಾರಣಕ್ಕೆ ಸ್ವಲ್ಪ ಸಮಯ ಔಷಧ ನೀಡುವುದನ್ನು ಇವರು ನಿಲ್ಲಿಸಿದ್ದರಂತೆ! ಈಗ ಮತ್ತೆ ಔಷಧ ನೀಡ್ತಾ ಇದ್ದಾರೆ! www.tnit.in
ಅಂದಹಾಗೆ ಹೇಳುವುದನ್ನೇ ಮರೆತಿದ್ದೆ ನೋಡಿ, ಈ ನಾಟಿ ವೈಧ್ಯ ನಾರಾಯಣ ಮೂರ್ತಿ ಹೀಗೆ ಮಾರಣಾಂತಿಕ ಕಾಯಿಲೆಗಳಿಗೆ ಔಷಧ ನೀಡಲು ನಯಾಪೈಸೆ ಕೂಡ ತೆಗೆದುಕೊಳ್ಳುವುದಿಲ್ಲ! ಸಂಪೂರ್ಣ ಉಚಿತವಾಗಿ ಔಷಧ ನೀಡ್ತಾರೆ!
ಇವತ್ತು ಕ್ಯಾನ್ಸರ್, ಗ್ಯಾಂಗ್ರಿನ್ ಅಂತಹ ಕಾಯಿಲೆಗಳನ್ನು ಕೋಟಿಕೊಟ್ಟರೂ ಗುಣಪಡಿಸಲು ಸಾಧ್ಯವಿಲ್ಲ! ಈ ಕಾಯಿಲೆಗಳಲ್ಲದೆ ಇನ್ನೂ ಅನೇಕ ಮಾರಾಣಾಂತಿಕ ಕಾಯಿಲೆಗಳಿವೆ! ಬಡವರಂತೂ ಈ ಕಾಯಲಿಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವೇ ಇಲ್ಲ! ಶ್ರೀಮಂತರು ಹಾಸ್ಪೆಟಲ್ ಗೆ ಹಣ ಸುರಿದರೂ ಚಿಕಿತ್ಸೆ ಫಲಕಾರಿ ಆಗುತ್ತೆ ಅನ್ನೋದು ಅನುಮಾನ! ಹೀಗಿರುವಾಗ ನಾಟಿ ವೈಧ್ಯ ನಾರಾಯಣ ಮೂರ್ತಿಯವರು ಎಂಥಹಾ ಕಾಯಿಲೆಗಳಿಗೂ ಫಲಕಾರಿ ಔಷಧಿಯನ್ನು ನೀಡ್ತಾರೆ! ಅದೂ ಪುಕ್ಕಟೆಯಾಗಿ! ಇದೇನು ಸಾಮಾನ್ಯ ಕೆಲಸನೇನ್ರೀ? ಇವರ ಈ ಅಸಮಾನ್ಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ವೈಧ್ಯಪ್ರಶಸ್ತಿಯಂತಹ ಹತ್ತು ಹಲವು ಪ್ರಶಸ್ತಿಗಳು, ಗೌರವಗಳು ಸಂಧಿವೆ! ಆದರೆ ಇವರ ನಿಸ್ವಾರ್ಥ ಸೇವೆಗೆ ಎಲ್ಲಾ ಪ್ರಶಸ್ತಿಯೂ ಕಡಿಮೆಯೇ! ಇಂತಹ ನಿಸ್ವಾರ್ಥ ವೈಧ್ಯ, ಮಾರಣಾಂತಿಕ ಕಾಯಿಲೆಗಳನ್ನು ಹೊಡೆದೋಡಿಸುವ ಪುಣ್ಯ ಪುರುಷ ಇನ್ನೂ ನೂರುಕಾಲ ಬಾಳಲಿ, ದೇವರು ಅವರನ್ನು ಚೆನ್ನಾಗಿಟ್ಟಿರಲಿ ಅಂಥ ಮನತುಂಬಿ ಹರಸೋಣ!www.tnit.in
ಫ್ರೆಂಡ್ಸ್, ನೀವುಗಳೂ ಅಷ್ಟೆ, ಈ ವಿಷಯವನ್ನು ಶೇರ್ ಮಾಡಿ ಯಾಕಂದ್ರೆ ಇದರಿಂದ ತುಂಬಾ ಜನಕ್ಕೆ ಹೆಲ್ಪ್ ಆಗುತ್ತೆ! ನಾವಂತೂ ಯಾರ ಜೀವ ಉಳಿಸಲೂ ಆಗಲ್ಲ! ಜೀವ ಉಳಿಸೋ ಮಹಾನ್ ನಾಟಿ ವೈಧ್ಯ ನರಸೀಪುರ ನಾರಯಣ ಮೂರ್ತಿಯವರ ಬಳಿಯಲ್ಲಾದರೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರನ್ನು ಈ ಮೂಲಕವಾದರೂ ಕಳುಹಿಸಿ ಕೊಡೋಣ! ಪ್ರತಿಯೊಬ್ಬರ ಜೀವವವೂ ಅಮೂಲ್ಯ ಅಲ್ಲವೇ?

ಇವರ ವಿಳಾಸ : ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ “ನರಸೀಪುರ”

ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! Click Here

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here