No menu items!
3.1 C
Munich
Thursday, April 30, 2026

ಸೌತೆಕಾಯಿ ತಪ್ಪದೇ ತಿನ್ನಿ ಯಾಕೆ ಗೊತ್ತಾ.?

Must read

ಸೌತೆಕಾಯಿ ಸಲಾಡ್ ಸೇವನೆ ಮಾಡಬೇಕು. ವಿಟಮಿನ್ ಎ, ಬಿ 1, ಬಿ 6, ಸಿ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ ಅಂಶಗಳು ಇದರಲ್ಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸೌತೆಕಾಯಿ ನೆರವಾಗುತ್ತದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳಿವೆ.

ಮಲಬದ್ಧತೆ: ಮಲಬದ್ಧತೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಊರಿಯೂತ, ಶರೀರದಲ್ಲಿ ಉರಿ ಕಂಡು ಬಂದರೆ ಸೌತೆಕಾಯಿ ಸೇವನೆ ಒಳ್ಳೆಯದು.

ತಲೆನೋವು ಹಾಗೂ ಆಲಸ್ಯ : ಸೌತೆಕಾಯಿಯಲ್ಲಿ ವಿಟಮಿನ್ ಬಿ, ಸಕ್ಕರೆ ಹಾಗೂ ಎಲೆಕ್ಟ್ರೋಲೈಟ್ ಅಂಶವಿರುತ್ತದೆ. ಇದು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ತಲೆ ನೋವು ಅಥವಾ ಆಲಸ್ಯ ಕಾಣಿಸಿಕೊಳ್ಳುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೌತೆಕಾಯಿ ತಿಂದು ಮಲಗಿರಿ.

ಆಮ್ಲದ ಮಟ್ಟ: ಪ್ರತಿದಿನ ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟ ನಿಯಂತ್ರಣದಲ್ಲಿರುತ್ತದೆ.

ಕೀಲು ನೋವು: ಕೀಲು ನೋವಿನಿಂದ ಬಳಲುತ್ತಿದ್ದವರು ಸೌತೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸಬೇಕು. ಸೌತೆಕಾಯಿ ಜೊತೆ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.

ದೇಹದ ತಾಪಮಾನ ನಿಯಂತ್ರಣ : ಬೇಸಿಗೆಯಲ್ಲಿ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಇದರಿಂದ ಪದೇ ಪದೇ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೌತೆಕಾಯಿಯನ್ನು ಪ್ರತಿದಿನ ಸೇವಿಸುತ್ತ ಬನ್ನಿ. ಇದರಿಂದ ದೇಹದ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article