ಬಹಿರಂಗ ವೇದಿಕೆಯಲ್ಲಿ ಮಹಿಳೆ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ!

admin
1 Min Read

ಪ್ರಧಾನಿ ಮೋದಿ ಬಹಿರಂಗ ವೇದಿಕೆಯಲ್ಲಿ ಮಹಿಳೆಯೊಬ್ಬರ ಕಾಲಿಗೆ ನಮಸ್ಕರಿಸಿದ್ದಾರೆ, ಸದ್ಯ ಪ್ರಧಾನಿ ಮಹಿಳೆಯ ಆಶೀರ್ವಾದ ಪಡೆದಿರುವುದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡು ಮಾಡ್ತಿದೆ.
ಕೃಷಿ ಕರ್ಮಣ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಹಿಳೆಯ ಪಾದಮುಟ್ಟಿ ನಮಸ್ಕರಿಸಿದ್ದು, ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ೨೦೧೬-೧೭ ಹಾಗೂ ೨೦೧೭-೧೮ನೇ ಸಾಲಿನ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಹಿಳೆಯೊಬ್ಬರು ಮೋದಿಯವರ ಪಾದಮುಟ್ಟಿ ನಮಸ್ಕರಿಸಿದರು. ಈ ವೇಳೆ ಮೋದಿ ಕೂಡ ಆಕೆಯ ಪಾದಗಳಿಗೆ ನಮಸ್ಕರಿಸಿದರು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹರ್ಷವರ್ಧನ್ ಅವರು ಟ್ವೀಟ್ ಮಾಡಿದ್ದಾರೆ. ‘ಪ್ರತಿಯೊಬ್ಬ ತಾಯಿಯನ್ನು ಹಾಗೂ ಮಗಳನ್ನು ಗೌರವಿಸಬೇಕು’ ಎಂದು ಟ್ವೀಟ್ ಮೂಲಕ ಮೋದಿ ನಡೆಯನ್ನು ಮೆಚ್ಚಿದ್ದಾರೆ.

Share This Article
Leave a Comment