ಅಂದು ಕ್ರಿಕೆಟಿಗ ಇಂದು ನಟ..! ಯುವಿಯ ಬದಲಾದ ಲೈಫ್ ಸ್ಟೋರಿ

Date:

ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್ ಕಂಡ ದಿಗ್ಗಜ.. ಸಿಕ್ಸರ್​ಗಳ ಸರದಾರ… ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​​ ನಲ್ಲಿ ಟೀಮ್ ಇಂಡಿಯಾಕ್ಕೆ ಆಧಾರಸ್ತಂಭವಾಗಿದ್ದ ಹೆಮ್ಮೆಯ ಕ್ರಿಕೆಟಿಗ. ಕ್ಯಾನ್ಸರ್ ನಡುವೆಯೂ ಕ್ರಿಕೆಟ್ ಅಂಗಳದಲ್ಲಿ ಮಿಂಚಿನ ಆಟವಾಡಿ ಭಾರತಕ್ಕೆ ವಿಶ್ವಕಪ್​ ತಂದು ಕೊಟ್ಟ ಕೆಚ್ಚೆದೆಯ ಹೋರಾಟಗಾರ.
ಭಾರತದ ಹೆಮ್ಮೆಯ ಮನೆಮಗ ಯುವಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್​ ಬೈ ಹೇಳಿದ್ದಾರೆ. ಯುವಿ ವಿದೇಶಗಳಲ್ಲಿ ನಡೆಯಲಿರುವ ಲೀಗ್​ಗಳಲ್ಲಿ ಪಾಲ್ಗೊಳ್ಳಲು ಪ್ಲಾನ್ ಮಾಡಿದ್ದಾರೆ. ಈ ನಡುವೆ ನಟನೆಯಲ್ಲಿ ತೊಡಗಿಸಿಕೊಳ್ಳಲು ಹೊರಟಿದ್ದಾರೆ. ಅಂದಿನ ಸ್ಟಾರ್ ಕ್ರಿಕೆಟರ್, ಇಂದು ಆ್ಯಕ್ಟರ್ ..!

ಹೌದು, ಹಾಟ್​ ಸ್ಟಾರ್​ನ ‘ದಿ ಆಫೀಸ್​’ ಎಂಬ ಇಂಟರ್​ನ್ಯಾಷನಲ್ ಸೀರೀಸ್​ ಹಿಂದಿಯಲ್ಲೂ ಬರ್ತಿದೆ. ಇದ್ರಲ್ಲಿ ಯುವಿ ಆ್ಯಕ್ಟ್ ಮಾಡಿದ್ದಾರೆ. ಹೊಸದನ್ನು ಟ್ರೈ ಮಾಡುವುದು ಯಾವಾಗಲೂ ಒಳ್ಳೆಯದು ವಿಭಿನ್ನವಾಗಿ ಏನಾದರೂ ಮಾಡಬೇಕು ಎನ್ನುವ ಯುವಿ ನಟನೆಯಲ್ಲಿಯೂ ಛಾಪು ಮೂಡಿಸಲು ಹೊರಟಿದ್ದಾರೆ.

ವಿಲ್ಕಿನ್ಸ್ ಚಾವ್ಲಾ ಎಂಬ ಪೇಪರ್ ಕಂಪನಿಯ ಉದ್ಯೋಗಿಗಳ ಬದುಕಿನ ಸುತ್ತ ಸುತ್ತುವ ಕಾರ್ಯಕ್ರಮ ದಿ ಆಫೀಸ್. ಈ 13 ಎಪಿಸೋಡ್​ಗಳ ಸೀರಿಸ್ ನಲ್ಲಿ ಯುವಿ ಸಂದರ್ಶನಕ್ಕೆ ಬರುವ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ವಿಡಿಯೋ ರಿಲೀಸ್ ಆಗಿದೆ.
ಶೂಟಿಂಗ್​ ಬಗ್ಗೆ ಹೇಳಿಕೊಂಡಿರುವ ಸಿಕ್ಸರ್ ಕಿಂಗ್ ಸಹಕಲಾದವಿರ ಜೊತೆ ಬಹಳ ಟೈಮ್ ಕಳೆದೆ. ಎಂಜಾಯ್ ಮಾಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಯುವಿ ನಟನೆಯಲ್ಲೂ ಸದ್ದು ಮಾಡಲು ಹೊರಟಿದ್ದಾರೆ.

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...