No menu items!
9.3 C
Munich
Wednesday, April 29, 2026

ಪಂತ್ ಕೇವಲ ಪ್ರವಾಸಿಗನಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರಂತೆ..!

Must read

ಪಂತ್ ಕೇವಲ ಪ್ರವಾಸಿಗನಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರಂತೆ..!
ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರ, ರಿಷಭ್ ಪಂತ್ ಭಾರತೀಯ ವಿಕೆಟ್ ಕೀಪರ್‌ಗಳ ಸರದಿಯಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡದಿಂದ ಹೊರಗುಳಿದ ನಂತರ ಆಕಾಶ್ ಚೋಪ್ರ ಈ ಮಾತನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ರಿಷಭ್ ಪಂತ್ ಕೇವಲ ಓರ್ವ ಪ್ರವಾಸಿಗನಾಗಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ಚೋಪ್ರ ಹೇಳಿದ್ದಾರೆ. 23ರ ಹರೆಯದ ರಿಷಭ್ ಪಂತ್ ಸೀಮಿತ ಓವರ್‌ಗಳ ಸರಣಿಯಲ್ಲಿ ಒಂದು ಪಂದ್ಯದಲ್ಲೂ ಅವಕಾಶವನ್ನು ಪಡೆದಿರಲಿಲ್ಲ. ಅದಾದ ಬಳಿಕ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಪಂದ್ಯದಿಂದಲೂ ಅವರನ್ನು ಹೊರಗಿಟ್ಟು ವೃದ್ಧಿಮಾನ್ ಸಾಹ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು.
ರಿಷಭ್ ಪಂತ್ ಭಾರತೀಯ ವಿಕೆಟ್ ಕೀಪರ್‌ಗಳ ಸರದಿಯಲ್ಲಿ ಅಂತಿಮ ಸ್ಥಾನದಲ್ಲಿ ನಿಲ್ಲುತ್ತಾರೆ ಮತ್ತು ಆ ಪಟ್ಟಿಯಲ್ಲಿ ಅವರು ಅತ್ಯಂತ ಕೆಳಗೆ ಕಾಣಿಸಿಕೊಳ್ಳುತ್ತಾರೆ. ಭಾರತೀಯ ತಂಡಕ್ಕೆ ಒಂದು ಆಯ್ಕೆಯಿರುತ್ತದೆ. ಆದರೆ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಪಂದ್ಯದಲ್ಲಿ ಐವರು ಬ್ಯಾಟ್ಸ್‌ಮನ್‌ಗಳ ಬದಲಾಗಿ ಆರು ಮಂದಿ ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯಬಹುದುತ್ತು ಎಂದು ಚೋಪ್ರ ಹೇಳಿದ್ದಾರೆ.
ವೃದ್ಧಿಮಾನ್ ಸಾಹ ಅವರನ್ನು ವಿಕೆಟ್ ಕೀಪರ್ ಆಗಿ ಖಂಡಿತಾ ಖಣಕ್ಕಿಳಿಸಬೇಕಿತ್ತು. ಆದರೆ ರಿಷಭ್ ಪಂತ್ ಅವರನ್ನು ಕೂಡ ಆಡಿಸಬಹುದಾಗಿತ್ತು ಎಂದು ಆಕಾಶ್ ಚೋಪ್ರ ಅಭಿಮಾನಿಯೊಬ್ಬರು ರಿಷಭ್ ಪಂತ್ ಅವರ ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದ ನಂತರ ರಿಷಭ್ ಪಂತ್‌ಗೆ ನಿರಂತರವಾಗಿ ಸಾಕಷ್ಟು ಅವಕಾಶಗಳು ದೊರೆಯಿತು. ಆದರೆ ಈ ಅವಕಾಶಗಳನ್ನು ಸಮರ್ಥವಾಗಿ ಬಳಸಲು ಪಂತ್ ವಿಫಲತಾದರು. ಹೀಗಾಗಿ ಸೀಮಿತ ಓವರ್‌ಗಳಲ್ಲಿ ಕೆಎಲ್ ರಾಹುಲ್ ತಂಡದ ಕೀಪಿಂಗ್ ಜವಾಬ್ಧಾರಿ ಹೊತ್ತಿದ್ದಾರೆ. ಕಳೆದ ಐಪಿಎಲ್‌ನಲ್ಲೂ ಪಂತ್ ಪ್ರದರ್ಶನ ನೀರಸವಾಗಿತ್ತು. ಟೂರ್ನಿಯಲ್ಲಿ ಕೇವಲ ಒಂದು ಅರ್ಧ ಶತಕವನ್ನು ಸಿಡಿಸಲಷ್ಟೇ ಪಂತ್ ಶಕ್ತರಾಗಿದ್ದರು.

