No menu items!
9.3 C
Munich
Wednesday, April 29, 2026

ದಾಖಲೆ ಮೇಲೆ ದಾಖಲೆ ಬರೆದ ಅಶ್ವಿನ್

Must read

ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿರುವ ಅಶ್ವಿನ್, ಹಲವಾರು ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆರ್‌ ಅಶ್ವಿನ್ ಶತಕ ಬಾರಿಸಿದ್ದರು. ಅಶ್ವಿನ್ ಈ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
ಅಂದ್ಹಾಗೆ, ಅಶ್ವಿನ್ ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು ಶತಕ ಬಾರಿಸಿದ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ.
(ಟೆಸ್ಟ್‌ ಕ್ರಿಕೆಟ್‌ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು ಹೆಚ್ಚು ಬಾರಿ ಶತಕ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ)
* ಡೇನಿಯಲ್ ವೆಟೋರಿ, ನ್ಯೂಜಿಲೆಂಡ್, 4 ಸಾರಿ
* ಆರ್‌ ಅಶ್ವಿನ್, ಭಾರತ, 3 ಸಾರಿ

* ಕಮ್ರನ್ ಅಕ್ಮಲ್, ಪಾಕಿಸ್ತಾನ, 3 ಸಾರಿ


ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಇನ್ನೂ ಮದುವೆ ಆಗಿಲ್ಲ. ಆದರೆ ಹಲವರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಅನೇಕ ನಟಿಯರ ಜೊತೆ ಅವರ ಹೆಸರು ಕೇಳಿಬರುತ್ತಲೇ ಇದೆ. ಅದರಲ್ಲಿ ಪಾಕಿಸ್ತಾನ ಮೂಲದ ಸೋಮಿ ಅಲಿ ಕೂಡ ಒಬ್ಬರು. ತಮ್ಮ 16ನೇ ವಯಸ್ಸಿನಲ್ಲಿಯೇ ಸಲ್ಮಾನ್‌ ಖಾನ್‌ ಮೇಲೆ ಅವರಿಗೆ ಕ್ರಶ್‌ ಆಗಿತ್ತು. ಹಾಗಾಗಿ ಅವರು ಮನೆ ಬಿಟ್ಟು ಮುಂಬೈಗೆ ಬಂದಿದ್ದರು.
ಸಲ್ಮಾನ್‌ರನ್ನು ಮದುವೆ ಆಗಬೇಕು ಎಂಬ ಉದ್ದೇಶ ಹೊಂದಿದ್ದ ಸೋಮಿ, ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಶುರುಮಾಡಿದರು. ಆದರೆ ಅವರಿಗೆ ನಟನೆಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ರಿಹರ್ಸಲ್‌ಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ನಿರ್ದೇಶಕರಿಗೆ ಸೋಮಿ ಅಲಿಯ ಈ ಗುಣಗಳು ಇಷ್ಟ ಆಗುತ್ತಿರಲಿಲ್ಲವಂತೆ. ಹಾಗೋ ಹೀಗೋ 1999ರವರೆಗೆ ಒಂದಷ್ಟು ಸಿನಿಮಾಗಳಲ್ಲಿ ಸೋಮಿ ನಟಿಸಿದರು. ಜೊತೆಗೆ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ ಕೂಡ ಮಾಡಿದ್ದರು ಎಂಬ ಮಾತಿಗೆ.
ಕೊನೆಗೂ ಸಲ್ಮಾನ್‌ ಖಾನ್‌ ಜೊತೆ ಮದುವೆ ಆಗಲು ಸೋಮಿಗೆ ಸಾಧ್ಯವಾಗಲೇ ಇಲ್ಲ. ‘ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ನಾನು ತುಂಬ ತಪ್ಪು ಮಾಡಿದೆ. ಕೊನೆಗೂ ಅದು ನನಗೆ ಸಿಗಲೇ ಇಲ್ಲ. ಹಾಗಂತ ನನಗೆ ಪಶ್ಚಾತ್ತಾಪ ಇಲ್ಲ. ಯಾಕೆಂದರೆ ಅದನ್ನೆಲ್ಲ ನಾನು ಮನಸಾರೆ ಮಾಡಿದ್ದೆ. 16ರಿಂದ 24ನೇ ವಯಸ್ಸಿನವರೆಗೆ ನನ್ನ ಜರ್ನಿ ತುಂಬ ಏಳು-ಬೀಳುಗಳಿಂದ ಕೂಡಿತ್ತು. ನಾನು ಯಾರಿಗಾಗಿ ಮುಂಬೈಗೆ ಬಂದಿದ್ದೆನೋ ಅವರ ಜೊತೆ ನನ್ನ ಸಂಬಂಧ ಕಡಿದುಕೊಂಡು 1999ರಲ್ಲಿ ಭಾರತ ಬಿಟ್ಟು ಬಂದೆ’ ಎಂದಿದ್ದಾರೆ ಸೋಮಿ. ಈಗ ಅವರು ಅಮೆರಿಕದಲ್ಲಿ ಎನ್‌ಜಿಓ ನಡೆಸುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article