ಇಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಈಡಾಗಿರುವ ವಿಷಯ ಎಂದರೆ ಡಿ ಬಾಸ್ ಅವರ ಮ್ಯಾನೇಜರ್ ಆಗಿ ಮತ್ತು ಅವರ ಅಭಿಮಾನಿ ಬಳಗದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಅವರನ್ನು ಇಂದು ಕೆಲಸದಿಂದ ತೆರವು ಮಾಡಲಾಗಿದೆ ಎಂದು ದರ್ಶನ್ ಅಭಿಮಾನಿಗಳ ಅಧಿಕೃತ ಪೇಜ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ದರ್ಶನ್ ಅವರ ಹೆಸರಿನಲ್ಲಿ ಇನ್ನು ಮುಂದೆ ಯಾರೂ ಸಹ ಶ್ರೀನಿವಾಸ್ ಅವರ ಜೊತೆ ವ್ಯವಹಾರ ಮಾಡಬೇಡಿ ಎಂದು ಬರೆದು ಕೊಳ್ಳುವುದರ ಮೂಲಕ ಅವರನ್ನು ಮ್ಯಾನೇಜರ್ ಕೆಲಸದಿಂದ ತೆಗೆದು ಹಾಕಿರುವುದಾಗಿ ತಿಳಿಸಲಾಗಿದೆ. ಇನ್ನು ತುಂಬಾ ದಿನಗಳಿಂದ ಶ್ರೀನಿವಾಸ್ ಅವರು ದರ್ಶನ್ ಅವರ ಬಳಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದರು ಇದೀಗ ದಿಢೀರನೆ ಮ್ಯಾನೇಜರ್ ಕೆಲಸದಿಂದ ತೆರವು ಮಾಡಿದ್ದು ಯಾಕೆ ಎಂಬುದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಇನ್ನು ಈ ಕುರಿತಾಗಿ ವೈಯಕ್ತಿಕ ಕಾರಣಕ್ಕೆ ಶ್ರೀನಿವಾಸ್ ಅವರನ್ನು ಮ್ಯಾನೇಜರ್ ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.