ಬಿಎಂಟಿಸಿ ನೌಕರರಿಗೆ ಬಿಗ್ ಶಾಕ್

Date:

ಬೆಂಗಳೂರು : ನಷ್ಟದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿ ಮೇಲೆತ್ತಲು ಆಡಳಿತ ಮಂಡಳಿ ಹೊಸ ಪ್ಲಾನ್ ರೆಡಿ ಮಾಡಿದೆ. ಹೊಸ ಪ್ಲಾನ್ ಪ್ರಕಾರ ಬಸ್​​ಗಳಲ್ಲಿ ಚಾಲಕ ಮಾತ್ರ ಇರಲಿದ್ದು, ನಿರ್ವಾಹಕ ಇರುವುದಿಲ್ಲ. ಮುಂದಿನ ದಿನಗಳಲ್ಲಿ ನಿರ್ವಾಹಕ ರಹಿತ ಸೇವೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ ಜೊತೆ ಜೊತೆಗೆ ಡ್ರೈವರ್​​ಗಳ ಕೊರತೆಯೂ ಕಾಡುತ್ತಿದೆ.

 

ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಕಂಡಕ್ಟರ್ ಪೋಸ್ಟ್​ಗಳನ್ನೇ ತೆಗೆದು ಹಾಕಲು ನಿಗಮ ಪ್ಲಾನ್ ಮಾಡಿದೆ. ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಆರಂಭವಾಗಿದೆ.

 

 

ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿ ಜಾರಿಗೆ ತಂದು ಟಿಕೆಟ್ ಕಲೆಕ್ಷನ್​​ ಸಂಪೂರ್ಣ ಡಿಜಿಟಲೈಸ್ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲ ಕಂಡಕ್ಟರ್​ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ

Share post:

Subscribe

spot_imgspot_img

Popular

More like this
Related

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ ಬೆಂಗಳೂರು: 2026ರ...

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ ಔಟ್?

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ...

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ...

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:ಭಾರತ...