No menu items!
19.6 C
Munich
Friday, May 1, 2026

ಕಸದ ರಾಶಿಯಲ್ಲಿ ಮಾನವ ಅಸ್ಥಿಪಂಜರ ಅವಶೇಷ ಪತ್ತೆ!

Must read

ಕಸದ ರಾಶಿಯಲ್ಲಿ ಮಾನವ ಅಸ್ಥಿಪಂಜರ ಅವಶೇಷ ಪತ್ತೆ!

ನವದೆಹಲಿ: ದೆಹಲಿಯಲ್ಲಿ ಕಸದ ರಾಶಿ ವಿಲೇವಾರಿ ಮಾಡುತ್ತಿದ್ದ ವೇಳೆ ಮಾನವ ಅಸ್ಥಿಪಂಜರದಂತಿರುವ ಅವಶೇಷಗಳು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.

ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೃಕ್ಷಿತ್ ಫೌಂಡೇಶನ್‌ನ ಸ್ವಯಂಸೇವಕರು ಕಸದ ರಾಶಿ ತೆರವುಗೊಳಿಸುತ್ತಿದ್ದಾಗ ಈ ಅನುಮಾನಾಸ್ಪದ ಅವಶೇಷಗಳು ಕಂಡುಬಂದಿವೆ. ರಕ್ಷಣಾತ್ಮಕ ಕೈಗವಸು ಮತ್ತು ಮುಖವಾಡ ಧರಿಸಿ ಕೆಲಸ ಮಾಡುತ್ತಿದ್ದ ಸ್ವಯಂಸೇವಕರು ಕಸದ ರಾಶಿಯಲ್ಲಿ ಹೂತುಹೋಗಿದ್ದ ಮೂಳೆಗಳಂತೆ ಕಾಣುವ ವಸ್ತುಗಳನ್ನು ಗಮನಿಸಿದ್ದಾರೆ.

ಅವಶೇಷಗಳು ಪತ್ತೆಯಾದ ತಕ್ಷಣ ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಕಸದ ರಾಶಿಯಲ್ಲಿ ಮೂಳೆಗಳ ಜೊತೆಗೆ ಕೆಲವು ವೈದ್ಯಕೀಯ ತ್ಯಾಜ್ಯಗಳೂ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬಳಿಕ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅವಶೇಷಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಮೂಳೆಗಳು ನಿಜವಾಗಿಯೂ ಮಾನವ ಅಸ್ಥಿಪಂಜರದ ಅವಶೇಷಗಳೇ ಅಥವಾ ವೈದ್ಯಕೀಯ ತರಬೇತಿ ಅಥವಾ ಪ್ರಯೋಗಾಲಯದಲ್ಲಿ ಬಳಸುವ ವಸ್ತುಗಳ ಭಾಗವೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ನಿರ್ಲಕ್ಷಿಸದೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸ್ವಯಂಸೇವಕರನ್ನು ಹಲವರು ಪ್ರಶಂಸಿಸಿದ್ದಾರೆ.

- Advertisement -spot_img

More articles

- Advertisement -spot_img

Latest article