No menu items!
11.1 C
Munich
Wednesday, April 29, 2026

ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟು ಬಿದ್ದ ಮಾಸ್ಟರ್! ಇಲ್ಲಿದೆ ಪ್ರೂಫ್..

Must read

ಮಾಸ್ಟರ್.. ಕಳೆದ 15 ದಿನಗಳಿಂದ ಈ ಚಿತ್ರದ್ದೇ ಜಪ. ಎಲ್ಲಿ ನೋಡಿದರೂ ಮಾಸ್ಟರ್ ಸಿನಿಮಾದ ಹವಾ ಎದ್ದಿತ್ತು. ಇಷ್ಟರಮಟ್ಟಿಗೆ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಮಾಸ್ಟರ್ ಚಿತ್ರ ನಿನ್ನೆ ಭರ್ಜರಿಯಾಗಿ ಬಿಡುಗಡೆಯಾಯಿತು. ಈ ಚಿತ್ರ ಸೃಷ್ಟಿಸಿದ್ದ ಹವಾ ನೋಡಿ ಮಾಸ್ಟರ್ ಅತಿದೊಡ್ಡ ಹಿಟ್ ಆಗಲಿದೆ, ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನು ಮುರಿದು ಹಾಕಲಿದೆ ಎಂದೆಲ್ಲಾ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ತಕ್ಕಂತೆ ಮಾಸ್ಟರ್ ಚಿತ್ರದ ಟಿಕೆಟ್ಗಳು ಬಿಸಿಬಿಸಿ ಬಿಡದಿ ತಟ್ಟೆ ಇಡ್ಲಿಯಂತೆ ಸೇಲ್ ಆದವು… ಆದರೆ ಬಿಡದಿ ತಟ್ಟೆ ಇಡ್ಲಿ ರೀತಿ ಮಾಸ್ಟರ್ ರುಚಿ ಇಲ್ಲ ಅನಿಸುತ್ತೆ..

 

 

ಹೌದು ಮಾಸ್ಟರ್ ಚಿತ್ರಕ್ಕೆ ಹೇಳಿಕೊಳ್ಳುವಂತಹ ಪ್ರಶಂಸೆ ಬರುತ್ತಿಲ್ಲ. ಹಾಗಂತ ಚಿತ್ರ ಕಳಪೆ ಮಟ್ಟದಲ್ಲಿ ಏನು ಇಲ್ಲ. ವಿಜಯ್ ಅಭಿಮಾನಿಗಳಿಗೆ ಸಕ್ಕತ್ ಇಷ್ಟವಾಗುತ್ತದೆ ಹಾಗೆ ಸಾಮಾನ್ಯ ಪ್ರೇಕ್ಷಕನಿಗೆ ಒಂದೊಮ್ಮೆ ನೋಡಲು ಯಾವುದೇ ರೀತಿಯ ಭಾರವೆನಿಸುವುದಿಲ್ಲ. ಒಟ್ಟಾರೆಯಾಗಿ ಸಿನಿಮಾ ಓಕೆ ಓಕೆ.. ಇನ್ನು ಮಾಸ್ಟರ್ ಚಿತ್ರಕ್ಕೆ ದೊಡ್ಡ ಹೊಡೆತ ಕೊಟ್ಟದ್ದು ತೆಲುಗಿನ ಕ್ರ್ಯಾಕ್ ಸಿನಿಮಾ..! ಹೌದು ಮಾಸ್ಟರ್ ಚಿತ್ರ ಕೊಂಚ ಕೆಳಗೆ ಬೀಳುವಂತೆ ಮಾಡಿದ್ದು ಕ್ರ್ಯಾಕ್ ಸಿನಿಮಾ..

 

 

ರವಿತೇಜ, ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕ್ರ್ಯಾಕ್ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿ ಕ್ರ್ಯಾಕ್ ಸಿನಿಮಾ ದಂಡಯಾತ್ರೆಯನ್ನು ಮಾಡುತ್ತಿದೆ.. ಯಾರು ನಿರೀಕ್ಷೆ ಮಾಡಿರದ ರೀತಿಯಲ್ಲಿ ಮಾಸ್ಟರ್ ಸಿನಿಮಾ ಗಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡು ರಾರಾಜಿಸುತ್ತಿದೆ.. ಹೌದು ಇಲ್ಲಿಯವರೆಗೆ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಬುಕ್ ಮೈ ಶೋ ನಲ್ಲಿ ಪಡೆದುಕೊಂಡಿರುವ ರೇಟಿಂಗ್ 79%, ಹಾಗೆ ರವಿತೇಜ ಅಭಿನಯದ ಕ್ರ್ಯಾಕ್ ಸಿನಿಮಾ ಬುಕ್ ಮೈ ಶೋ ನಲ್ಲಿ ಪಡೆದುಕೊಂಡಿರುವ ರೇಟಿಂಗ್ ಬರೋಬ್ಬರಿ 84%..

 

 

ಈ ರೇಟಿಂಗ್ ಗಳನ್ನು ನೋಡಿದರೆ ಯಾವ ಚಿತ್ರ ಗೆದ್ದಿದೆ & ಯಾವ ಚಿತ್ರ ಬಿದ್ದಿದೆ ಎಂಬುದು ನಿಮಗೇ ತಿಳಿಯುತ್ತದೆ.. ಮಾಸ್ಟರ್ ಸಿನಿಮಾ ರೇಟಿಂಗ್ ಕಡಿಮೆ ಪಡೆದುಕೊಂಡಿದ್ದರೂ ಸಹ ಕಲೆಕ್ಷನ್ನಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಭರ್ಜರಿ ಕಲಕ್ಷನ್ ಮಾಡುತ್ತಿರುವುದು ನಿಜ.. ಆದರೆ ರೇಟಿಂಗ್ ಪ್ರಕಾರ ಸಂಕ್ರಾಂತಿಯ ವಿನ್ನರ್ ತೆಲುಗಿನ ಕ್ರ್ಯಾಕ್ ಸಿನಿಮಾ..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article