`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!

Date:

ದಿಲ್ಕಿ ಒಳಗೆ ಲವ್ಗೆ ಬುಲೆಟ್‍ನ ಇಳಿಸಿದ್ದ ನಿಧಿ ಸುಬ್ಬಯ್ಯ ಆ ಮೇಲೆ ಬಾಲಿವುಡ್ ಅಂತಾ ಅಲ್ಲಿಗೆ ಹೋಗ್ಬಿಟ್ರು. ಬಟ್ ಇಲ್ಲಿರೋ ಈಕೆಯ ಅಭಿಮಾನಗಳು ಮಾತ್ರ ನಿಧಿಯನ್ನ ಕಾಯೋ ಹಾಗೆ ಈ ನಿಧಿಯನ್ನ ಕಾಯ್ತಿದ್ರು. ಇದು ನಿರ್ದೇಶಕರಾದ ಶಿವು ಜಮಖಂಡಿ ಗಮನಕ್ಕೆ ಬಂದಿರ್ಬೇಕು.. ಹೀಗಾಗೆ ನಿಧಿಯನ್ನ ಹುಡುಕಿಕೊಂಡು ಮತ್ತೆ ಕನ್ನಡಕ್ಕೆ ಕರೆತಂದಿದ್ದಾರೆ. ಹೌದು ನಾವಿಲ್ಲಿ ಹೇಳ್ತಿರೋದು ನಿಧಿ ಸುಬ್ಬಯ್ಯ ಹಾಗೆ ವಿಜಯ್‍ರಾಘವೇಂದ್ರ ಅಭಿಯದ ಇದೇ ಜುಲೈ 1ಕ್ಕೆ ರಿಲೀಸ್‍ಗೆ ರೆಡಿಯಾಗಿರೋ `ನನ್ನ ನಿನ್ನ ಪ್ರೇಮಕಥೆ’ ಸಿನಿಮಾದ ಬಗ್ಗೆ. ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಲೀಡ್‍ನಲ್ಲಿದ್ದ ಅಣ್ಣಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಈಕೆ ಆನಂತರ ಅಕ್ಕಬಾಂಡ್‍ನ ಹಾಗೆ ಬಾಲಿವುಡ್‍ಗೆ ಹೋಗೆ ಬಿಟ್ರು. ಅಲ್ಲಿಂದ ಇಲ್ಲಿಗೆ ಈಕೆಯನ್ನ ಕರೆತರೋಕೆ ಬರೊಬ್ಬರಿ ನಾಲ್ಕು ವರ್ಷಗಳು ಬೇಕಾಯ್ತು ಅಂದ್ರೆ ನೀವ್ ನಂಬ್ಲೇಬೇಕು.. ಹಂಗಂತ ಇಲ್ಲಿನ ಸಿನಿಮಾ ಮಂದಿ ಈಕೆಯನ್ನ ಮರೆತು ಬಿಟ್ಟಿದ್ರು ಅಂತ ಅಲ್ಲ. ಕೇಳಿರೊ ಹಲವಾರು ಸ್ಕ್ರೀಪ್ಟ್ ಗಳಲ್ಲಿ ಒಂದೊಳ್ಳೆ ಸ್ಕ್ರೀಪ್ಟ್ ಗೆ ನಾಯಕಿಯಾಗೋಕೆ ಕಾಯ್ತಿದ್ಲು ಈಚೆಲುವೆ. ಆಗ ಸಿಕ್ಕಿದ್ದೆ ಈ `ನನ್ನ ನಿನ್ನ ಪ್ರೇಮಕಥೆ’ ಚಿತ್ರ.

nidhi

ಹೆಸರಿಗೆ ತಕ್ಕಹಾಗೆ ಇದೊಂದು ರೊಮ್ಯಾಂಟಿಕ್ ಸಿನಿಮಾವಂತೆ. ಜೊತೆಗೆ ಖಡಕ್ ಫೈಟು ಕಾಮಿಡಿ ಎಲ್ಲವೂ ಸೇರಿ ರೆಡಿಯಾಗಿರೋ 100% ಎಂಟ್ರಟೈನರ್ ಮೂವೀ ಅನ್ನೋದು ಸಿನಿಮಾತಂಡದ ಅನಿಸಿಕೆ. ಈ ಹಿಂದೆಯೇ ಚಿತ್ರದ ಹಾಡುಗಳನ್ನ ಅದ್ದೂರಿಯಾಗಿ ರಿಲೀಸ್ ಮಾಡಿದೆ ಚಿತ್ರತಂಡ. ಇನ್ನೂ ಎ.ಬಿ.ಸಿನಿಮಾ ಕ್ರಿಯೇಷನ್ಸ್ ಬ್ಯಾನರ್‍ನಡಿ ಸಿದ್ದವಾಗಿರೋ ಈ ಪ್ರೇಮಕಥೆಯನ್ನ ಅಷ್ಟೇ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ಧಾರೆ ಆನಂದ ಸಿ.ನ್ಯಾಮಗೌಡ. ವಿಜಯ್ ರಾಘವೇಂದ್ರ ನಿಧಿ ಸುಬ್ಬಯ್ಯ ಪೇರ್ ಸಿನಿಮಾದ ಒಂದು ಹೈಲೆಟಾದ್ರೆ, ಉಗ್ರಂ ತಿಲಕ್, ಚಿಕ್ಕಣ್ಣ, ಗುರುರಾಜ್ ಹೊಸಕೋಟೆ, ರಘುಭಟ್ ಸೇರಿದಂತೆ ಹಲವರಿರೋದು ಚಿತ್ರಕ್ಕೆ ಪ್ಲೇಸ್ ಪಾಯಿಂಟ್ ಆಗೋ ಸಾಧ್ಯತೆಗಳಿವೆ.

nnpk

ರೆಡಿಯಾಗ್ಬಿಡಿ ಜುಲೈ 1ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬರಲಿದೆ.

  • ಅಶೋಕ್ ರಾಜ್

POPULAR  STORIES :

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...