ನಂದಿ ಬೆಟ್ಟ ಪ್ರವಾಸಿಗರಿಗೆ ಗುಡ್ ನ್ಯೂಸ್

Date:

ಆಗಸ್ಟ್ 24ರ ರಾತ್ರಿ ನಂದಿ ಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿ, ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಅಂದಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಆಗಿತ್ತು.

ಆದರೆ, ನಂದಿ ಬೆಟ್ಟದ ರಸ್ತೆ ಮಾರ್ಗ ಬಂದ್ ಆಗಿ ಪ್ರವಾಸಿಗರ ಪಾಲಿಗೆ ನಂದಿ ಬೆಟ್ಟ ದೂರವಾಗಿತ್ತು. ಆದರೆ, ಈಗ ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಇನ್ನೇನು ಇನ್ನೊಂದು ವಾರದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಆಗಸ್ಟ್ 24ರ ರಾತ್ರಿ ನಂದಿ ಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿ, ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಅಂದಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಆಗಿತ್ತು. ಇದರಿಂದ ರಾಜ್ಯ ಸರ್ಕಾರ 80 ಲಕ್ಷ ರೂ. ವೆಚ್ಚ ಮಾಡಿ, ಕೊಚ್ಚಿ ಹೋದ ರಸ್ತೆಯ ಮರು ನಿರ್ಮಾಣ ಕಾರ್ಯ ಮಾಡಿದೆ. ಇನ್ನೇನು ಬಹುತೇಕ ರಸ್ತೆ ಕಾಮಗಾರಿ ಮುಗಿದಿದ್ದು, ತಡೆಗೋಡೆಗಳ ನಿರ್ಮಾಣ ಕಾರ್ಯ ಮಾತ್ರ ಬಾಕಿ ಇದೆ. ಎಲ್ಲಾ ಅಂದುಕೊಂಡಂತೆ ಆದರೆ, ಇನ್ನೊಂದು ವಾರದಲ್ಲಿ ರಸ್ತೆ ಉದ್ಘಾಟನೆ ಆಗಲಿದೆ.

80 ಲಕ್ಷ ರೂ. ವೆಚ್ಚದಲ್ಲಿ, 40 ಮೀಟರ್ ಉದ್ದದ ರಸ್ತೆಗೆ, ಭದ್ರವಾದ ಸಿಮೆಂಟ್ ಕಾಂಕ್ರೀಟ್ ಸೇತುವೆ ನಿರ್ಮಾಣ ಮಾಡಲಾಗಿದ್ದು, ಬೆಟ್ಟದಿಂದ ಬರುವ ನೀರು ಸರಾಗವಾಗಿ ಹರಿದು ಹೋಗಲು ಬೃಹತ್ ಗಾತ್ರದ ಪೈಪ್​ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಷ್ಟೇ ಮಳೆಯಾದರೂ ರಸ್ತೆಗೆ ತೊಂದರೆಯಾಗದ ಹಾಗೆ ಸೇತುವೆ ಮೇಲೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ.

ಇದೀಗ ಬಹುತೇಕ ರಸ್ತೆ ಕಾಮಗಾರಿ ಮುಕ್ತಾಯವಾಗಿದ್ದು, ಅಧಿಕೃತವಾಗಿ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ, ಶೀಘ್ರದಲ್ಲಿ ನಂದಿ ಗಿರಿಧಾಮ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ.

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...