No menu items!
9.3 C
Munich
Wednesday, April 29, 2026

ಸೆಂಚುರಿ ನಂತರ ಕೆಎಲ್ ರಾಹುಲ್ ಕಿವಿಮುಚ್ಚಿ ನಿಲ್ಲುವುದ್ಯಾಕೆ ಗೊತ್ತಾ?

Must read

ಪ್ರತಿ ಬಾರಿ ಸೆಂಚುರಿ ಬಾರಿಸಿದ ನಂತರ ಕನ್ನಡಿಗ ಕೆಎಲ್ ರಾಹುಲ್ ಅವರು ವಿಭಿನ್ನವಾಗಿ ಸಂಭ್ರಮಾಚರಣೆಯನ್ನು ಮಾಡುತ್ತಾರೆ. ಸೆಂಚುರಿ ಬಾರಿಸಿದ ಬಳಿಕ 2ಕಿವಿಗಳಿಗೂ ಕೈನಿಂದ ಮುಚ್ಚಿಕೊಂಡು ಕಣ್ಣುಮುಚ್ಚಿ ನಿಲ್ಲುತ್ತಾರೆ. ಕೆ ಎಲ್ ರಾಹುಲ್ ಅವರು ಈ ರೀತಿ ಭಿನ್ನವಾಗಿ ತಮ್ಮ ಸೆಂಚುರಿಯನ್ನು ಸಂಭ್ರಮಿಸುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು.

 

 

ಇದೀಗ ಆ ಎಲ್ಲಾ ಪ್ರಶ್ನೆಗಳಿಗೆ ಕೆಎಲ್ ರಾಹುಲ್ ಅವರೇ ಸ್ವತಃ ಉತ್ತರ ನೀಡಿದ್ದು ತಾವು ಕಿವಿ ಮತ್ತು ಕಣ್ಣು ಮುಚ್ಚಿ ನಿಂತು ಸೆಂಚುರಿ ಸಂಭ್ರಮಾಚರಣೆ ಮಾಡುವುದು ಯಾಕೆ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಕಾಲನ್ನು ಎಳೆಯುವವರು , ಟೀಕೆ ಮಾಡುವವರು ಮತ್ತು ತಮ್ಮ ಬಗ್ಗೆ ಮಾತನಾಡುವವರ ಮಾತಿಗೆ ಟೀಕೆಗಳಿಗೆ ಕಿವಿಗೊಡುವುದಿಲ್ಲ ಮತ್ತು ಅದನ್ನು ನೋಡುವುದಿಲ್ಲ ನನ್ನ ಪಾಡಿಗೆ ನಾನು ಶಾಂತಿಯಿಂದ ಇರುತ್ತೇನೆ ಎಂಬುದರ ಸಂಕೇತವಾಗಿ ಕೆ ಎಲ್ ರಾಹುಲ್ ಅವರು ಸೆಂಚುರಿ ಬಾರಿಸಿದ ಬಳಿಕ ಈ ರೀತಿ ಕಣ್ಣು ಮತ್ತು ಕಿವಿಯನ್ನು ಮುಚ್ಚಿ ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ.

 

 

ಹೀಗೆ ಸೆಂಚುರಿಯ ಮೂಲಕ ಉತ್ತರವನ್ನು ನೀಡಿ ತದನಂತರ ತಮ್ಮ ಮೇಲೆ ಮಾಡಲಾಗಿದ್ದ ಟೀಕೆಗಳನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂಬುದನ್ನು ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಳ್ಳುವುದರ ಮೂಲಕ ಕೆಎಲ್ ರಾಹುಲ್ ವ್ಯಕ್ತಪಡಿಸುತ್ತಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article