ಈ ಸಲ ಕಪ್ ಹೊಡೆಯದೇ ಬಿಡಲ್ಲ ಎಂದ ಹೊಸದಾಗಿ ಆರ್ ಸಿ ಬಿ ಸೇರಿದ ಮ್ಯಾಕ್ಸ್ ವೆಲ್!

admin
By admin
1 Min Read

ಈ ಬಾರಿಯ ಐಪಿಎಲ್ ಆಕ್ಷನ್ ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 14ಕೋಟಿ ರೂಪಾಯಿ ಬಿಡ್ ಮಾಡಿ ಖರೀದಿಸಿದೆ. ತನ್ನ ಹೊಡಿ ಬಡಿ ಹಠದಿಂದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಈ ಹಿಂದೆ ಸಖತ್ ಫೇಮಸ್ ಆಗಿದ್ದರು.

 

 

ಐಪಿಎಲ್ ನಲ್ಲಿ ಇರುವ ಡೇಂಜರಸ್ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಮ್ಯಾಕ್ಸ್ ವೆಲ್ ಅವರು ಕೂಡ ಒಬ್ಬರು. ಆದರೆ ಕಳೆದೆರಡು ಸೀಸನ್ ಗಳಿಂದ ಮ್ಯಾಕ್ಸ್ ವೆಲ್ ಮಂಕಾಗಿದ್ದಾರೆ. ಆದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮ್ಯಾಕ್ಸ್ ವೆಲ್ ಅವರ ಮೇಲೆ ನಂಬಿಕೆ ಇಟ್ಟು ಖರೀದಿ ಮಾಡಿದೆ. ಇನ್ನು ಆರ್ ಸಿಬಿ ತಮ್ಮನ್ನು ಖರೀದಿ ಮಾಡಿದ ಬೆನ್ನಲ್ಲೇ ಟ್ವಿಟ್ಟರ್ ಮುಖಾಂತರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಆರ್ ಸಿಬಿ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

 

ಆರ್ ಸಿಬಿ ತಂಡದಲ್ಲಿ ಆಡಲು ಕಾಯುತ್ತಿದ್ದೇನೆ , ಈ ಬಾರಿ ಆರ್ ಸಿಬಿ ತಂಡ ಕಪ್ ಎತ್ತಲು ನನ್ನಿಂದ ಏನು ಸಹಾಯ ಆಗುತ್ತೋ ಅದನ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article