No menu items!
11.8 C
Munich
Friday, May 8, 2026

ಒಂದು ರವಿಕೆ ವಿಷಯಕ್ಕೆ ಬಿತ್ತು ಪತ್ನಿ ಹೆಣ!

Must read

ಆಸ್ತಿ-ಅಂತಸ್ತಿಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ, ಸಾಲಬಾಧೆ ಈ ಎಲ್ಲ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳನ್ನು ಕೇಳಿದ್ದೇವೆ. ಆದರೆ, ಪತಿ ತನ್ನ ಇಚ್ಚೆಯಂತೆ ರವಿಕೆ ಹೊಲೆದುಕೊಟ್ಟಿಲ್ಲ ಎಂದು ಬೇಸರಗೊಂಡ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೈದರಾಬಾದ್‍ನಲ್ಲಿ ನಡೆದಿದೆ.

ಶ್ರೀನಿವಾಸ್ ಎಂಬುವವರ ಪತ್ನಿ ವಿಜಯಲಕ್ಷ್ಮಿ (36) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಈ ದಂಪತಿ ಹೈದರಾಬಾದ್‍ನ ಅಂಬರ್‍ಪೇಟೆಯಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರ ಕೂಡ ಮಾಡುತ್ತಿದ್ದರು.

ಶನಿವಾರ ತಮ್ಮ ಪತ್ನಿ ವಿಜಯಲಕ್ಷ್ಮಿಗೆ ರವಿಕೆ ಹೊಲೆದುಕೊಟ್ಟಿದ್ದಾರೆ. ಆದರೆ, ಆಕೆಗೆ ಈ ರವಿಕೆ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಪ್ರತಿಕ್ರಿಯಿಸಿಲ್ಲ.

ಪತಿ ಶ್ರೀನಿವಾಸ್ ಬಾಗಿಲು ಬಡಿದು ನೋಡಿದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಶ್ರೀನಿವಾಸ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಂಬರ್‍ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article