No menu items!
18.4 C
Munich
Friday, August 21, 2026

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ನೋಟುಗಳಿಂದ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯ

Must read

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ನೋಟುಗಳಿಂದ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯ

ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು. ಈ ಬಾರಿ ದೇವಿಗೆ ‘ಧನಲಕ್ಷ್ಮಿ’ ಅಲಂಕಾರ ಮಾಡಲಾಗಿದ್ದು, ನೋಟುಗಳಿಂದ ಸಿಂಗರಿಸಿದ ದೇವಾಲಯದ ಗರ್ಭಗುಡಿ ಭಕ್ತರ ಗಮನ ಸೆಳೆಯುತ್ತಿದೆ.
ಭಕ್ತರು ಕಾಣಿಕೆಯಾಗಿ ನೀಡಿದ್ದ ಸುಮಾರು ₹3 ಲಕ್ಷ ಹಣವನ್ನು ಬಳಸಿ ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶ ಅವರು ವೈಭವೋಪೇತ ಅಲಂಕಾರ ಮಾಡಿದ್ದಾರೆ. ₹10, ₹20, ₹50, ₹100, ₹200 ಹಾಗೂ ₹500 ಮುಖಬೆಲೆಯ ಹೊಸ ನೋಟುಗಳನ್ನು ಕಲಾತ್ಮಕವಾಗಿ ಜೋಡಿಸಿ ಗರ್ಭಗುಡಿ ಹಾಗೂ ದೇವಿಯ ಸುತ್ತಲೂ ಅಲಂಕರಿಸಲಾಗಿದೆ.
ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರು ಹಾಗೂ ಜನಸಾಮಾನ್ಯರಿಗೆ ಸಮೃದ್ಧಿ ದೊರೆಯಲಿ ಎಂಬ ಸಂಕಲ್ಪದೊಂದಿಗೆ ದೇವಿಗೆ ವಿಶೇಷ ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಧನಲಕ್ಷ್ಮಿ ರೂಪದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article