ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನು ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ ಎಂದ ಗುಂಡೂರಾವ್ ಸದ್ಯಕ್ಕೆ ನಮಗೆ ಆಡಿಯೋ ಬಿಡುಗಡೆಯಾಗಿರುವುದು ಮುಖ್ಯವಲ್ಲ. ಅದರಲ್ಲಿರುವ ಅಂಶಗಳು ಪ್ರಮುಖವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಜನರಿಂದ ಚುನಾಯಿತವಾಗಿದ್ದ ಮೈತ್ರಿ ಸರ್ಕಾರವನ್ನು ಬಾಹಿರವಾಗಿ ಕೆಡವಲು ಏನೇಲ್ಲ ಪ್ರಯತ್ನ ಮಾಡಿದ್ದೇವೆ ಎಂದು ಯಡಿಯೂರಪ್ಪ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎರಡು ತಿಂಗಳ ಕಾಲ ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡಿದ್ದರು ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ಹೇಳಿ ರಾಜಕೀಯ ವಲಯದಲ್ಲ ಮತ್ತೆ ಚರ್ಚೆಮಾಡುವಂತೆ ಮಾಡಿದ್ದಾರೆ .