No menu items!
20.5 C
Munich
Saturday, June 13, 2026

ಏಕಾಏಕಿ ಹೆಚ್ಚಿದ ನದಿ ನೀರು; ಮಧ್ಯದಲ್ಲಿಯೇ ಸಿಲುಕಿದ ವ್ಯಕ್ತಿ!

Must read

ಬಟ್ಟೆ ಒಗೆಯಲು ನದಿಗೆ ಹೋಗಿ,ನೀರಿನ ಮಧ್ಯೆ ಸಿಕ್ಕಿಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರಿನ ಶಿಂಷಾನದಿ ಬಳಿ ಘಟನೆ ನಡೆದಿದೆ. ಶಿವಪುರ – ಸೋಮನಹಳ್ಳಿ ಮಧ್ಯದಲ್ಲಿ ಹರಿಯುವ ಶಿಂಷಾ ನದಿ ನೀರಿನ ಪ್ರಮಾಣ ಕಡಿಮೆ ಇದ್ದ ಹಿನ್ನಲೆಯಲ್ಲಿ ವ್ಯಕ್ತಿ ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಎನ್ನಲಾಗಿದೆ.ಇದ್ದಕ್ಕಿದ್ದಂತೆ ನದಿ ನೀರು ಹೆಚ್ಚಾಗಿ ಹೊರಬರಲು ಸಾಧ್ಯವಾಗಲಿಲ್ಲ.

ತಮಿಳುನಾಡಿನ ಮೂಲದ ಏಳುಮಲೈ (65) ನದಿಯಲ್ಲಿ ಸಿಲುಕಿದ್ದ ವ್ಯಕ್ತಿ. ಕೋವಿಡ್ ಲಾಕ್ ಡೌನ್ ಸಂದರ್ಭದಿಂದ ಮದ್ದೂರಿನಲ್ಲೆ ಇದ್ದುಕೊಂಡು ಭಿಕ್ಷೆ ನಡೆಸುತ್ತಿದ್ದ ವ್ಯಕ್ತಿ ಏಳುಮಲೈ ನನ್ನು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ನದಿಗೆ ಇಳಿದು ವ್ಯಕ್ತಿಯನ್ನ ರಕ್ಷಿಸಲಾಗಿದೆ. ರಕ್ಷಣಾ ವ್ಯವಸ್ಥೆ ವೀಕ್ಷಿಸಲು ಜನರು ಸಾಲುಗಟ್ಟಿ ನಿಂತಿದ್ದರಿಂದ 1 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿ ಪಿ‌ ಐ ಹರೀಶ್ ನೇತೃತ್ವದ ಪೋಲಿಸ್ ತಂಡ ಕಾರ್ಯಾಚರಣೆ ನಡೆಸಿತ್ತು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article