ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿಗೆ ಶಾಕ್!

Date:

ತಮಿಳು ನಟ ವಿಜಯ್​ ವಿಶ್ವ ಅಲಿಯಾಸ್​ ಅಭಿ ಶರವಣನ್​ ವಿರುದ್ಧ ಪತ್ನಿ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ತೀರ್ಪು ನೀಡಿರುವ ಚೆನ್ನೈ ನ್ಯಾಯಾಲಯ ನಟ ವಿಜಯ್​ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿದೆ.

ಅಭಿ ಸರವಣನ್​ ಮತ್ತು ಆದಿತಿ ಮೆನನ್​ ಅಲಿಯಾನ್​ ಮಿರ್ನಾ ಮೆನನ್​ 2016ರಲ್ಲಿ ತೆರೆಕಂಡ ಪಟ್ಟದಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

ಇದೇ ಚಿತ್ರದಲ್ಲಿ ಇಬ್ಬರ ನಡುವೆ ನಿಜವಾಗಿ ಪ್ರೇಮಾಂಕುರವಾಗಿತ್ತು. ಅಲ್ಲದೆ, ಇಬ್ಬರು ಮದುವೆ ಕೂಡ ಆಗಿದ್ದರು ಎಂದು ಹೇಳಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಆದಿತಿ ಮೆನನ್​ ಅಭಿ ಸರವಣನ್​ ವಿರುದ್ಧ ದೂರು ದಾಖಲಿಸಿ, ಮೂರು ವರ್ಷಗಳ ಲಿವಿಂಗ್​ ರಿಲೇಶನ್​ಶಿಪ್​ ಬಳಿಕ ನಾವಿಬ್ಬರು ಮದುವೆ ಆಗಿರಲಿಲ್ಲ. ಅಲ್ಲದೆ, ಅಭಿಗೆ ಅನೇಕ ಮಹಿಳೆಯರ ಜತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಳು.

ಈ ಪ್ರಕರಣ ಸುಮಾರು ಮೂರು ವರ್ಷದಿಂದ ಕೋರ್ಟ್​ನಲ್ಲಿತ್ತು. ಇದೀಗ ತೀರ್ಪು ನೀಡಿರುವ ಕೋರ್ಟ್​, ಅಭಿ ಸರವಣನ್​ ಮೇಲಿರುವ ಪ್ರಕರಣವನ್ನು ವಜಾಗೊಳಿಸಿ, ಆರೋಪದಿಂದ ಮುಕ್ತಗೊಳಿಸಿದೆ. ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.

ತೀರ್ಪಿನ ಬಗ್ಗೆ ಮಾತನಾಡಿರುವ ಅಭಿ ಸರವಣನ್​, ಉತ್ತಮವಾದ ತೀರ್ಪನ್ನು ಪಡೆದುಕೊಂಡಿದ್ದೇನೆ. ನನ್ನ ಪತ್ನಿ ಆದಿತಿ ಮೆನನ್ ನನ್ನ ಜತೆ ವಾಸಿಸುವಂತೆ ನ್ಯಾಯಾಲಯ ಹೇಳಿದೆ. ಆದರೆ, ನನ್ನೊಂದಿಗೆ ಇರಬೇಕು ಅಂತಾ ನಾನೆಂದು ಆಕೆಯನ್ನು ಬಲವಂತ ಮಾಡುವುದಿಲ್ಲ. ಏಕೆಂದರೆ, ನನ್ನದು ನಿಜವಾದ ಪ್ರೀತಿ. ಒಂದು ವೇಳೆ ಆಕೆ ಮರಳಿ ಬಂದರೆ ನನ್ನಷ್ಟು ಖಷಿಪಡುವ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ ಬೆಂಗಳೂರು: 2026ರ...

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ ಔಟ್?

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ...

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ...

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:ಭಾರತ...