ಇವರೇನು ರೈತರ ಸಾಲ ಮನ್ನಾ ಮಾಡೋದು ಬೇಕಾಗಿಲ್ಲ ಅಂತ ಪರೋಕ್ಷವಾಗಿ ಸಿಎಂ ಕಾಲೆಳೆದ ದರ್ಶನ್..!

admin
1 Min Read

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯದ ಕಣದಿಂದ ಸುಮಲತಾ ಅಂಬರೀಶ್ ಅವರ ಪರವಾಗಿ ದರ್ಶನ್ ಪ್ರಚಾರ ಮಾಡಿದರು, ಇದನ್ನ ವ್ಯಾಪಕವಾಗಿ ಟೀಕಿಸಿದ್ದ ಕುಮಾರಸ್ವಾಮಿ ಅವರು ದರ್ಶನ್ ಮತ್ತು ಯಶ್ ಸೇರಿದಂತೆ ಸುಮಲತಾ ಮತ್ತು ಅಭಿಷೇಕ್ ಅಂಬರೀಶ್ ಅವರ ವಿರುದ್ಧ ವ್ಯಾಪಕ ಟೀಕೆಗಳನ್ನು ನಡೆಸಿದ್ದರು, ಈ ಟೀಕೆಗಳಿಗೆ ವಿರುದ್ಧವಾಗಿ ದರ್ಶನ್, ಯಶ್, ಸುಮಲತಾ ಹಾಗೂ ಅಂಬರೀಶ್ ಸರಿಯಾದ ತಿರುಗೇಟನ್ನು ಕುಮಾರಸ್ವಾಮಿಯವರಿಗೆ ನೀಡಿದರು.

ಆದರೆ ಇದು ಚುನಾವಣೆ ಮುಗಿದ ಬಳಿಕವೂ ಮುಂದುವರಿಯುತ್ತಾ ಬಂದಿದೆ ಈ ಹಿಂದೆ ಕುಮಾರಸ್ವಾಮಿ ಅವರು ಚುನಾವಣೆ ಮುಗಿದ ಮೇಲೆ ಇಬ್ಬರು ನಟರ ವಿರುದ್ಧ ಪಶ್ಚಾತಾಪ ಪಡುವ ಕಾಲ ದೂರ ಇಲ್ಲ ಎಂಬ ಹೇಳಿಕೆಯನ್ನು ನೀಡಿದರು ಇದಕ್ಕೆ ಇಡೀ ಕರ್ನಾಟಕದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಗಳೂರಿನ ಬಿ ಐ ಟಿ ಕಾಲೇಜು ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡಿದ್ದರು ಕಾರ್ಯಕ್ರಮವನ್ನ ಮುಗಿಸಿ ಹೊರ ನಡೆಯುವಾಗ ಮಾಧ್ಯಮದವರ ಜೊತೆ ಮಾತನಾಡುವಾಗ ಕುಮಾರಸ್ವಾಮಿಯವರ ಹೆಸರನ್ನು ಹೇಳದೆ ಪರೋಕ್ಷವಾಗಿ ಕಾಲೆಳೆದಿದ್ದಾರೆ.


ನಾನು ಇದರ ಬಗ್ಗೆ ತುಂಬಾ ಸಲ ಮಾತನಾಡಬೇಕು ಅಂದುಕೊಂಡಿದ್ದೆ, ಕೆಲವರು ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ನಮ್ಮ ರೈತರ ಸಾಲ ಮನ್ನಾ ಮಾಡುವುದು ಬೇಡ ರೈತರು ಬೆಳೆದ ಬೆಳೆಗಳಿಗೆ ನ್ಯಾಯವಾದ ಬೆಲೆಯನ್ನು ಸರ್ಕಾರ ಕೊಟ್ಟರೆ ರೈತರ ಸಾಲವನ್ನು ರೈತರೇ ಮನ್ನಾ ಮಾಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Share This Article
Leave a Comment