ಗೋವಾದ ಪಣಜಿಯಲ್ಲಿ ಕ್ರಿಕೆಟ್ ಸಂಸ್ಥೆಯ 3 ಪ್ರಮುಖ ಅಧಿಕಾರಿಗಳನ್ನು ಸಂಸ್ಥೆಯ ಹಣವನ್ನು ದುರುಪಯೋಗಪಡಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧದ ಕಾಯ್ದೆ ಅನ್ವಯ ಬಂಧಿಸಲಾಗಿದೆ. ಇವರು ಸುಮಾರು 3 ಕೋಟಿಗೂ ಹೆಚ್ಚಿನ ಹಣವನ್ನು ದುರುಪಯೊಗಪಡಿಸಿದ್ದರು. ಇವರಲ್ಲಿ ಸಂಸ್ಥೆಯ ಅಧ್ಯಕ್ಷ ಚೇತನ್ ದೇಸಾಯ್,ಕಾರ್ಯದರ್ಶಿ ವಿನೋದ್ ಪಡ್ಕೆ,ಮತ್ತು ಖಜಾಂಚಿ ಅಕ್ಬರ್ ಮುಲ್ಲ ಆರೋಪಿಗಳು.
ಜೂನ್ 4 ರಂದು , ಗೋವ ಆರ್ಥಿಕ ಅಪರಾಧದ ವಿಭಾಗವು ಈ ಮೂವರ ವಿರುದ್ದ ಮೊದಲ ಎಫ್.ಐ.ಆರ್ ನ್ನು ದಾಖಲಿಸಿತ್ತು. ಇದರಲ್ಲಿ ಈ ಮೂವರು ಆರೋಪಿಗಳಾದ ದೇಸಾಯ್, ಪಡ್ಕೆ ಹಾಗೂ ಮುಲ್ಲ ಎಂಬವರು ಹಸ್ತಾಕ್ಷರವನ್ನು ನಕಲು ಮಾಡಿ ಬ್ಯಾಂಕ್ ಖಾತೆಯನ್ನು ತೆರೆದು ಕ್ರಿಕೆಟ್ ಸಂಸ್ಥೆಯ ಹೆಸರಲ್ಲಿರುವ 3.13 ಕೋಟಿ ರೂವನ್ನು ಸ್ವಾಹಾ ಮಾಡಿದ್ದರು.
ಇವರು ಅಕ್ಟೋಬರ್23,2006ಹಾಗೂ ಮೇ 23,2008,ರಂದು ಗೋವಾ ಕ್ರಿಕೆಟ್ ಸಂಸ್ಥೆಯು ದಯಾನಂದ್ ನರ್ವೆಕರ ನಾಯಕತ್ವದಲ್ಲಿದ್ದಾಗ ದೇಸಾಯ್ ಕಾರ್ಯದರ್ಶಿ ಹಾಗೂ ಪಡ್ಕೆ ಖಜಾಂಚಿಯಾಗಿದ್ದರು.ಆಗ ಇವರು ಬಿ.ಸಿ.ಸಿ.ಐ. ಕೊಟ್ಟ 2.87 ಕೋಟಿ ಮೊತ್ತದ ಚೆಕ್ ನ್ನು ನಗದು ಮಾಡಿಸಿಕೊಂಡಿದ್ದಲ್ಲದೆ, ಹಸ್ತಾಕ್ಷರವನ್ನು ನಕಲು ಮಾಡಿಕೊಂಡು ಫೆಡರಲ್ ಬ್ಯಾಂಕ್ ನಿಂದ 26 ಲಕ್ಷ ದ ಮೊತ್ತವನ್ನು ಹಾಕೋ ಎಂಟರ್ ಪ್ರೈಸಸ್ ಗೆ ಸ್ಪೋರ್ಟ್ಶ್ ಸಾಮಾಗ್ರಿಗಳನ್ನು ತರಿಸಿದ್ದಕ್ಕೆ ನೀಡಲೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಗದು ಮಾಡಿಕೊಂಡರು.
ಇವೆಲ್ಲ ದೂರುಗಳನ್ನು ಪರಿಶೀಲಿಸಿ ,ಪೋಲಿಸ್ ಅಧಿಕಾರಿಗಳು ಈ ಮೂವರ ಮೇಲೆ ಇಂಡಿಯನ್ ಪೆನಲ್ ಕೋಡ್ ಸೆಕ್ಷನ್ 408,409 (ವಿಶ್ವಾಸ ವಂಚನೆ),419(ಮೋಸದ ನಟನೆ), 463, 464, 468(ನಕಲು ಹಸ್ತಾಕ್ಷರ),471(ಮೋಸ), 420(ವಂಚನೆ) ಮತ್ತು 120ಬಿ (ಕ್ರಿಮಿನಲ್ ಪಿತೂರಿ)ಯನ್ವಯ ಕೇಸನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
- ಸ್ವರ್ಣಲತ ಭಟ್
POPULAR STORIES :
ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!
`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!
ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!
ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?
ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!