ಪ್ರತಿಷ್ಠಿತ ಕಂಪನಿಗಳ ಲೋಗೋ ಹಿಂದಿನ ರಹಸ್ಯ..!

ನಮ್ಮ ಸುತ್ತಮುತ್ತ ಅದೆಷ್ಟೋ ಕಂಪನಿ ಬ್ರ್ಯಾಂಡ್ ಗಳ “ಲೋಗೋ”ಗಳನ್ನು ನೋಡಿರುತ್ತೀವಿ. ಈ ಲೋಗೋಗಳೂ ಸಹ ಕಂಪನಿಯ ಅಭಿವೃಧಿಗೆ ಪಾತ್ರವಾಗಿರುತ್ತವೆ ಹಾಗೂ ಪ್ರತಿಯೊಂದು ಚಿಹ್ನೆಗಳಲ್ಲಿ ಏನಾದರೂ ಮಾಹಿತಿ ಅಡಗಿರುತ್ತವೆ ಎಂದು ನಿಮಗೆ ಗೊತ್ತಿದೆಯಾ? ಇಲ್ಲವಾದರೆ ಕೆಲವು ಲೋಗೋಗಳ ಮಾಹಿತಿ ನಾವು ಕೊಡುತ್ತಿದ್ದೇವೆ. ಇದನ್ನು ತಿಳಿದುಕೊಂಡ ಬಳಿಕ ಬೇರೆ ಕಂಪನಿಯ ಚಿಹ್ನೆಗಳ ಮಾಹಿತಿ ಹುಡುಕಲು ನೀವು ಪ್ರಯತ್ನಿಸಿರಿ.

ಆ್ಯಪಲ್

ಆ್ಯಪಲ್ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ..? ಸ್ಟೀವ್ ಜಾಬ್ಸ್ ಎಂಬ ವ್ಯಕಿ ಚಿಕ್ಕ ಗ್ಯಾರೇಜ್ ಒಂದರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಐಫೋನ್, ಐಪ್ಯಾಡ್ಗಳ ಮೂಲಕ ಮನೆ ಮಾತಾಗಿದೆ.

ಆ್ಯಪಲ್ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅದರ ಅರ್ಧ ತಿಂದಿಟ್ಟಿರುವಂತಿರುವ ಸೇಬು. ವಿಶೇಷವೆಂದರೆ ಆ ಲೋಗೋದಲ್ಲಿ ಒಂದು ರಹಸ್ಯವಿದೆ.

ಬೈಬಲ್ನಲ್ಲಿ ಇರುವ ಆ್ಯಡಮ್ ಹಾಗೂ ಈವ್ನ ಕತೆಯನ್ನು ಇದು ಪ್ರತಿನಿಧಿಸುತ್ತದೆ. ಈವ್ ಮಾತಿಗೆ ಮರುಳಾಗಿ ಆ್ಯಡಮ್ ಪವಿತ್ರವಾದ ಹಣ್ಣು ತಿನ್ನಬಾರದಾಗಿತ್ತೋ ಅದನ್ನು ತಿಂದಿದ್ದನಂತೆ. ಅದನ್ನೇ ಆ್ಯಪಲ್ ಕಂಪನಿಯ ಸಿಂಬಲ್ಆಗಿ ಬಳಸಲಾಗುತ್ತಿದೆ.

ಆಡಿಡಾಸ್

ಅಡಿಡಾಸ್ ಎಂದರೆ ಥಟ್ಟನೆ ನೆನಪಿಗೆ ಬರುವುದು ಸ್ಫೋಟ್ಸರ್್. ಅಥರ್ಾತ್ ಕ್ರೀಡಾಲೋಕದಲ್ಲಿ ಅಡಿಡಾಸ್ಗೆ ಇರುವ ಮಹತ್ವ ಅಂತದ್ದು. ವಿಶ್ವಕ್ರಿಕೆಟ್ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೇಂಡ್ನ ಆಟಗಾರರಿಗೆ ಬಟ್ಟೆಗಳನ್ನು ಪ್ರಾಯೋಜತ್ವ ನೀಡುವುದು ಇದೇ ಅಡಿಡಾಸ್.

