ಇಂದು ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ ಅಯೋಧ್ಯೆ ತೀರ್ಪು ಏನೇ ಬರಲಿ, ಶಾಂತಿ-ಸಾಮರಸ್ಯ ಕಾಪಾಡಬೇಕು. ಶತಮಾನದಷ್ಟು ಹಳೆಯದಾದ ಅಯೋಧ್ಯೆ ಪ್ರಕರಣದ ತೀರ್ಪು ಇಂದು ಸುಪ್ರೀಂ ಕೋರ್ಟ್ ನಿಂದ ಪ್ರಕಟವಾಗುತ್ತಿದಂತೆ. ತೀರ್ಪು ಯಾರ ಪರವೇ ಬರಲಿ. ಯಾರೂ ಭಾವೋದ್ವೇಗಕ್ಕೆ ಒಳಗಾಗದೇ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ತೀರ್ಪು ಏನೇ ಬರಲಿ ಶಾಂತಿ ಇರಲಿ ಅಂತಃಶಕ್ತಿ ಜಗದ ಬೆಳಕಾಗಲಿ. ತೀರ್ಪು ಯಾರದೇ ಪರವಿರಲಿ, ವಿರುದ್ಧವಿರಲಿ ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ ಸ್ವೀಕರಿಸೋಣ. ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸೋಣ ಎಂದು ಯಡಿಯೂರಪ್ಪ ಅವರು ಜನರಲ್ಲಿ ಮನವಿ ಮಾಡಿದ್ದಾರೆ .