No menu items!
3.1 C
Munich
Thursday, April 30, 2026

2 ಮಿಲಿಯನ್​ ಮ್ಯಾಚ್​ ಆಡಿ 7000 ವಿಕೆಟ್ ಕಿತ್ತಿರುವ ಕ್ರಿಕೆಟಿಗ ನಿವೃತ್ತಿ..!

Must read

ಕ್ರಿಕೆಟ್ ಜಗತ್ತು..ಅದೆಷ್ಟೋ ಶ್ರೇಷ್ಠ ಆಟಗಾರರನ್ನು ಕಂಡಿದೆ. ಅನೇಕರು ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಒಂದಿಷ್ಟು ಮಂದಿ ರಾಜ್ಯ ತಂಡದ ಪರವಷ್ಟೇ ಆಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ನಿರಾಸೆಯಿಂದ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನೊಂದಿಷ್ಟು ಮಂದಿ ಕ್ಲಬ್​ಗಳಿಗಷ್ಟೇ ಸೀಮಿತವಾಗಿ ಗುಡ್ ಬೈ ಹೇಳುತ್ತಾರೆ.
ವೃತ್ತಿಪರ ಕ್ರಿಕೆಟಿಗರು ಸಾಮಾನ್ಯವಾಗಿ 35-40 ವರ್ಷ ವಯಸ್ಸಲ್ಲಿ ನಿವೃತ್ತಿ ಘೋಷಿಸಿಬಿಡ್ತಾರೆ. ಆದರೆ. ಇಲ್ಲೊಬ್ಬ ಕ್ರಿಕೆಟಿಗರ ದಾಖಲೆ ಕೇಳಿದ್ರೆ..ಶಾಕ್ ಆಗ್ತೀರಾ..! ಬರೋಬ್ಬರಿ 2 ಮಿಲಿಯನ್ ಅಂದರೆ 20 ಲಕ್ಷ ಕ್ರಿಕೆಟ್ ಮ್ಯಾಚ್​ಗಳನ್ನು ಆಡಿದ್ದಾರೆ..! 7000 ವಿಕೆಟ್ ಕಿತ್ತಿದ್ದಾರೆ..! 60 ವರ್ಷದ ಸುದೀರ್ಘ ಕ್ರಿಕೆಟ್ ಜರ್ನಿ ಇವರದ್ದು..!
ಇವರು ಹೆಸರು ಸೆಸಿಲ್ ರೈಟ್. ವೆಸ್ಟ್ ಇಂಡೀಸ್​ನ ಕ್ರಿಕೆಟಿಗ. ಇವರಿಗೆ 85 ವರ್ಷ ವಯಸ್ಸು. ಜುಮೈಕಾ ಮತ್ತು ಬಾರ್ಬಡೋಸ್​ ತಂಡಗಳನ್ನು ಪ್ರತಿನಿಧಿಸಿರುವ ರೈಟ್ 70-80ರ ದಶಕದಲ್ಲಿ ವಿವಿಯನ್ ರಿಚರ್ಡ್ಸ್​, ಜೋಯಲ್​ ಗಾರ್ನರ್ ಮೊದಲಾದ ದಿಗ್ಗಜರೊಂದಿಗೆ ಆಡಿದ್ದರು. ಅವರೇ ಹೇಳುವ ಪ್ರಕಾರ ಅವರ 60 ವರ್ಷದ ಕ್ರಿಕೆಟ್ ಜರ್ನಿಯಲ್ಲಿ 2 ಮಿಲಿಯನ್ ಪಂದ್ಯಗಳನ್ನು ಆಡಿದ್ದಾರೆ. 7 ಸಾವಿರ ವಿಕೆಟ್​ಗಳನ್ನು ಕಿತ್ತಿದ್ದಾರೆ. ಸೆಪ್ಟೆಂಬರ್ 7ರಂದು ಕೊನೆಯ ಲೀಗ್​ ಪಂದ್ಯವಾಡುತ್ತಿದ್ದಾರೆ.
85ರ ಹರೆಯದಲ್ಲೂ ಕ್ರಿಕೆಟ್ ಆಡಲು ಅವರ ಫಿಟ್​ ನೆಸ್ ಗುಟ್ಟು.. ಅವರ ಶಿಸ್ತು ಬದ್ಧ ಲೈಫ್ ಸ್ಟೈಲ್. ಯಾವಾಗಲೂ ಒಮ್ಮೆ ಮಾತ್ರ ಬಿಯರ್ ಕುಡಿಯುವುದು.. ! ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಗಟ್ಟಿಯಾಗಿದ್ದಾರೆ. ಸೆಪ್ಟೆಂಬರ್ 7ಕ್ಕೆ ಕೊನೆಯ ಲೀಗ್ ಮ್ಯಾಚ್ ಆಡಿ ನಿವೃತ್ತಿ ಘೋಷಿಸಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article