ಇಷ್ಟೇ ಅಲ್ಲದೇ ನಮ್ಮ ರೈನಾ, ಕೆ.ಎಲ್ ರಾಹುಲ್, ಜಡೇಜಾ, ವಿಂಡೀಸ್ನ ಬ್ರಾವೋರಂಥಹ ಘಟಾನುಘಟಿ ಆಟಗಾರರಿಗೆ ಅಡಿಡಾಸ್ ಬ್ಯಾಟೇ ಬೇಕು.

ಈ ಅಡಿಡಾಸ್ನ ಲೋಗೋದಲ್ಲಿ ಏರು ಮುಖದಲ್ಲಿರುವ 3 ದಪ್ಪನೆಯ ಗೆರೆಗಳಿವೆ. ಇವುಗಳು ಅಡಿಡಾಸ್ ಕಂಪನಿಯು ಯಾವುದೇ ಸವಾಲುಗನ್ನು ಎದುರಿಸಲು ಸಿದ್ಧ ಎನ್ನುವಂತೆ ವಿನ್ಯಾಸ ಮಾಡಲಾಗಿದೆ.

ಫೆಡ್ಎಕ್ಸ್

ನಮ್ಮಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿ ಬೇರೆಡೆ ಸಾಗಿಸಬೇಕಿದ್ದರೆ ಥಟ್ಟನೆ ನೆನಪಿಗೆ ಬರುವುದು ಫೆಡ್ಎಕ್ಸ್. ಅಮೆರಿಕಾದ ಈ ಕಂಪನಿ ಭಾರತೀಯರ ಮನದಲ್ಲೂ ಅಚ್ಚೊತ್ತಿಕೊಂಡಿದೆ.

ಫೆಡ್ ಎಕ್ಸ್ನ ಲೋಗೋದಲ್ಲೂ ಒಂದು ಅಚ್ಚರಿಯಿದೆ. ಸಾಮಾನ್ಯವಾಗಿ ಆ ಲೋಗೋವನು ನೋಡಿದಾಗ ಕೇವಲ ಇಂಗ್ಲೀಷ್ ಅಕ್ಷರದಲ್ಲಿ ಫೆಡ್ಎಕ್ಸ್ ಎಂದು ಬರೆದಿರುವುದು ಕಾಣಿಸುತ್ತದೆ. ಆದರೆ ಈ ಮತ್ತು ಎಕ್ಸ್ ಅಕ್ಷರಗಳ ಮಧ್ಯೆ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಬಾಣದ ಗುರುತು ಕಾಣಿಸುತ್ತದೆ.

ಫೆಡ್ ಎಕ್ಸ್ ಕಂಪನಿ ಪ್ರಕಾರ ವೇಗವಾಗಿ ವಸ್ತುಗಳನ್ನು ಡೆಲಿವರಿ ಮಾಡುವುದರ ಗುರಿಯನ್ನು ಈ ಲೋಗೋ ತೋರಿಸುತ್ತದೆ.

ಅಮೆಜಾನ್

ಈಗ ಎಲ್ಲೆಲ್ಲೂ ಆನ್ಲೈನ್ ಶಾಪಿಂಗ್ನದ್ದೇ ಮಾತು. ಮೊಬೈಲ್ನಿಂದ ಹಿಡಿದು ಪೆನ್ವರೆಗೂ ಎಲ್ಲವೂ ಆನ್ಲೈನ್ ದೊರೆಯುತ್ತವೆ. ಅಮೆರಿಕಾ ಮೂಲದ ಅಮೆಜಾನ್ ಕೂಡಾ ಆನ್ಲೈನ್ ಮಾರುಕಟ್ಟೆಯಲ್ಲಿ ದೊಡ್ಡ ಹೆಸರನ್ನೇ ಮಾಡಿದೆ.

