ಭರಾಟೆ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇನ್ನು ಚೇತನ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು ಭರಾಟೆ ಚಿತ್ರ ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನು ಮಾಡಿದೆ. ಇನ್ನು ಚಿತ್ರವನ್ನು ನೋಡಲು ಚಿತ್ರತಂಡ ಮುಖ್ಯ ಚಿತ್ರಮಂದಿರವಾದ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಬಂದಿತ್ತು.
ಇನ್ನು ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ಸಾಯಿಕುಮಾರ್, ಅಯ್ಯಪ್ಪ ಮತ್ತು ರವಿಶಂಕರ್ ಅವರು ಸಹ ಚಿತ್ರವನ್ನು ವೀಕ್ಷಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು. ಈ ವೇಳೆ ಮಾತನಾಡುವ ಸಂದರ್ಭದಲ್ಲಿ ರವಿಶಂಕರ್ ಅವರು ಮಾಲ್ ನಲ್ಲಿ ಹೋಗಿ ಚಿತ್ರ ನೋಡುವುದು ವೇಸ್ಟ್, ನರ್ತಕಿ ತರಹದ ಮಾಸ್ ಚಿತ್ರಮಂದಿರಗಳಿಗೆ ಬಂದು ಅಭಿಮಾನಿಗಳ ಜೊತೆ ನೋಡುವುದು ಕ್ರೇಜ್ ಎಂದು ಹೇಳಿದರು. ಹೌದು ಒರಾಯನ್ ಮಂತ್ರಿ ಮಾಲ್ ಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸುವುದು ಸರಿಯಲ್ಲ ಈ ತರ ಸಿಂಗಲ್ ಸ್ಕ್ರೀನ್ ಗೆ ಬಂದು ಚಿತ್ರವನ್ನು ನೋಡಬೇಕು ಎಂದು ಅವರು ಹೇಳಿದರು.