No menu items!
12.4 C
Munich
Wednesday, April 29, 2026

ವಿವಾದದಲ್ಲಿರುವ ಹಂಸಲೇಖ ಮನೆಗೆ ನಟ ಚೇತನ್ ಭೇಟಿ

Must read

ಪೇಜಾವರ ಶ್ರೀ ಕುರಿತು ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಳಿಕ ಕ್ಷಮೆಯಾಚಿಸಿದ್ದರೂ ಅವರ ವಿರುದ್ಧ ಕೆಲವೆಡೆ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು, ಇದೀಗ ನಟ ಚೇತನ್ ಅಹಿಂಸಾ ಹಂಸಲೇಖ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವಟರ್ ನಲ್ಲಿ ಮಾಹಿತಿ ನೀಡಿರುವ ಚೇತನ್, ಇವತ್ತು ಕನ್ನಡ ಚಿತ್ರರಂಗದ ದಿಗ್ಗಜ ಶ್ರೀ ಹಂಸಲೇಖ ಅವರನ್ನು ಅವರ ಮನೆಯಲ್ಲಿ ಭೇಟಿಯಾದೆನು.

”ಹಂಸಲೇಖ ಅವರು ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆ ಮತ್ತು ಯುವ ಜನರ ಸಬಲೀಕರಣದ ಬಗ್ಗೆ ಬಹಳ ಕಳಕಳಿಯಿಂದ ಮಾತನಾಡಿದರು. ಸಮತೆಯ, ಜಾಗೃತ ಕರ್ನಾಟಕಕ್ಕಾಗಿ ನಿಮ್ಮ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ” ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಗುಂಪುಗಳು ಹಂಸಲೇಖ ಅವರು ಕ್ಷಮೆಯಾಚಿಸಿ ಒಂದು ವಾರವಾದ ಮೇಲೆಯೂ ಕೂಡ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಲೇ ಇವೆ’ ಎಂಬುದಾಗಿ ಇತ್ತೀಚೆಗೆ ನಟ ಚೇತನ್ ದೂರಿದ್ದರು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article