ಆನ್ಲೈನ್ ಶಾಪಿಂಗ್ನ ದಿಗ್ಗಜ ಎಂದೇ ಹೆಸರುವಾಸಿಯಾಗಿರುವ ಅಮೆಜಾನ್ನ ಲೋಗೋವನ್ನು ನೀವು ಗಮನಿಸಿದರೆ ಅಮೆಜಾನ್ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವುದು ಕಾಣಿಸುತ್ತದೆ. ಆದರೆ ಎ ಮತ್ತು ಝೆಡ್ ಅಕ್ಷರ ಅಕ್ಷರಗಳ ಕೆಳಗೆ ಇರುವ ಒಂದು ಬಾಣ ನಿಮಗೆ ಕಾಣಿಸಿದರೂ ಅಷ್ಟೊಂದು ಅಚ್ಚರಿಯಿಂದ ನೋಡಿರುವುದಿಲ್ಲ.

ಆದರೆ, ಆ ಬಾಣದಲ್ಲೇ ಒಂದು ಟ್ವಿಸ್ಟ್ ಇದೆ. ಅಮೆಜಾನ್ ಸಂಸ್ಥೆಯು ಎ ಟು ಝೆಡ್ ಸರ್ವೀಸ್ ಒದಗಿಸುತ್ತದೆ ಎಂಬುದನ್ನು ಆ ಬಾಣವೇ ಪ್ರತಿನಿಧಿಸುತ್ತದೆ.

ಬಾಸ್ಕಿನ್ ರಾಬಿನ್ಸ್

ಐಸ್ ಕ್ರೀಮ್ ಪ್ರಿಯರು ನೀವಾಗಿದ್ದಲ್ಲಿ ಬಾಸ್ಕಿನ ರಾಬಿನ್ಸ್ ಹೆಸರು ಕೇಳಿರಲೇಬೇಕು. ವಿಧವಿಧದ ಐಸ್ ಕ್ರೀಮ್ ಗಳನ್ನು ತಯಾರಿಸುವ ಅಮೆರಿಕಾದ ಈ ಕಂಪನಿ ಜಗತ್ತಿನೆಲ್ಲೆಡೆಯ ಜನರಿಗೆ ಐಸ್ ಕ್ರೀಮ್ ರುಚಿಯನ್ನು ಉಣಬಡಿಸುತ್ತಿದೆ.

ಬಾಸ್ಕಿನ್ ರಾಬಿನ್ಸ್ ಸುಮಾರು 31 ವಿಧವಾದ ಐಸ್ ಕ್ರೀಮ್ಗಳನ್ನು ಮಾರಾಟ ಮಾಡುತ್ತಿದೆ. ಅದನ್ನು ಜಗತ್ತಿಗೆ ತಿಳಿಸಲು ರಾಬಿನ್ಸ್ ವಿಭಿನ್ನ ತಂತ್ರ ಹೆಣೆದಿದೆ. ಅದೇನೆಂದರೆ ಬಾಸ್ಕಿನ್ ರಾಬಿನ್ಸ್ ನ ಲೋಗೋದ ಮಧ್ಯೆ 31 ಎಂಬಂತೆ ಸಂಖ್ಯೆಯನ್ನು ಮುದ್ರಿಸಲಾಗಿದೆ. ಅದೇ ಬಾಸ್ಕಿನ್ ರಾಬಿನ್ಸ್ನ 31 ವಿಧದ ರುಚಿಯನ್ನು ಪ್ರತಿನಿಧಿಸುತ್ತದೆ.

ಸೋನಿ ವೈಯೋ

ಸೋನಿ ಕಂಪನಿಯು ವೈಯೋ ಹೆಸಸರಿನಲ್ಲಿ ಲ್ಯಾಪ್ ಟಾಪ್ ಗಳನ್ನು ತಯಾರಿಸುತ್ತಿರುವುದು ಜಗತ್ತಿಗೇ ತಿಳಿದಿರುವ ವಿಚಾರ. ಜಪಾನ್ ಮೂಲದ ಈ ಕಂಪನಿ ತನ್ನ ಗುಣಮಟ್ಟದಿಂದಲೇ ಅಪಾರ ಪ್ರಮಾಣದ ಗ್ರಾಹಕರನ್ನು ಹೊಂದಿದೆ.

