ಸಿದ್ದರಾಮಯ್ಯನವರ ಸರ್ಕಾರ ಮೂರುವರ್ಷ ಪೂರೈಸಿದೆ. ಈ ಮೂರು ವರ್ಷದಲ್ಲಿ ಸರ್ಕಾರ ಹಲವು ಸಾಧನೆಗಳನ್ನು ಮಾಡಿದೆ. ಅಷ್ಟೇ ವೇದನೆಗಳನ್ನು ಅನುಭವಿಸಿದೆ. ರೋಧನೆಗಳಿನ್ನೂ ಮುಗಿದಿಲ್ಲ. ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ಸಿದ್ದರಾಮಯ್ಯನವರ ಪದಚ್ಯುತಿಗೆ ಪ್ರಯತ್ನವಾಗುತ್ತಿತ್ತು. ಆದರೆ ಎಲ್ಲವನ್ನೂ ಎದುರಿಸಿ ಮೂರುವರ್ಷದ ಆಡಳಿತವನ್ನು ಪೂರೈಸಿದ್ದಾರೆ. ಬಡವರಪರವಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಅನಗತ್ಯ ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದಾರೆ. ಅವರ ಹಸಿವುಮುಕ್ತ ರಾಜ್ಯಕ್ಕಾಗಿ ಅನ್ನಾಭಗ್ಯ, ಅಪೌಷ್ಟಿಕತೆ ದೂರ ಮಾಡಲು ಶಾಲಾಮಕ್ಕಳಿಗೆ ಕ್ಷೀರಭಾಗ್ಯ, ಎಪಿಎಲ್ ಕುಟುಂಬಗಳಿಗೂ ಪಡಿತರ ಚೀಟಿ, ಅಹಿಂದ ವರ್ಗದ ಸಾಲಮನ್ನಾ, ವಿದ್ಯಾಸಿರಿ, ಶಾದಿಭಾಗ್ಯ ಯೋಜನೆಗಳು ಸಿದ್ದು ಸರ್ಕಾರದ ಬಡವರಪರ ಕಾಳಜಿಯನ್ನು ತೋರಿಸಿವೆ. ಶಾದಿಭಾಗ್ಯ ಯೋಜನೆಯನ್ನು ಒಂದು ಧರ್ಮಕ್ಕೆ ಮಾತ್ರ ಸೀಮಿತ ಮಾಡಿದ್ದು ಚರ್ಚೆಗೀಡಾಯಿತು. ಇದರ ಜೊತೆಗೆ ಹಲವು ವಿವಾದಗಳು ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಹಲವು ಅನಗತ್ಯ ವಿವಾದಗಳನ್ನು ಮಾಡಿಕೊಂಡರು. ಅರ್ಕಾವತಿ ಡಿನೋಟಿಫಿಕೇಶನ್, ಉಬ್ಲೋ ವಾಚ್, ಎಸಿಬಿ ರಚನೆ, ಪುತ್ರನ ಲ್ಯಾಬ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜಾಗ, ಕುಡಿಯುವ ನೀರಿನ ಘಟಕ ಸ್ಥಾಪನೆ ಟೆಂಡರ್ನಲ್ಲಿ ಗೋಲ್ ಮಾಲ್- ಇನ್ನಿತರೆ ವಿವಾದಗಳ ಜೊತೆಗೆ ಸಿದ್ದರಾಮಯ್ಯನವರ ಪದಚ್ಯುತಿಗೆ ಸ್ವಪಕ್ಷದಲ್ಲೇ ಒತ್ತಾಯ ಕೇಳಿಬಂದಿತ್ತು. ರಾಜ್ಯದ ಕೈ ನಾಯಕರು ಹೈಕಮಾಂಡ್ ಜೊತೆಗೆ ಹಲವಾರು ಮೀಟಿಂಗ್ ಮುಗಿಸಿ ಎದ್ದುಬಂದಿದ್ದರು. ಆದರೂ ಸಿಎಂ ಕುರ್ಚಿಗೆ ಕಂಟಕವಾಗಿಲ್ಲ. ಆದರೆ ಉಳಿದ ಎರಡು ವರ್ಷದ ಅವಧಿಯಲ್ಲಿ ಸಿದ್ರಾಮಯ್ಯನವರಿಗೆ ನಿಜವಾದ ಸವಾಲಿನ ಅವಧಿಯಾಗಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಕೈ ಮೇಲಾಗಬೇಕೆಂದರೇ ಮಿಕ್ಕ ಎರಡು ವರ್ಷ ಅಭೂತಪೂರ್ವ, ಜನಮೆಚ್ಚುಗೆಯ ಆಡಳಿತವನ್ನು ನಡೆಸಬೇಕಿದೆ. ಅಲ್ಲಿಯವರೆಗೂ ವಾಚ್, ಶಲ್ಯ, ಪಂಚೆ- ಇತ್ಯಾದಿಗಳನ್ನು ಹುಷಾರಾಗಿ ಬಳಸಬೇಕಿದೆ. ಎಲ್ಲಾ ವರ್ಗದವರು ಮೆಚ್ಚುವಂತಹ, ಐದುವರ್ಷ ಸಿಎಂ ಆಗಿ ಮುಂದುವರಿಯಲು ಬೇಕಾದಂತಹ ಕೆಲಸ ಮಾಡಬೇಕು.
- ರಾ ಚಿಂತನ್
POPULAR STORIES :
ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?