ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ ವಿಭಿನ್ನವಾಗಿ ಸಂಭ್ರಮ ಆಚರಿಸಿದ ಅಭಿಮಾನಿ .

Must read

ಮಂಡ್ಯದಲ್ಲಿ ಬಹಳ ಚುನಾವಣಾ ಪ್ರಚಾರ ಮತ್ತು ಜಿದ್ದಾ ಜಿದ್ದಿನ ಹೋರಾಟದ ಬಳಿಕ ಪಕ್ಷೇತರ ಆಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದರು. ಮತ್ತೊಮ್ಮೆ ರೆಬೆಲ್ ಸ್ಟಾರ್ ಅಂಬರೀಶ್ ರನ್ನು ಮಂಡ್ಯದ ಜನತೆ ಕೈ ಹಿಡಿದಿದ್ದಾರೆ. ಈ ಸಂತೋಷವನ್ನು ಪ್ರಕಟಿಸಲು ಅಭಿಮಾನಿಯೊಬ್ಬರು ಶಿವಮೊಗ್ಗದಲ್ಲಿ ನೆಂಟರಿಗೆ, ಸ್ನೇಹಿತರಿಗೆ ಬಾಡೂಟ ಹಾಕಿಸಿ ಸಂಭ್ರಮಿಸಿದ್ದಾರೆ. ಶಿವಮೊಗ್ಗದ ಜೆ. ಹೆಚ್. ಪಟೇಲ್ ಬಡಾವಣೆಯ ಹನುಮಂತಪ್ಪ ರವರು ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿ. ಕಳೆದ ಹದಿನೈದು ವರ್ಷದಿಂದ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸುತ್ತ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದರು ಇವರು. ಇದೀಗ ಸುಮಲತಾ ಅಂಬರೀಷ್ ಗೆದ್ದ ಖುಷಿಯಲ್ಲಿ ಎರಡು ಕುರಿ ಕಡಿಸಿ, ಬಾಡೂಟ ಹಾಕಿಸಿದ್ದಾರೆ. ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿ, ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳ ಹಾಕಿಸಿದ್ದಾರೆ.ನೂರಾರು ಮಂದಿ ಈ ಔತಣ ಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

- Advertisement -spot_img

More articles

- Advertisement -spot_img

Latest article