ಸೋನಿಯು ತನ್ನ ಮೊದಲ ಲ್ಯಾಪ್ ಟಾಪ್ ಗೆ ವೈಯೋ ಅಂತ ಹೆಸರಿಟ್ಟಿದೆ. ಆದರೆ ಅದರ ಲೋಗೋ ಒಮ್ಮೆ ನೀವು ನೋಡಿ ಇಂಗ್ಲೀಷ್ ನ ವಿ ಮತ್ತು ಎ ಅಕ್ಷರಗಳನ್ನು ಒಂದು ರೀತಿಯಲ್ಲಿ ಬರೆದರೆ ಐ ಮತ್ತು ಓ ಅಕ್ಷರಗಳನ್ನು ಇನ್ನೊಂದು ರೀತಿಯಲ್ಲಿ ಬರೆದಿದ್ದಾರೆ. ಮೊದಲ ಎರಡು ಅಕ್ಷರ ಎಲೆಕ್ಟ್ರಾನಿಕ್ಸ್ನ ಸೂಚಕ ಅನಾಲಾಗ್ ಹಾಗೂ ಇನ್ನುಳಿದ ಎರಡು ಅಕ್ಷರ ಡಿಜಿಟಲ್ ಎಂಬುದನ್ನು ಪ್ರತಿನಿಧಿಸುತ್ತವೆ.

ಮರ್ಸಿಡೀಸ್ ಬೆಂಝ್

ಕಾರ್ ಕೊಂಡುಕೊಂಡರೆ ಅದು ಮರ್ಸಿಡೀಸ್ ಬೆಂಝ್ ಆಗಿರಬೇಕು ಎಂಬುದು ಪಡ್ಡೆ ಹೈಕ್ಳ ವರಾತ. ತನ್ನ ಗುಣಮಟ್ಟದಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಮರ್ಸಿಡೀಸ್ ಶ್ರೀಮಂತಿಕೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ವಿಶೇಷವೆಂದರೆ ಈ ಕಂಪನಿಯ ಎಲ್ಲಾ ಕಾರುಗಳ ಪ್ರಾರಂಭಿಕ ಬೆಲೆಯೇ 25 ಲಕ್ಷಕ್ಕೂ ಹೆಚ್ಚು.

ವಿಶ್ವದ ದುಬಾರಿ ಕಾರು ಎನಿಸಿಕೊಂಡಿರುವ ಮಸರ್ಿಡಿಸ ್ನ ಲೋಗೊ ನೋಡಿದಾಗ ಕೇವಲ ಮೂರು ಮುಳ್ಳು ಗೋಚರಿಸುತ್ತದೆ. ಅವುಗಳು ಮೂರು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ. ಮಸರ್ಿಡಿಸ್ನ ಪ್ರಕಾರ ಆಕಾಶ, ಭೂಮಿ ಹಾಗೂ ನೀರಿನಲ್ಲೂ ಪ್ರಭುತ್ವ ಸಾಧಿಸಿದ್ದೇವೆ ಎನ್ನುತ್ತದೆ.

ವೋಕ್ಸ್ ವ್ಯಾಗನ್

ಭಾರತದಲ್ಲಿ ಧೂಳೆಬ್ಬಿಸುತ್ತಿರುವ ಕಾರ್ ಕಂಪನಿಗಳ ಪಟ್ಟಿಯಲ್ಲಿ ವೋಕ್ಸ್ ವ್ಯಾಗನ್ ಗೆ ಪ್ರಮುಖ ಸ್ಥಾನವಿದೆ. ಜರ್ಮನಿ ಮೂಲದ ಈ ಕಾರು ತಯಾರಿಕಾ ಕಂಪನಿಯು ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ವೋಕ್ಸ್ವ್ಯಾಗನ್ ಲೋಗೋವನ್ನು ಗಮನಿಸಿದಾಗ ದೊಡ್ಡ ಡಬ್ಲ್ಯೂ ಮೇಲೆ ಒಂದು ಚಿಕ್ಕ ವಿ ಅಕ್ಷರವಿದೆ. ಜರ್ಮನಿಯಲ್ಲಿ ವೋಕ್ಸ್ ಎಂದರೆ ಜನ ಹಾಗೂ ವ್ಯಾಗನ್ ಎಂದರೆ ವಾಹನ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ವೋಕ್ಸ್ ವ್ಯಾಗನ್ ಕಾರನ್ನು ಜನಸಾಮಾನ್ಯನ ಕಾರು ಎಂದು ಕರೆಯಲು ಅಡ್ಡಿಯಿಲ್ಲ ಎಂಬುದು ಆ ಕಂಪನಿಯ ಆಂಬೋಣ.

