ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!

Date:

ಹೌದು 2005ರಲ್ಲಿ ಮತ್ತೊಮ್ಮೆ ಶಿವಣ್ಣ ಲಾಂಗ್ ಹಿಡಿದು ರಾರಾಜಿಸಿದ್ದ ಸಿನಿಮಾವಾದು. ಇಂತದೊಂದು ಚಿತ್ರವನ್ನ ನೀಡಿದ್ದು ನಿರ್ದೇಶಕ ಪ್ರೇಮ್.. ಈಗ ಅಂತಹದ್ದೆ ಸಿನಿಮಾವನ್ನ ರೆಡಿ ಮಾಡಲಿದ್ಧಾರೆ ಈ ಡೈರೆಕ್ಟರ್. ಈ ಹಿಂದೆ ದೊಡ್ಡ ಮಟ್ಟಿಗೆ ಸುದ್ದಿಯಾದ ಕಲಿ ಸಿನಿಮಾ ಈಗ ನಿಂತು ಹೋಗಿದೆ. ಹಂಗಂತ ನೀವು ಈ ಕರುನಾಡ ಚಕ್ರವರ್ತಿಯನ್ನ ಹಾಗೆ ಅಭಿನಯನ ಚಕ್ರವರ್ತಿಯನ್ನ ಒಟ್ಟಿಗೆ ನೋಡೊ ಚಾನ್ಸ್ ತಪ್ಪಿತಲ್ಲ ಅಂತಾ ಬೇಸರಗೊಳ್ಳುವ ಅವಶ್ಯಕತೆಯಿಲ್ಲ. ಯಾಕಂದ್ರೆ ಕಲಿಯೊಂದು ಐತಿಹಾಸಿಕ ಚಿತ್ರವಾಗಿದ್ದು ಈ ಇಬ್ಬರನ್ನ ಈ ಗೆಟಪ್‍ನಲ್ಲಿ ನೋಡೊ ಅಭಿಮಾನಿಗೆ ಸಮಾಧಾನವಾಗದೆ ಇರಬಹುದು ಅನ್ನೋ ಕಾರಣಕ್ಕೆ ಇಡೀ ಕಲಿ ಚಿತ್ರದ ಪ್ಲಾನ್ ಈಗ ಉಲ್ಟಾ ಆಗಿದೆ. ಈಗ ಈ ಇಬ್ಬರ ಕಾಂಬಿನೇಷನ್‍ನಲ್ಲೆ ಪ್ರೇಮ್ ನಿರ್ದೇಶನದಲ್ಲೆ ಪಕ್ಕ ಮಾಸ್ ಹಾಗೆ ಕ್ಲಾಸ್ ಆಡಿಯನ್ಸ್ ಗೆ ಇಷ್ಟವಾಗುವ ಸಿನಿಮಾ ಸಿದ್ದವಾಗಲಿದೆ. ಇದನ್ನ ನಿರ್ಮಾಣ ಮಾಡಲಿದ್ಧಾರೆ ನಿರ್ಮಾಪಕರಾದ ಸಿ.ಆರ್.ಮನೋಹರ್ ಅಂದಹಾಗೆ ಈ ಚಿತ್ರ ಜೋಗಿಯ ಹಾಗೆ ಇರಲಿದೆಯಂತೆ. ಇನ್ನೂ ಈ ಸಿನಿಮಾ ಕೂಡ ಕನ್ನಡ ಮಾತ್ರವಲ್ಲದೆ ತಮಿಳು ಹಾಗೆ ತೆಲುಗಿನಲ್ಲೂ ನಿರ್ಮಾಣವಾಗಲಿದೆ. ಅಂದಹಾಗೆ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ್ ಡಾ.ಶಿವರಾಜ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಈ ಹೊಸ ಸಿನಿಮಾ ಮುಹೂರ್ತ ವರಮಹಾಲಕ್ಷ್ಮೀ ಹಬ್ಬಕ್ಕೆ ಮುಹೂರ್ತ ಕಾರ್ಯ ನೆರವೇರಲಿದೆ. ಸದ್ಯಕ್ಕೆ ಎಲ್ಲವೂ ಮಾತುಕತೆಯ ಹಂತದಲ್ಲಿದ್ದು, ಈ ಬಿಗ್ ಸ್ಟಾರ್‍ಗಳ ಕಾಂಬಿನೇಷನ್‍ನ ಮೆಗಾ ಮೂವೀಗೆ ಮತ್ತೆ ಜೀವ ಬಂದಂತಾಗಿದೆ.

  • ಅಶೋಕ್ ರಾಜ್

POPULAR  STORIES :

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...