ನಮ್ ಜನ ಓಂಥಾರ ಮನಸ್ಸುಳ್ಳವರು..! ಅವರಿಗೆ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದರ ಅರಿವೇ ಇರುವುದಿಲ್ಲ ಕಣ್ರೀ..! ಅವರು ತಮಗಿಂತಲೂ ಬೇರೆಯವರಿಗೆ ಜಾಸ್ತಿ ತಲೆಕೆಡಿಸಿ ಕೊಳ್ತಾರೆ..! ನಮ್ಮ ಜೀವನದ ಹಾದಿ ಹೇಗಿದೆ, ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳುವುದಿಲ್ಲ…! ಜನರು ಏನೋ ಅಂತಾರೆ ಅಂತ ಆತ್ಮಹತ್ಯೆಗೆ ಶರಣಾಗಲು ಸಿದ್ಧರಾಗುತ್ತಾರೆ..! ಇದು ಸರೀನ ನಾವು ಇದ್ದು ಸಾಧಿಸಬೇಕೆ ಹೊರೆತು ಸಾಯಲು ಮನಸ್ಸು ಕೂಡ ಮಾಡಬಾರದು..! ಯಾಕೆ ಹೀಗೆ ಹೇಳುತ್ತಿದ್ದಾರಲ್ಲ ಅಂತ ಕೇಳ್ತೀರಾ ..! ಒಮ್ಮೆ ಈ ಸ್ಟೋರಿನಾ ಓದಿ…..!
ಒಂದು ಬಾರಿ ಅಥವಾ ಎರಡು ಬಾರಿನೋ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನ ನೋಡಿರ್ತ್ತೀವಿ, ಕೇಳಿರ್ತ್ತೀವಿ ಆದರೆ ಇಲ್ಲೊಬ್ಬ 16 ಬಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾನೆ..! ಆದ್ರೆ ಅವನ ಆಯಸ್ಸು ಗಟ್ಟಿಯಾಗಿತ್ತು..! ಆತ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 19 ವರ್ಷದ ಯುವಕ..! ಅವನು ಸಾಯಲು ಯತ್ನಿಸಿದ್ದ ಮಾರ್ಗಗಳಿಗೇನು ಕಮ್ಮಿ ಇಲ್ವಂತೆ..! ಇಲಿ ಪಾಶಾಣ, ವಿಷ ಸೇವನೆ ಮತ್ತು ಕೊನೆಯ ಸಲ 40 ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ನಂತೆ..! 40 ನಿದ್ದೆ ಮಾತ್ರೆ ತಂಗೊಂಡಿದ್ದು ಕಳೆದ ಮೇ ತಿಂಗಳಿನಲ್ಲಂತೆ..! ಯಾಕಂದ್ರೆ ಪಿಯುಸಿಯಲ್ಲಿ ಫೇಲಾಗಿ ಖಿನ್ನತೆಗೆ ಒಳಗಾಗಿದ್ನಂತೆ…! ಅಲ್ಲದೆ ಆತನಿಗೆ ಓದಲು ಉತ್ತೇಜನ ನೀಡುವವರು ಯಾರು ಇರಲಿಲ್ವಂತೆ..! ಆಗ ಮಾತ್ರೆ ಸೇವಿಸಿದ್ದು ಪೋಷಕರಿಗೆ ತಿಳಿದು ಆಸ್ಪತ್ರೆಗೆ ಸೇರಿಸಿದ್ದಾರೆ..! ಅಲ್ಲದೆ ಮತ್ತೊಂದು ಕಾರಣವೆಂದರೆ ಆತನನ್ನ ಪ್ರತಿಕ್ಷಣ ತಾಯಿ ಕೊಂದವ ಎಂಬ ಮಾತುಗಳು ಮರುಕಳಿಸುತ್ತಿದ್ದವಂತೆ..! ಆದ್ರೆ ಆತ ಮುಂದೇನಾದ ಗೋತ್ತಾ..!
ಟಿವಿಶೋವೊಂದರಲ್ಲಿ ಕಾಣಿಸಿದ ಒಂದು ಸಂಖ್ಯೆ ಅವನ ದಿಕ್ಕನ್ನೇ ಬದಲಾಯಿಸ್ತು..! ಆ ಸಂಖ್ಯೆ ಯಾವುದಂದರೆ ಸಾ-ಮುದ್ರಾ ಎನ್.ಜಿ.ಒ ದ ಸಹಾಯವಾಣಿಯ ಸಂಖ್ಯೆಯಾಗಿತ್ತು..! ಆ ಸಂಸ್ಥೆಯ ಸ್ಥಾಪಕಿ ಭಾರತಿ ಸಿಂಗ್ ರವರನ್ನು ಸಂಪರ್ಕಿಸಿ ಯುವಕನ ಜೀವನದ ಬಗ್ಗೆ ಖುದ್ದಾಗಿ ಹೇಳಿದ್ಧಾನೆ..! ಇದನ್ನರಿತ ಭಾರತಿ ಸಿಂಗ್ ಯುವಕನಿಗೆ ಭಾವನೆ, ಅರ್ಥ ಸಂಬಂಧಗಳ ಬಗ್ಗೆ ಎನ್ ಜಿ ಒದಲ್ಲಿ ತರಬೇತಿ ನೀಡಿದ್ಧಾರೆ..! ಮೊದಲು ಏನೇ ಯೋಚಿಸಿದರು ಅದನ್ನ ಋಣಾತ್ಮವಾಗಿ ಚಿಂತಿಸುತ್ತಿದ್ದ ಯುವಕ ಬದಲಾವಣೆಯ ಪರ್ವ ಕಂಡ..! ತನ್ನ ತಾಯಿಯ ಸಾವಿಗೆ ಅವನನ್ನ ದೂಷಿಸುತ್ತಿದ್ದರಂತೆ ಅಲ್ಲದೆ ಕೆಟ್ಟ ಶಕುನ ಎಂದು ಹೀಗೆಯುತ್ತಿದ್ದರಂತೆ…! ಇದುವೇ ಅವನ 16 ಸಲ ಆತ್ಮಹತ್ಯೆಗೆ ಕಾರಣವಾಗಿತ್ತಂತೆ..! ಇದನ್ನರಿತ ಯುವಕ ಜೀವನ ತುಂಬಾ ಮುಖ್ಯವಾದದ್ದು ಇಲ್ಲಿ ನಮಗಿಂತ ಹೆಚ್ಚು ಕಷ್ಟದಲ್ಲಿರುವವರು ಇದ್ದಾರೆ ಎಂದು ತಿಳಿದು..! ಆತ್ಮಹತ್ಯೆ ಗುಂಗಿನಿಂದ ದೂರ ಸರಿದು ಆಶಾಭಾವನೆ ಕಡೆಗೆ ಮುಖಮಾಡಿದ್ದಾನೆ..! ಸಂಬಂಧಗಳ ಬೆಲೆ ತಿಳಿದು ಈಗ ನವ ಜೀವನವನ್ನ ಆರಂಭಿಸಿದ್ಧಾನೆ…! ಅಲ್ಲದೆ ಈಗ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ಧಾನೆ..! ಇದು ಅವನ ಜೀವನದ ಬದಲಾವಣೆಯ ಪರ್ವ…! ಇಲ್ಲಿ ನಾವು ಯಾವತ್ತು ಬೇರೆಯವರಿಗೆ ತಲೆ ಕೆಡಿಸಿಕೊಳ್ಳಲೇ ಬಾರದು..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!