ಕೋಕೋ ಕೋಲಾ
ಸಾಫ್ಟ್ ಡ್ರಿಂಕ್ಸ್ ಹೆಸರು ಹೇಳಿದಾಕ್ಷಣ ನೆನಪಿಗೆ ಬರುವ ಹೆಸರು ಕೋಕ್. ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ತಂಪುಪಾನೀಯಗಳ ಪಟ್ಟಿಯಲ್ಲಿ ಕೋಕಾ ಕೋಲಾಗೆ ಅಗ್ರಸ್ಥಾನ. ಹೆಚ್ಚು ಕಡಿಮೆ ವಿಶ್ವದ ಎಲ್ಲಾ ದೇಶಗಳಲ್ಲೂ ಕೋಕ್ ನ ಕಂಪು ಹರಡಿದೆ.

ಕೋಕಾ ಕೋಲಾದ ಲೋಗೋದಲ್ಲಿ ಒಂದು ಬೃಹತ್ ಅಚ್ಚರಿ ಇದೆ ಎಂದರೆ ನೀವು ಅಚ್ಚರಿಪಡುತ್ತೀರಿ. ಯೆಸ್ ಅದರಲ್ಲಿ ಲೋಗೋದಲ್ಲಿ ವಿಭಿನ್ನ ಅಕ್ಷರದಲ್ಲಿ ಕೋಕಾ ಕೋಲಾ ಎಂದು ಬರೆಯಲಾಗಿದೆ. ಆದರೆ ಈ ತರಹ ಬರೆದಿರುವುದರಲ್ಲೂ ಒಂದು ಮರ್ಮ ಅಡಗಿದೆ. ಕೋಕ್ ನ ಲೋಗೋವನ್ನು ಹಿಮ್ಮುಕವಾಗಿ ಓದಿದಾಗ ಅರೇಬಿಕ್ ಭಾಷೆಯಲ್ಲಿ ನೋ ಮೊಹಮ್ಮದ್ ನೋ ಮೆಕ್ಕಾ ಅಂತಾ ಕಾಣಿಸುತ್ತದೆ. ಇದು ಮೊಹಮ್ಮದ್ ಪೈಗಂಬರ್ ಇಲ್ಲದೇ ಅವರ ಮೆಕ್ಕಾ ಕೂಡ ಇರುತ್ತಿರಲಿಲ್ಲ ಎಂದು ಅರ್ಥೈಸುತ್ತದೆ.

ಪೆಪ್ಸಿ

ಕೋಲ್ಡ್ ಡ್ರಿಂಕ್ಸ್ ಎಂದರೆ ಪೆಪ್ಸಿ ಎನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಆನಸಾಮಾನ್ಯರ ಆಹಾರದ ಭಾಗವಾಗಿರುವ ಪೆಪ್ಸಿ ವರ್ಷಕ್ಕೆ ಸುಮಾರು 8 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸುತ್ತದೆ. ಅಲ್ಲದೇ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಪೆಪ್ಸಿ ತನ್ನ ವಹಿವಾಟು ನಡೆಸುತ್ತಿದೆ.

ತಂಪುಪಾನಿಯ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಪೆಪ್ಸಿ ತನ್ನ ಲೋಗೋದಿಂದಲೇ ಸುದ್ದಿಗೆ ಬಂದಿದೆ. ಪೆಪ್ಸಿ ಲೋಗೋ 2008 ತನಕ ಕೆಂಪು ಹಾಗೂ ನೀಲಿ ಬಣ್ಣದ ಬಾಲ್ ನಂತಿತ್ತು. ಈಗ ಅದರಲ್ಲಿ ಸ್ವಲ್ಪಮಟ್ಟದ ಬದಲಾವಣೆಯಾಗಿದೆ. ಈ ಲೋಗೋ ತಯಾರಿಸುವುದಕ್ಕೆ ಪೆಪ್ಸಿ ಕಂಪನಿ ಕನಿಷ್ಟ ಒಂದು ಮಿಲಿಯನ್ ಡಾಲರ್ ಖರ್ಚು ಮಾಡಿದೆಯಂತೆ. ಅದು ಡಾವಿಂಚಿಕೋಡ್ ನ ಮಾದರಿಯಂತಿದೆ ಅಂತ ಪೆಪ್ಸಿ ಹೇಳಿಕೊಂಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article