ಮಾನವೀಯತೆ ಮೆರೆದ ಭಾರತೀಯ ಸೈನಿಕರು..! ಇದು ಥೇಟ್ ಭಜರಂಗಿ ಭಾಯಿಜಾನ್ ಕಥೆ..!

1
71

ಜಲಂಧರ್ : ಬಾಲಿವುಡ್ ನಲ್ಲಿ ನಾವು ಭಜರಂಗಿ ಭಾಯಿಜಾನ್ ಸಿನಿಮಾವನ್ನ ನೋಡಿ ಆನಂದಿಸಿ, ದುಖಃತಪ್ತರಾಗಿಯೂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಜ. ಆದರೆ ಸಿನಿಮಾದಲ್ಲಿ ಮಾಡುವುದೆಲ್ಲ ನೈಜ ಘಟನೆಯಾಗುವುದಕ್ಕೆ ಸಾಧ್ಯವೇ ಇಲ್ಲ ಅಂತ ನಾವು ಮನಸ್ಸಿನಲ್ಲಿ ಹೇಳಿ ಕೋಳ್ತೀವಿ. ಆದರೆ ಆಂತಹ ನೈಜ ಘಟನೆಯೊಂದು ಜಲಂಧರ್ ನಲ್ಲಿ ನಡೆದಿರುವುದು ವಿಶೇಷವಾಗಿದೆ.

Ccyy3GxVIAAKlmL

ಅಂದರೆ ಇದು ಸ್ವಲ್ಪ ಭಾಯಿಜಾನ್ ಸಿನಿಮಾವನ್ನೆ ಹೋಲುತ್ತದೆ. ಆ ಸಿನಿಮಾದಲ್ಲಿ ಹುಡುಗಿ ಮೂಕಿ ಯಾಗಿದ್ದರೆ ಇಲ್ಲಿಯ ಹುಡುಗಿ ಮೂಕಿ ಮತ್ತು ಕಿವುಡಿಯಾಗಿದ್ದಾಳೆ. ಸಿನಿಮಾದಲ್ಲಿ ಆಕೆ ಪಾಕಿಸ್ತಾನಕ್ಕೆ ಅರಿವಿಲ್ಲದೆ ಹೋದರೆ ಇಲ್ಲಿಯ ಹುಡುಗಿ ಬಾರತಕ್ಕೆ ಬಂದಿರುವುದು ವಿಶೇಷವಾಗಿದೆ. ಈ ಘಟನೆ ನಡೆದಿರುವುದು ಎಲ್ಲಿ ಅಂದ್ರೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿದ್ದಿಕ್ ಎಂಬ ಗ್ರಾಮದಲ್ಲಿ. ಗ್ರಾಮದ ಲಿವಾ ಬೀಬಿ ಎಂಬ ಐದು ವರ್ಷದ ಬಾಲಕಿ ತನ್ನ ತಂದೆಯ ಜೊತೆಯೊಂದಿಗೆ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ತಮ್ಮ ಹೊಲಕ್ಕೆ ಹೋಗಿದ್ದಾರೆ. ಸುಮಾರು 10.30ರ ವೇಳೆಗೆ ಆಕೆಗೆ ಅರಿವಿಲ್ಲದಯೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ಧಾಳೆ. ಇದರಿಂದ ಆಕೆ ಎತ್ತ ಹೋಗಬೇಕೆಂದು ಕಂಗಾಲಾಗಿದ್ದಾಳೆ. ಇದೇ ವೇಳೆಗೆ ಇಂಡೋ-ಪಾಕ್ ಗಡಿಯಲ್ಲಿರುವ ಕೃಷಿ ಭೂಮಿಯಲ್ಲಿ ರೈತರ ರಕ್ಷಣೆಗಾಗಿ ಇರುವ ಭಾರತದ ಕಿಸಾನ್ ಗಾರ್ಡ್ಸ್ ಕಣ್ಣಿಗೆ ಆಕೆ ಬಿದ್ದಿದ್ಧಾಳೆ. ಹುಡುಗಿ ಮೂಕಿ ಮತ್ತು ಕಿವುಡಿಯಾಗಿರುವುದರಿಂದ ತಾನು ಯಾರು, ಎಲ್ಲಿ ತಪ್ಪಿಸಿಕೊಂಡೆ ಎನ್ನುವ ಸನ್ನಿವೇಷವನ್ನ ವಿವರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆಕೆ ಇದ್ದಳು. ನಂತರ ಬಿಎಸ್ಎಪ್ನ ಹಿರಿಯ ಅಧಿಕಾರಿಗಳು ಪಾಕಿಸ್ತಾನದ ರೇಂಜರ್ ಗಳ ಜತೆ ಮಾತುಕತೆ ನಡೆಸಿ ಅನಾಥ ಸ್ಸಿತಿಯಲ್ಲಿ ಹುಡುಗಿ ಪತ್ತೆಯಾಗಿರುವ ಬಗ್ಗೆ ಸುದ್ದಿ ತಿಳಿಸಿದ್ಧಾರೆ. ಅಲ್ಲದೆ ಎರಡೂ ದೇಶಗಳ ಯೋಧರು ಈ ಬಗ್ಗೆ ಮೈಕಿನ ಮೂಲಕ ಗಡಿ ಭಾಗದ ಸುತ್ತಮುತ್ತಲಿನ ಹಳ್ಳಿಗಳಿಗೆ ಮಾಹಿತಿ ನೀಡಿದ್ದಾರೆ. ಹುಡುಗಿಯ ಹುಡುಕಾಟದಲ್ಲಿದ್ದ ತಂದೆ ಆಕೆ ನಮ್ಮ ಮಗಳೆ ಎಂದು ಗುರುತು ಹಿಡಿದಿದ್ದಾರೆ.ನಂತರ ಬಿಎಸ್ಎಪ್ ಆಧಿಕಾರಿಗಳು ಎರಡು ದೇಶಗಳ ಅನೊನ್ಯ ಸ್ನೇಹ ಸಂಬಂಧದ ಪ್ರತೀಕವಾಗಿ ಯಾವುದೇ ಸಮಸ್ಯೆಯಾಗದಂತೆ ಬಾಲಕಿಯನ್ನ ತನ್ನ ಪೋಷಕರಿಗೆ ಮರಳಿಸಿದ್ದಾರೆ. ಇದು ಒಂಥರಾ ನೈಜ ಭಜರಂಗಿ ಭಾಯಿಜಾನ್ ಕಥೆಯಾಗಿ ಹೊರಹೊಮ್ಮಿರುವುದು ವಿಶೇಷವಾಗಿದೆ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

1 COMMENT

LEAVE A REPLY

Please enter your comment!
Please enter your name here