ಸ್ವಚ್ಛಭಾರತಕ್ಕೆ ಕಾಸು ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಮಂಡಿಸಿದ್ದ ಕೃಷಿ ಸೆಸ್ ನಾಳೆಯಿಂದ ಜಾರಿಗೆ ಬರಲಿದೆ. ಅರುಣ್ ಜೇಟ್ಲಿ ಕಳೆದ ಹಣಕಾಸು ಬಜೆಟ್ಟಿನಲ್ಲಿ ಪ್ರಸ್ತಾಪಿಸಿದಂತೆ ಶೇಕಡಾ 0.50 ಕೃಷಿಕಲ್ಯಾಣ ಸೆಸ್ ಜಾರಿಯಾಗುತ್ತಿದೆ. ಒಟ್ಟಾರೆ ಸೇವಾತೆರಿಗೆ ಶೇಕಡಾ 14.5 ರಿಂದ ಶೇಕಡಾ 15ಕ್ಕೆ ಏರಿಕೆಯಾಗಲಿದೆ.
ಇದರಿಂದ ಹಾಸ್ಪಿಟಲ್, ಹೋಟೆಲ್, ಮೊಬೈಲ್ ಫೋನ್, ವಿಮಾನ, ರೈಲು ಪಯಣ, ಏರ್‍ಪೋರ್ಟ್ ಸೇವೆ, ಅಂತರ್ಜಾಲ, ಆರ್ಕಿಟೆಕ್ಟ್ ಸೇವೆ, ಎಟಿಎಂ ಬಳಕೆ, ಹೂಡಿಕೆ ಮತ್ತು ಉಳಿತಾಯ, ಹವಾನಿಯಂತ್ರಣ, ಜಾಹೀರಾತು ಏಜನ್ಸಿ, ಮನೆ ನಿರ್ಮಾಣ, ಹರಾಜು, ಕ್ರೆಡಿಟ್, ಡೆಬಿಟ್ ಕಾರ್ಡ್, ಸರಕು ಸಾಗಣೆ, ಐಟಿ ಸಾಫ್ಟ್‍ವೇರ್ ಸೇರಿದಂತೆ ಒಟ್ಟು 120ಕ್ಕೂ ಹೆಚ್ಚು ದೈನಂದಿನ ಸೇವೆಗಳು ತುಟ್ಟಿಯಾಗಲಿದೆ. ಅತ್ತ ಭಾರತವೂ ಕ್ಲೀನ್ ಆಗುತ್ತಿಲ್ಲ, ಆ ನೆಪದಲ್ಲಿ ಸರ್ಕಾರ ಜನಸಾಮಾನ್ಯರ ದುಡ್ಡಿಗಾಗಿ ಹಗಲುದರೋಡೆಗಿಳಿದಿರುವುದು ವಿಪರ್ಯಾಸವೇ ಸರಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಜನರ ತಲೆ ಮೇಲಿಂದ ಆ ಹೊರೆಯನ್ನು ಇಳಿಸದ ಸರ್ಕಾರ ಸ್ವಚ್ಛಭಾರತಕ್ಕಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿಹಾಕುತ್ತಿರುವುದು- ಇದು ಯಾವ ಸೀಮೆಯ ಅಚ್ಛೇದಿನ್ ಎನ್ನುವಂತಾಗಿದೆ.
- ರಾ ಚಿಂತನ್
POPULAR STORIES :
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!