ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಕನಸನ್ನ ನನಸು ಮಾಡಿಕೊಂಡೆ.

0
311

ಸ್ಯಾಂಡಲ್ ವುಡ್ ನ ಸ್ಟಾರ್ ಕಾಮಿಡಿ ನಟ ಅಂತ ಹೇಳಿದರೆ ಚಿಕ್ಕಣ್ಣ ಹೆಸರು ಮೊದಲು ಬರುತ್ತೆ, ಮೊದಲು ಕಿರುತೆರೆ ಕಾಮಿಡಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಚಿಕ್ಕಣ್ಣ ಇದೀಗ ಬೃಹದಾಕಾರವಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಅಧ್ಯಕ್ಷ ಚಿತ್ರದ ಮೂಲಕ ಹೆಚ್ಚು ಹೆಸರು ಗಳಿಸಿದ ಚಿಕ್ಕಣ್ಣ ಈಗ ಎಲ್ಲಾ ಸ್ಟಾರ್ ನಟರ ಚಿತ್ರದಲ್ಲಿ ಚಿಕ್ಕಣ್ಣ ಇದ್ದೇ ಇರ್ತಾರೆ ಹಾಗೆ ಚಿಕ್ಕಣ್ಣ ಅವರ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು, ಕೆಲವು ತಿಂಗಳಿನಿಂದ ಚಿತ್ರರಂಗ corona ಬೀತಿ ಇಂದ ಸರ್ಕಾರದ ಅದೇಶದ ಮೇಲೆ ಸ್ತಬ್ದ ವಾಗಿತ್ತು ಆ ಸಂದರ್ಭದಲ್ಲಿ ಚಿಕ್ಕಣ್ಣ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಮೂಲತಹ ರೈತ ಕುಟುಂಬದಿಂದ ಬಂದಿದ್ದ ಕಂತ ಚಿಕ್ಕಣ್ಣ ಅವರಿಗೆ ತಮ್ಮದೇ ಆದ ಒಂದು ಫಾರ್ಮಹೌಸ್ ಮಾಡಬೇಕೆಂಬ ಆಸೆ ಇತ್ತು, ಹಾಗೆಯೇ ತಾವು ಮೈಸೂರಿನಲ್ಲಿ ಎರಡು ವರ್ಷದ ಹಿಂದೆ ಖರೀದಿಸಿದ ಒಂದು ಜಾಗದಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹೈನುಗಾರಿಕೆ ಹಾಗೂ ಕೃಷಿ ಮಾಡುವ ಕನಸನ್ನ ನನಸು ಮಾಡಿಕೊಂಡಿದ್ದಾರೆ. ನಾಟಿ ಕೋಳಿ ಹಾಗೂ ಕುರಿ ಫಾರ್ ಮಾಡಿರುವ ಚಿಕ್ಕಣ್ಣನಿಗೆ ಮೊದಲಿಂದಲೂ ಇದರ ಮೇಲೆ ಆಸಕ್ತಿ ಇತ್ತು ಎಂದು ಸ್ವತಹ ಚಿಕ್ಕಣ್ಣ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ ಚಾಮುಂಡೇಶ್ವರಿ ಮೇಕೆ ಮತ್ತು ಕೋಳಿ ಫಾರ್ಮ್ ಎಂಬ ಹೆಸರನ್ನು ಚಿಕ್ಕಣ್ಣ ಈ ಜಾಗಕ್ಕೆ ಇಟ್ಟಿದ್ದಾರೆ.ಸಿಲ್ವರ್ ತೇಗ ರಕ್ತಚಂದನ ಮುಂತಾದ ಗಿಡಗಳನ್ನು ತಮ್ಮ ಫಾರ್ಮ್ ನಲ್ಲಿ ಚಿಕ್ಕಣ್ಣ ಬೆಳೆಸಿದ್ದಾರೆ.

ಫಾರ್ಮ್ ಮಾಡುವ ಕನಸು ನನ್ನ ತಂದೆ ಅವರದ್ದು ಹಾಗೂ ನನಗೆ ಇನ್ಸ್ಪಿರೇಷನ್ ಅಂದ್ರೆ ದರ್ಶನ್ ಸರ್ ಅವರು, ದರ್ಶನ್ ಸರ್ ಫಾರ್ಮಿಗೆ ಎಷ್ಟು ಸಲ ಹೋದ್ರು ಇನ್ನಷ್ಟು ನೋಡಬೇಕು ಅನ್ನೋ ಆಸೆ ಬರುತ್ತೆ ಅದನ್ನು ನೋಡಿ ನನಗೂ ಸಹ ಮಾಡಬೇಕೆಂಬ ಆಸೆ ಬಂತು ಹಾಗಾಗಿ ಚಿಕ್ಕದಾಗಿ ಶುರುಮಾಡಿದ್ದೇನೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಹಾಗೆ ಮುಂದೆ ತನ್ನದೇಯಾದ ಒಂದು ಕನಸಿನ ಮನೆಯನ್ನು ಕಟ್ಟಬೇಕೆಂಬ ಬಯಕೆ ಇದೆ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ.