ಇತ್ತೀಚಿಗಷ್ಟೆ ರಾಕುಲ್ ಅಭಿನಯದ ಬಾಲಿವುಡ್ ನ ‘ದೇ ದೇ ಪ್ಯಾರ್ ದೇ’ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ದೇದೇ ಪ್ಯಾರ್ ದೇ ಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ನಟಿ ರಾಕುಲ್ ಪ್ರೀತ್ ಸಿಂಗ್ ಎಲ್ಲರ ತಲೆ ತಿರುಗುವಂತೆ ಮಾಡಿದ್ರು. ಇದೀಗ ಮತ್ತೊಮ್ಮೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಒಂದಲ್ಲಾ ಒಂದು ಕಾರಣಗಳಿಂದ ರಾಕುಲ್ ಪ್ರೀತ್ ಸಿಂಗ್ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಗಳಿಗಿಂತ ರಾಕುಲ್ ಹೆಚ್ಚು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಈಗ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ರಾಕುಲ್.
ರಾಕುಲ್ ಪ್ರೀತಿ ಸಿಂಗ್ ಇತ್ತೀಚಿಗೆ ಫೋಟೋಶೂಟ್ ವೊಂದನ್ನು ಮಾಡಿಸಿಕೊಂಡಿದ್ದಾರೆ. ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೀಲಿ ಬಣ್ಣದ ಜೀನ್ಸ್ ಹಾಕಿಕೊಂಡು ರಾಕುಲ್ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ತರಹೇವಾರಿ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿರುವ ರಾಕುಲ್ ಪ್ಯಾಂಟ್ ಗೆ ಜಿಪ್ ಹಾಕದೆ ಹಾಗೆ ಒಂದು ಪೋಸ್ ನೀಡಿದ್ದಾರೆ.
View this post on Instagram
ಈ ಪೋಟೋದಲ್ಲಿ ರಾಕುಲ್ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಫೋಟೋ ಈಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ರಾಕುಲ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದರ ಜೊತೆಗೆ ಗರ್ಲ್ ಪವರ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಈ ಫೋಟೋ ನೋಡಿ ಅನೇಕ ನೆಟ್ಟಿಗರು “ಜಿನ್ಸ್ ಪ್ಯಾಂಟನ ಜಿಪ್ ಓಪನ್ ಆಗಿದೆ. ಇದ್ಯಾವ ಗರ್ಲ್ ಪವರ್, ಇದನ್ನು ನೀವು ಗರ್ಲ್ ಪವರ್ ಎನ್ನುತ್ತೀರಾ? ಶೇಮ್ ಶೇಮ್” ಎಂದು ಕಮೆಂಟ್ ಮಾಡಿದ್ದಾರೆ.
ಜಿಪ್ ಹಾಕುವುದನ್ನೆ ಮರೆತಿದ್ದೀರಾ ಇನ್ನು ಅನೇಕರು ಕೇಳುತ್ತಿದ್ದಾರೆ. ಹೀಗೆ ತರಹೇವಾರಿ ಕಮೆಂಟ್ ಗಳು ರಾಕುಲ್ ಇನ್ಸ್ಟಾಗ್ರಾಮ್ ನಲ್ಲಿ ರಾರಾಜಿಸುತ್ತಿವೆ. ಆದ್ರೆ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಕುಲ್.