ಮಹಮ್ಮದ್ ಸಿರಾಜ್.. ಸದ್ಯ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಭಾರತದ ಆಟಗಾರ. ಮೊದಮೊದಲು ಅತಿಹೆಚ್ಚು ಟ್ರೋಲ್ ಗಳಿಗೆ ಆಹಾರವಾಗಿದ್ದ ಮಹಮ್ಮದ್ ಸಿರಾಜ್ ಅವರು ಇದೀಗ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಮಹಮ್ಮದ್ ಸಿರಾಜ್ ಅವರ ಬೌಲಿಂಗ್ ಗೆ ಎಲ್ಲರೂ ಫಿದಾ ಆಗಿದ್ದಾರೆ.
ಇನ್ನು ಸಿರಾಜ್ ಅವರು ಮೂಲತಹ ಬಡ ಕುಟುಂಬದಲ್ಲಿ ಬೆಳೆದು ಬಂದ ಪ್ರತಿಭೆ. ಸಿರಾಜ್ ಅವರ ತಂದೆ ಆಟೋ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹೀಗೆ ಕಷ್ಟದಲ್ಲಿಯೇ ನಾನೊಬ್ಬ ಕ್ರಿಕೆಟರ್ ಆಗಬೇಕು ಎಂಬ ಕನಸನ್ನು ಕಂಡ ಸಿರಾಜ್ ಅವರು ಇದೀಗ ತಮ್ಮ ಕನಸನ್ನು ನನಸು ಮಾಡಿದ್ದಾರೆ. ಕ್ರಿಕೆಟ್ ವೃತ್ತಿಯಲ್ಲಿ ಸಕ್ಸಸ್ ಹಾದಿ ತುಳಿದಿರುವ ಸಿರಾಜ್ ಅವರು ಇದೀಗ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ..
ಒಬ್ಬ ಆಟೋ ಡ್ರೈವರ್ ಮಗನಾಗಿ ಬೆಳೆದ ಸಿರಾಜ ಅವರು ಇದೀಗ ಐಷಾರಾಮಿ ಬಿಎಂಡಬ್ಲ್ಯೂ ಕಾರಿನ ಮಾಲೀಕರಾಗಿದ್ದಾರೆ.. ಆದರೆ ಸಿರಾಜ್ ಅವರ ಒಂದು ಸಕ್ಸಸ್ ನೋಡಲು ಅವರ ತಂದೆ ಬದುಕಿಲ್ಲ. ಏನೇ ಆಗಲಿ ಸಿರಾಜ್ ಅವರ ಈ ಒಂದು ಗೆಲುವಿನ ಹಾದಿ ನಿಜಕ್ಕೂ ಹಲವಾರು ಬಡಕುಟುಂಬದ ಪ್ರತಿಭೆಗಳಿಗೆ ಮಾದರಿ.