ಯಶ್​​​​​​​​-ರಾಧಿಕಾ ಮಗಳಿಗೆ ದರ್ಶನ್ ನಾಮಕರಣ..! ಡಿ.ಬಾಸ್ ಇಟ್ಟ ಹೆಸರೇನು ಗೊತ್ತಾ?

Date:

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್​ ಕನ್ನಡ ಚಿತ್ರರಂಗದ ತಾರಾ ಜೋಡಿ. ಒಂದೇ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿ, ಬಳಿಕ ಒಂದೇ ಸಿನಿಮಾ ಮೂಲಕ (ಮೊಗ್ಗಿನ ಮನಸ್ಸು) ಸ್ಯಾಂಡಲ್​ವುಡ್​​​ಗೆ ಎಂಟ್ರಿಕೊಟ್ಟ ಇವರಿಬ್ಬರು ಪ್ರೀತಿಸಿ, ಮದ್ವೆಯಾಗಿದ್ದಾರೆ. ಈ ಮುದ್ದಾದ ಜೋಡಿಗೆ ಈಗ ಮುದ್ದಾದ ಮಗಳು ಕೂಡ ಇದ್ದಾಳೆ..!
ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಕೆಲವು ತಿಂಗಳ ಹಿಂದೆ ಅವರಿಬ್ಬರು ತಮ್ಮ ಮುದ್ದಾದ ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಮಗುವಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ‘YR’ ಎಂದು ಕರೆಯಿರಿ. ಎಂದು ಹೇಳಿದ್ದರು. ಆದರೆ, ಯಶ್-ರಾಧಿಕಾರ ಅಭಿಮಾನಿಗಳು ‘ಯಶಿಕಾ’ ಎಂದು ನಾಮಕಾರಣ ಮಾಡಿ ಅದೇ ಹೆಸರನಿಂದ ಕರೆಯುತ್ತಿದ್ದಾರೆ. ಈಗ ಆ ಮುದ್ದು ಮಗು ಯಶಿಕಾ ಎಂದೇ ಕರೆಯಲ್ಪಡುತ್ತಿದ್ದಾಳೆ. ಆದರೆ, ಯಶ್ ಮತ್ತು ರಾಧಿಕಾ ಯಶಿಕಾ ಎಂಬ ಹೆಸರು ಇಡಲ್ಲ. ಬೇರೆ ಹೆಸರನ್ನು ಇಡುತ್ತೇವೆ ಎಂದಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಯಶಿಕಾ ಎಂದೇ ಕರೆಯುತ್ತಿದ್ದಾರೆ.


ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಶ್-ರಾಧಿಕಾರ ಆ ಮುದ್ದಾದ ಮಗುವಿಗೆ ಹೊಸ ಹೆಸರು ಇಟ್ಟಿದ್ದಾರೆ. ಹೌದು, ಆ ಮಗುವನ್ನು ನೋಡಿದ ದರ್ಶನ್ ‘ಬೆಣ್ಣೆ ಮುದ್ದೆ’ ಅಂತ ನಾಮಕರಣ ಮಾಡಿದ್ದಾರೆ. ಇವಳಿಗೆ ಬೆಣ್ಣೆ ಮುದ್ದೆ ಎನ್ನುವ ಹೆಸರೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಿ ದರ್ಶನ್ ಫ್ಯಾನ್ಸ್ ಯಶ್-ರಾಧಿಕಾರ ಮಗಳನ್ನು ಪ್ರೀತಿಯಿಂದ ‘ಬೆಣ್ಣೆ ಮುದ್ದೆ’ ಎನ್ನುವ ಹೆಸರಿನಿಂದ ಕರೆಯುತ್ತಿದ್ದಾರೆ. ಹೀಗಾಗಿ ಯಶ್-ರಾಧಿಕಾಳ ಮಗಳು YR ಅವರ ಫ್ಯಾನ್ಸ್​ ಗೆ ಯಶಿಕಾ, ದರ್ಶನ್ ಫ್ಯಾನ್ಸ್​​ಗೆ ಬೆಣ್ಣೆಮುದ್ದೆ ಆಗಿದ್ದಾಳೆ.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಬಜೆಟ್ ಸಮಗ್ರ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್

ಸಿದ್ದರಾಮಯ್ಯ ಬಜೆಟ್ ಸಮಗ್ರ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್ ಬೆಂಗಳೂರು: ಮುಖ್ಯಮಂತ್ರಿ...

ಶಿಕ್ಷಣ ಕ್ಷೇತ್ರಕ್ಕೆ ಸಿಹಿ ಸುದ್ದಿ: 3,000 ಬೋಧಕ ಹುದ್ದೆಗಳ ಭರ್ತಿಗೆ ಸಿಎಂ ಸಿದ್ದರಾಮಯ್ಯ ಘೋಷಣೆ

ಶಿಕ್ಷಣ ಕ್ಷೇತ್ರಕ್ಕೆ ಸಿಹಿ ಸುದ್ದಿ: 3,000 ಬೋಧಕ ಹುದ್ದೆಗಳ ಭರ್ತಿಗೆ ಸಿಎಂ...

ವಿಕ್ಟೋರಿಯಾ ಆಸ್ಪತ್ರೆಗೆ ಹೊಸ ಹೆಸರು: ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಘೋಷಿಸಿದ ಸಿಎಂ

ವಿಕ್ಟೋರಿಯಾ ಆಸ್ಪತ್ರೆಗೆ ಹೊಸ ಹೆಸರು: ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಘೋಷಿಸಿದ...

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ...