ಮುಖ್ಯ ಚಿತ್ರಮಂದಿರದಿಂದ ರಾಬರ್ಟ್ ಎತ್ತಂಗಡಿ

Must read

ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆಯಾಗಿ ಕೇವಲ 25 ದಿನ ಕಳೆದಿವೆ. ಇಷ್ಟಕ್ಕೆ ರಾಬರ್ಟ್ ಚಿತ್ರವನ್ನು ಮುಖ್ಯ ಚಿತ್ರಮಂದಿರದಿಂದ ತೆರವುಗೊಳಿಸಲಾಗುತ್ತಿದೆ. ಹೌದು ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಬಹುಬೇಗನೆ ಮುಖ್ಯ ಚಿತ್ರಮಂದಿರದಿಂದ ತೆರೆಯಲಾಗುತ್ತಿದೆ.

 

 

ಇದೇ ತಿಂಗಳ 9ರಂದು ತೆಲುಗಿನ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಚಿತ್ರ ತೆರೆಕಾಣಲಿದೆ. ಹೀಗಾಗಿ ರಾಬರ್ಟ್ ಚಿತ್ರವನ್ನ ತೆಗೆದು ತೆಲುಗಿನ ವಕೀಲ್ ಸಾಬ್ ಚಿತ್ರವನ್ನು ಮುಖ್ಯ ಚಿತ್ರಮಂದಿರವಾದ ಸಂತೋಷ್ ನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

 

 

 

ಈ ಸುದ್ದಿ ತಿಳಿದ ದರ್ಶನ್ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದೊಳ್ಳೆ ಚಿತ್ರವನ್ನು ಇಷ್ಟು ಬೇಗ ಚಿತ್ರಮಂದಿರದಿಂದ ತೆಗೆಯುವುದು ಒಳ್ಳೆಯದಲ್ಲ ದಯವಿಟ್ಟು ಚಿತ್ರಮಂದಿರದಲ್ಲಿ ಸಿನಿಮಾವನ್ನು ಓಡಿಸಿ ಎಂದು ದರ್ಶನ್ ಅಭಿಮಾನಿಗಳು ನಿರ್ಮಾಪಕರಲ್ಲಿ ಬೇಡಿಕೆ ಇಟ್ಟಿದ್ದಾರೆ.

- Advertisement -spot_img

More articles

- Advertisement -spot_img

Latest article