No menu items!
17 C
Munich
Saturday, May 2, 2026

ಇಂದು ಸಂಕ್ರಾಂತಿ ಮಾತ್ರವಲ್ಲ ಸೇನಾ ದಿನಾಚರಣೆ ಕೂಡ!

Must read

ಇಂದು ನಾಡಿನೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದ್ದು, ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಾವಿಂದು ಯಾವುದೇ ಭಯ, ಆತಂಕಗಳಿಲ್ಲದೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿವೆಯೆಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ದೇಶ ಕಾಯುತ್ತಿರುವ ಸೈನಿಕರು. ಇಂದು ಸಂಕ್ರಾಂತಿ ಸಡಗರ ಮಾತ್ರವಲ್ಲದೆ 72ನೇ ಸೇನಾ ದಿನಾಚರಣೆ ಕೂಡ! 1949 ರಲ್ಲಿ ಜನರಲ್ ಕೆ.ಎಂ ಕಾರ್ಯಪ್ಪ ಅವರು ಸೇನಾ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡ ದಿನವಿದು. ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಭಾರತೀಯ ಸೇನಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸೇನಾ ದಿನಾಚರಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಭಾರತೀಯ ಸೇನೆ ನಮ್ಮ ದೇಶ ಹಾಗೂ ಭಾರತಾಂಬೆಯ ಹೆಮ್ಮೆ. ಸೇನಾ ದಿನಾಚರಣೆಯ ಸಂದರ್ಭದಲ್ಲಿ ದೇಶದ ಎಲ್ಲಾ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ನಾನು ನಮಸ್ಕರಿಸುತ್ತೇನೆಂದು ಬರೆದುಕೊಂಡಿದ್ದಾರೆ.


ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇನಾ ದಿನಾಚರಣೆಯ ಶುಭಾಷಯ ತಿಳಿಸಿ, ಸೈನಿಕರು ನಮ್ಮ ದೇಶದ ಹೆಮ್ಮೆ. ನಿಮ್ಮ ತ್ಯಾಗ ದೇಶದಲ್ಲಿರುವ ಜನರನ್ನು ಕಾಪಾಡುತ್ತಿದೆ ಹಾಗೂ ಸಾರ್ವಬೌಮತ್ವವನ್ನು ಭದ್ರಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article