No menu items!
12.4 C
Munich
Wednesday, April 29, 2026

ಹಳ್ಳಿಯ ಗೌರ್ಮೆಂಟ್ ಸ್ಕೂಲಿಂದ ಲಂಡನ್ ತನಕ ನಮ್ಮೂರ ಹುಡುಗನ ಸಖತ್ ಸಾಧನೆ…!

Must read

ನನಗಿನ್ನೂ ನೆನಪಿದೆ ಅವನು ನಮ್ಮೂರಲ್ಲೇ ಪಿಜಿ ಮಾಡಿದ್ದು. ಎಲ್ಲರಂತೆ ಅವನೂ ಒಬ್ಬ, ಮಾತುಕತೆ ಹರಟೆ ಎಲ್ಲಾ ಮಾಡ್ತಿದ್ರೂ ಓದಿನಲ್ಲಿ ಮುಂದೆ ಅಂತ ಅವನ ಸ್ನೇಹಿತರು ಹೇಳೋರು. ಅವನ ಊರು ಶಿವಮೊಗ್ಗ ಸಮೀಪದ ಗಾಜನೂರು. ಅಲ್ಲೊಂದು ಪುಟ್ಟ ಹೋಟೆಲ್ ಅವರ ಕುಟುಂಬದ ಅಧಾರ..! ಅವನ ಬಾಲ್ಯ ಕಳೆದಿದ್ದು ಅದೇ ಊರಿನ ಸರ್ಕಾರಿ ಶಾಲೆಯ ಕಾಂಪೌಂಡಿನಲ್ಲೇ. ಓದುವ ಹಂಬಲ ಅವನನ್ನು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದ ಅಂಗಳದವರೆಗೂ ಕರೆದುಕೊಂಡು ಬಂತು..! ಪೊಲಿಟಿಕಲ್ ಸೈನ್ಸ್ ಓದಿದ ಹುಡುಗ ಅಲ್ಲೇ ಲೆಕ್ಚರರ್ ಸಹ ಆದ..! ಮುಂದೆ ಪಿ.ಎಚ್.ಡಿ ಪಡೆದು ಹೆಸರಿನ ಜೊತೆಗೆ ಡಾಕ್ಟರ್ ಸೇರಿಸಿಕೊಂಡ. ಈಗ ಆ ಹಳ್ಳಿ ಹೈದ ಲಂಡನ್ ಗೆ ಹೊರಟ..! ಅದು ಪ್ರತಿಷ್ಟಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಟಡಿ ಟೂರ್ ಗೆ..! ಅವನು ಶಿವಮೊಗ್ಗ ಜಿಲ್ಲೆಯ ಹೆಮ್ಮೆ ಕಿರಣ್ ಗಾಜನೂರು…! www.tnit.in

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವನೀಗ ಬರೀ ಕಿರಣ್ ಅಲ್ಲ, ಡಾಕ್ಟರ್ ಕಿರಣ್..! ಅವನು ನನ್ನ ಆ ದಿನದ ಗೆಳೆಯನೇ ಆಗಿರನಹುದು, ಅವತ್ತು ನಾನವನನ್ನು ಹೋಗು ಬಾ ಅಂತಲೇ ಮಾತಾಡಿಸಿರಬಹುದು. ಆದ್ರೆ ಅವನು ಏರಿದ ಎತ್ತರ ನೋಡಿದ್ರೆ ಹೆಮ್ಮೆಯಾಗೋದರ ಜೊತೆಗೆ ಅವನನ್ನು ಸರ್ ಅಂತ ಖುಷಿಯಿಂದ ಕರೀಬೇಕು ಅನ್ಸುತ್ತೆ..! ಇವತ್ತು ಅವನು ಗೆಳೆಯ ಕಿರಣ್ ಆಗೋದರ ಜೊತೆಗೆ ಕಿರಣ್ ಸರ್ ಆಗಿದ್ದಾನೆ.. ನೂರಾರು ಮಕ್ಕಳಿಗೆ ಪಾಠ ಹೇಳಿಕೊಡ್ತಾನೆ..! ಪ್ರತಿಷ್ಟಿತ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೀತಾನೆ..! ಸರ್ಕಾರಿ ಶಾಲೇನಾ ಅಂತ ಮೂಗು ಮುರಿಯೋರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋ ಸಾಧನೆ ಮಾಡ್ತಿದ್ದಾನೆ ಈ ಸರ್ಕಾರಿ ಶಾಲೆಯಲ್ಲಿ ಓದಿದ ಹುಡುಗ. ನೀವು ಎಲ್ಲೇ ಓದಿ, ಮೇಲೇರೋಕೆ ಅವಕಾಶಗಳು ನೂರಾರಿರುತ್ತೆ ಅನ್ನೋಕೆ ಸಾಕ್ಷಿ ಈ ಕಿರಣ್..!www.tnit.in
ವಿಷಯ ಏನಪ್ಪಾ ಅಂದ್ರೆ, ಭಾರತ ಸರ್ಕಾರ ರಾಷ್ಟ್ರದ 25 ಜನರನ್ನು ಸ್ಟಡಿ ಟೂರ್ ಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಸರ್ಕಾರದ ವತಿಯಿಂದ ಕಳಿಸಿಕೊಡುತ್ತೆ..! ಅರ್ಥಶಾಸ್ತ್ರದ ಆಳ ಅಗಲ ಗೊತ್ತಿದ್ದವರಿಗೆ ಈ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂದ್ರೆ ಅದೊಂದು ಕನಸು. ಆ ಕನಸು ಕಿರಣ್ ಜೀವನದಲ್ಲಿ ನನಸಾಗ್ತಿದೆ..! ಭಾರತ ಸರ್ಕಾರದ ಯುಜಿಸಿ ಅಂದ್ರೆ,ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಈ ಸಲದ ಸ್ಟಡಿ ಟೂರ್ ಪಟ್ಟಿಯಲ್ಲಿ ಕಿರಣ್ ಅವರನ್ನೂ ಸೇರಿಸಿದೆ. ಕರ್ನಾಟಕದಿಂದ ಆಯ್ಕೆಯಾದ ಇಬ್ಬರಲ್ಲಿ ನನ್ನ ಗೆಳೆಯ ಕಿರಣ್ ಸಹ ಒಬ್ಬ..! ಈ ವರ್ಷ ಅಂಬೇಡ್ಕರ್ ರವರ 125ನೇ ಜನ್ಮವರ್ಷಾಚರಣೆ ಅಂಗವಾಗಿ ನವೆಂಬರ್ 20ರಿಂದ 28ರವರೆಗೆ ಬೇರೆಬೇರೆ ಶಿಕ್ಷಣ ಸಂಸ್ಥೆಗಳಿಂದ 25 ಜನರನ್ನು ಆಯ್ಕೆ ಮಾಡಿ ಶೈಕ್ಷಣಿಕ ಪ್ರವಾಸಕ್ಕೆ ಕಳಿಸ್ತಿದೆ. ಜೆ.ಎನ್.ಯು, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಹಾಗೂ ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯೂಲೇಶನ್ ನಂತಹ ಸಂಸ್ಥೆಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ ಕುವೆಂಪು ವಿಶ್ವವಿದ್ಯಾನಿಲಯದ ಹೆಸರು ಇರೋದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಹೆಮ್ಮೆಗೆ ಕಾರಣವಾದ ಗೆಳೆಯ ಕಿರಣ್ ಗೆ ಸಲಾಂ..!www.tnit.in

-ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article